Team India: ಬುಲೆಟ್‌ ನಂತೆ ಸಿಕ್ಸರ್‌ಗಳನ್ನು ಸಿಡಿಸುವ ಭಯಂಕರ ಬ್ಯಾಟ್ಸ್‌ಮನ್ ಟೀಂ ಇಂಡಿಯಾಗೆ ಶೀಘ್ರದಲ್ಲೇ ಎಂಟ್ರಿಯಾಗಬಹುದು. ಈ ಬ್ಯಾಟ್ಸ್‌ಮನ್ ಟೀಂ ಇಂಡಿಯಾಕ್ಕೆ ಬಂದರೆ ಮಹೇಂದ್ರ ಸಿಂಗ್ ಧೋನಿ ಸ್ಥಾನವನ್ನು ಖಂಡಿತವಾಗಿಯೂ ಸರಿದೂಗಿಸಬಹುದು. ಜುಲೈ 12 ರಿಂದ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 2 ಟೆಸ್ಟ್, 3 ODI ಮತ್ತು 5 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಟೆಸ್ಟ್ ಸರಣಿಗೆ ವೇಳಾಪಟ್ಟಿ ಪ್ರಕಟ: 21 ವರ್ಷದ ಈ ಯುವ ಆಟಗಾರನಿಗೆ ಮಣೆ ಹಾಕಿದ ಸಮಿತಿ!


ಐಪಿಎಲ್ 2023ರ ಋತುವಿನಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರು ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ.


ಐಪಿಎಲ್ 2023 ರ ಋತುವಿನಲ್ಲಿ, ಪಂಜಾಬ್ ಕಿಂಗ್ಸ್ ಫಿನಿಶರ್ ಜಿತೇಶ್ ಶರ್ಮಾ ಅದ್ಭುತ ಸಿಕ್ಸರ್ ಗಳನ್ನು ಸಿಡಿಸಿದ್ದರು. ಐಪಿಎಲ್ 2023 ರ ಋತುವಿನಲ್ಲಿ ಜಿತೇಶ್ ಶರ್ಮಾ ಅವರ ಅದ್ಭುತ ಪ್ರದರ್ಶನಕ್ಕಾಗಿ ಟೀಂ ಇಂಡಿಯಾಗೆ ಎಂಟ್ರಿ ಪಡೆಯುವ ಮೂಲಕ ಬಹುಮತಿ ಸಿಗುವ ಸಾಧ್ಯತೆ ಕಾಣಿಸುತ್ತಿದೆ.


ಜೂನ್ 27 ರಂದು ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಬಹುದು. ಈ ಸಂದರ್ಭದಲ್ಲಿ ಜಿತೇಶ್ ಶರ್ಮಾ ಅವರ ಭವಿಷ್ಯದ ಬಗ್ಗೆ ನಿರ್ಣಯವಾಗಲಿದೆ. ಐಪಿಎಲ್ 2023 ರಲ್ಲಿನ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಜಿತೇಶ್ ಶರ್ಮಾ ಟೀಮ್ ಇಂಡಿಯಾ ಪ್ರವೇಶಕ್ಕೆ ಎಂಟ್ರಿಕೊಡಬಹುದು.


ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನ ತುಂಬಲಿದ್ದಾರೆ…!


ಜಿತೇಶ್ ಶರ್ಮಾ ಅವರು ತಮ್ಮ ಅಪಾಯಕಾರಿ ಆಟದಿಂದ ಮಹೇಂದ್ರ ಸಿಂಗ್ ಧೋನಿ ಅವರನ್ನು ನೆನಪಿಸುತ್ತಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅತ್ಯಂತ ಸ್ಫೋಟಕ ಬ್ಯಾಟಿಂಗ್ ಮತ್ತು ಚಿರತೆಯಂತೆ ವಿಕೆಟ್ ಕೀಪಿಂಗ್‌ ಗೆ ಹೆಸರುವಾಸಿಯಾಗಿದ್ದಾರೆ. ಜಿತೇಶ್ ಶರ್ಮಾ ಐಪಿಎಲ್‌ ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ODI ಮತ್ತು T20 ಸರಣಿಯಲ್ಲಿ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರು ಟೀಮ್ ಇಂಡಿಯಾದ ಪ್ಲೇಯಿಂಗ್ XI ನಲ್ಲಿ 6 ನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: ಟೆಸ್ಟ್’ನಲ್ಲಿ 4 ಶತಕ ಸಿಡಿಸಿದ ಈ ಆಟಗಾರನಿಗೆ Team Indiaದಲ್ಲಿ ಸಿಕ್ತಿಲ್ಲ ಸ್ಥಾನ! ಹತಾಶೆಯಲ್ಲಿ ಶಾಕಿಂಗ್ ವಿಡಿಯೋ ಹರಿಬಿಟ್ಟ!


ಜಿತೇಶ್ ಶರ್ಮಾ 26 ಐಪಿಎಲ್ ಪಂದ್ಯಗಳಲ್ಲಿ 159.24 ಸ್ಟ್ರೈಕ್ ರೇಟ್‌ ನಲ್ಲಿ 543 ರನ್ ಗಳಿಸಿದ್ದಾರೆ. ಇದರಲ್ಲಿ 33 ಸಿಕ್ಸರ್ ಮತ್ತು 44 ಬೌಂಡರಿಗಳನ್ನು ಸೇರಿವೆ. ಜಿತೇಶ್ ಶರ್ಮಾ 90 ಟಿ20 ಪಂದ್ಯಗಳಲ್ಲಿ 1 ಶತಕ ಮತ್ತು 9 ಅರ್ಧಶತಕ ಸೇರಿದಂತೆ 2096 ರನ್ ಗಳಿಸಿದ್ದಾರೆ. ಶರ್ಮಾ ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಸ್ಫೋಟಕ ಬ್ಯಾಟಿಂಗ್‌ ನಲ್ಲಿ ಪರಿಣತಿ ಹೊಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ