ನವದೆಹಲಿ:  ನ್ಯೂಜಿಲೆಂಡ್ ತಂಡದ ಆಟಗಾರ ಜಿಮ್ಮಿ ನಿಶಾಮ್ ಅವರ ಹೈಸ್ಕೂಲ್ ಕೋಚ್ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ವಿಶ್ವಕಪ್ ಫೈನಲ್ ಪಂದ್ಯದ ವೇಳೆಯಲ್ಲಿ ಸೂಪರ್ ಓವರ್ ಆಟವನ್ನು ನೋಡುತ್ತಲೇ ಕೊನೆಯುಸಿರೆಳೆದಿದ್ದಾರೆ.



COMMERCIAL BREAK
SCROLL TO CONTINUE READING

ಈಗ ಈ ವಿಷಯವನ್ನು ಜಿಮ್ಮಿ ನಿಶಾಮ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 50 ಓವರ್ ಗಳ ಈ ಪಂದ್ಯದಲ್ಲಿ ಮ್ಯಾಚ್ ಟೈ ನಲ್ಲಿ ಕೊನೆಗೊಂಡಿತ್ತು. ಈ ಹಿನ್ನಲೆಯಲ್ಲಿ ಪಂದ್ಯದ ಫಲಿತಾಂಶವನ್ನು ನಿರ್ಣಯಿಸಲು ಸೂಪರ್ ಓವರ್ ಗೆ ಮೊರೆಹೊಗಲಾಗಿತ್ತು. ಈಗ ಮೃತಪಟ್ಟಿರುವ ಜಿಮ್ಮಿ ನಿಶಾಮ್ ಅವರ ಗುರುವಿನ ಮಗಳು ಹೇಳುವಂತೆ ನಿಶಾಮ್ ಸಿಕ್ಸ್ ಹೊಡೆದ ನಂತರ ಎರಡನೇ ಎಸೆತದ ವೇಳೆ ಆಗಲೇ ಅವರ ಉಸಿರಾಟದಲ್ಲಿ ಏರುಪೇರಾಗಿತ್ತು ಎಂದು ತಿಳಿಸಿದ್ದಾರೆ.


ಈಗ ತಮ್ಮ ಗುರುವಿಗೆ ಸಂತಾಪ ಸೂಚಿಸಿರುವ ಜಿಮ್ಮಿ ನಿಶಾಮ್ 'ದೇವ್ ಗೊರ್ಡನ್ ನನ್ನ ಹೈಸ್ಕೂಲ್ ಟೀಚರ್, ಕೋಚ್ ಮತ್ತು ಸ್ನೇಹಿತ. ಈ ಆಟದ ಮೇಲಿನ ನಿಮ್ಮ ಪ್ರೀತಿ ನಿಜಕ್ಕೂ ಸಾಂಕ್ರಾಮಿಕವಾಗಿರುವಂತದ್ದು, ಪಂದ್ಯದ ಕೊನೆಯವರೆಗೆ ನಿಮ್ಮ ಉಸಿರನ್ನು ಹೇಗೆ ಹಿಡಿದಿಟ್ಟಿದ್ದಿರಿ, ನೀವು ಹೆಮ್ಮೆ ಪಟ್ಟಿದ್ದೀರಿ ಎಂದು ಭಾವಿಸುತ್ತೇನೆ.' ಎಂದು ಅವರು ಟ್ವೀಟ್ ಮಾಡಿದ್ದಾರೆ.


ಗೊರ್ಡನ್ ಅವರಿಗೆ ಐದು ವಾರಗಳ ಹಿಂದಷ್ಟೇ ಹೃದಯಾಘಾತವಾಗಿತ್ತು, ಆಕ್ಲೆಂಡ್ ಗ್ರಾಮರ್ ನಲ್ಲಿ ಅವರು 25 ವರ್ಷಗಳಿಂದ ನೀಶಾಂ ಸೇರಿ ಹಲವು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.