ನವದೆಹಲಿ: ಇಂಗ್ಲೆಂಡ್‌ನ ಮಾಜಿ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್ ಅವರು ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಇತ್ತೀಚಿನ ಪ್ರದರ್ಶನಕ್ಕೆ ವಿರಾಟ್ ಗಿಂತ ಮುಖ್ಯವಾಗಿ ಕೋಚ್ ರವಿಶಾಸ್ತ್ರಿ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ ಕೆಲವು ತಿಂಗಳುಗಳಲ್ಲಿ ಭಾರತದ ಸಾಧನೆಯನ್ನು ಒಬ್ಬರು ವಿಶ್ಲೇಷಿಸಿದರೆ, ವಿರಾಟ್ ಕೊಹ್ಲಿಯವರಿಗಿಂತ ಹೆಚ್ಚಾಗಿ  ರವಿಶಾಸ್ತ್ರಿ (Ravi Shastri) ಎನ್ನಬಹುದು. ಇದು ಕನಿಷ್ಠ ಪಕ್ಷ ನನ್ನ ಭಾವನೆ.ಈ ಭಾರತೀಯ ಕ್ರಿಕೆಟ್ ತಂಡದಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದವರು ರವಿಶಾಸ್ತ್ರಿ"ಎಂದು ಪನೆಸರ್ ಹೇಳಿದರು.


ಇದನ್ನೂ ಓದಿ- Corona Vaccination ವಿಷಯದಲ್ಲಿ ದಾಖಲೆ ಬರೆದ ಭಾರತ


'ಅಡಿಲೇಡ್‌ನಲ್ಲಿ 36 ರನ್ ಗಳಿಗೆ ಪತನ ಕಂಡ ನಂತರ ಆಸ್ಟ್ರೇಲಿಯಾದಲ್ಲಿ ಅವರು ಸಾಧಿಸಿದ್ದು ದೊಡ್ಡ ಪವಾಡ.ವರ್ಚಸ್ವಿ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿ ನಡುವೆಯೂ ಅವರು ಸರಣಿಯನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೆ ಹಲವು ಆಟಗಾರರು ಗಾಯದಿಂದ ಸರಣಿ ಮಿಸ್ ಮಾಡಿಕೊಂಡಿದ್ದರೂ ಸಹ ಉತ್ತಮ ಪ್ರದರ್ಶನ ನೀಡಿದ್ದಾರೆ.ಆಸ್ಟ್ರೇಲಿಯಾದಲ್ಲಿ ಅವರದ್ದೇ ನೆಲದಲ್ಲಿ ಗೆಲುವು ಸಾಧಿಸಿರುವುದರಲ್ಲಿ ರವಿಶಾಸ್ತ್ರಿ ಪಾತ್ರ ಮಹತ್ತರವಾದದ್ದು ಎಂದು ಪನೆಸರ್ ತಿಳಿಸಿದರು.


ಇದನ್ನೂ ಓದಿ: ಕನ್ನಡಿಗ ಕೆ.ಎಲ್. ರಾಹುಲ್ ಅವರ ವೃತ್ತಿಜೀವನವನ್ನು ಹಾಳು ಮಾಡುತ್ತಿದ್ದಾರಾ ರವಿಶಾಸ್ತ್ರಿ?


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಡಬ್ಲ್ಯುಟಿಸಿ ಫೈನಲ್ ಜೂನ್ 18 ರಿಂದ ಸೌತಾಂಪ್ಟನ್ನಲ್ಲಿ ಪ್ರಾರಂಭವಾಗಲಿದೆ. ಫೈನಲ್ ಪಂದ್ಯವನ್ನು ಗೆಲ್ಲಲು ಎರಡೂ ತಂಡಗಳಿಗೂ ಅವಕಾಶವಿದೆ ಎಂದು ಪನೇಸರ್ ಅಭಿಪ್ರಾಯಪಟ್ಟಿದ್ದಾರೆ."ಭಾರತವು ಜಡೇಜಾ ಮತ್ತು ಅಶ್ವಿನ್ ಇಬ್ಬರನ್ನೂ ಆಡಿಸಬೇಕು. ಪ್ರಸ್ತುತ ಜಗತ್ತಿನಲ್ಲಿ ಈ ಇಬ್ಬರಿಗಿಂತ ಉತ್ತಮವಾದವರು ಯಾರೂ ಇಲ್ಲ. ಅವರು ಸಹಭಾಗಿತ್ವದಲ್ಲಿ ಬೌಲ್ ಮಾಡುತ್ತಾರೆ, ಪರಸ್ಪರರ ಆಟವನ್ನು ಅರ್ಥಮಾಡಿಕೊಳ್ಳುತ್ತಾರೆ 'ಎಂದು ಅವರು ಹೇಳಿದರು.


ಇದನ್ನೂ ಓದಿ: 'ಕುಟುಂಬಗಳನ್ನು ಅನುಮತಿಸದಿದ್ದರೆ ಭಾರತ ಆಸ್ಟ್ರೇಲಿಯಾ ಪ್ರವಾಸ ಮಾಡುವುದಿಲ್ಲ' ಎಂದಿದ್ದ ಈ ವ್ಯಕ್ತಿ..!


ಇದೇ ವೇಳೆ ಪನೆಸರ್ ಅವರನ್ನು ಡಬ್ಲ್ಯುಟಿಸಿ ಫೈನಲ್‌ಗಾಗಿ ಆಡುವ ತಮ್ಮ ಫೇವರೆಟ್ ಭಾರತೀಯ ತಂಡವನ್ನು ಆಯ್ಕೆ ಮಾಡಲು ಕೇಳಲಾಯಿತು. ಇದಕ್ಕೆ ಅವರು ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ಕೊಹ್ಲಿ, ಅಜಿಂಕ್ಯ ರಹಾನೆ, ರಿಷಭ್ ಪಂತ್, ಜಡೇಜಾ, ಅಶ್ವಿನ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ,ಶುಬ್ಮನ್ ಗಿಲ್ ಅವರನ್ನು  ಹೆಸರಿಸಿದರು.


ಭಾರತೀಯ ಕ್ರಿಕೆಟ್ ತಂಡವು ಜೂನ್ 2 ರಂದು ಇಂಗ್ಲೆಂಡ್‌ಗೆ ತೆರಳಲಿದ್ದು, ಅದಕ್ಕೆ ತರಬೇತಿ ಪಡೆಯಲು ಸಾಕಷ್ಟು ಸಮಯ ಸಿಗಲಿದೆ. ಏತನ್ಮಧ್ಯೆ, ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕಿಂತ ಮುಂಚಿತವಾಗಿ ನ್ಯೂಜಿಲೆಂಡ್ ಎರಡು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.