ODI ಇತಿಹಾಸದಲ್ಲೇ ಮೊದಲ ಬೌಂಡರಿ ದಾಖಲಿಸಿದ್ದ John Edrich ನಿಧನ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬೌಂಡರಿ ದಾಖಲಿಸಿದ್ದ ಇಂಗ್ಲೆಂಡ್‌ನ ಮಾಜಿ ಕ್ರಿಕೆಟ್ ಆಟಗಾರ ಜಾನ್ ಎಡ್ರಿಚ್ ನಿಧನರಾಗಿದ್ದಾರೆ.
ಲಂಡನ್: ಇಂಗ್ಲೆಂಡ್‌ನ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಜಾನ್ ಎಡ್ರಿಚ್(John Edrich) ತಮ್ಮ 83 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈ ಬಗ್ಗೆ ಮಾಹಿತಿ ನೀಡಿದೆ.
ಫೆಬ್ರುವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ
ಎಡಗೈ ಬ್ಯಾಟ್ಸ್‌ಮನ್ ಎಡ್ರಿಚ್ ತಮ್ಮ 77 ಟೆಸ್ಟ್ ಪಂದ್ಯಗಳ ವೃತ್ತಿಜೀವನದಲ್ಲಿ ಇಂಗ್ಲೆಂಡ್ ಪರ 5000 ರನ್ ಗಳಿಸಿದ್ದಾರೆ. 1963 ಮತ್ತು 1976 ರ ನಡುವೆ ಅವರು ಇಂಗ್ಲೆಂಡ್ ಪರ ಆಡಿದ್ದರು.
ಇದನ್ನು ಓದಿ- ಕರೋನವೈರಸ್‌ನಿಂದಾಗಿ ಇನ್ನೊಬ್ಬ ಹಳೆಯ ಸ್ನೇಹಿತನನ್ನು ಕಳೆದುಕೊಂಡ Sachin Tendulka
ಟೆಸ್ಟ್ ಕ್ರಿಕೆಟ್ ನಲ್ಲಿ ಜಾನ್ ಎಡ್ರಿಚ್ ಇಂಗ್ಲೆಂಡ್ ತಂಡದ (England Team) ನಾಯಕ ಕೂಡ ಆಗಿದ್ದರು. ಎಡ್ರಿಚ್ ಏಕದಿನ ಇತಿಹಾಸದ ಮೊದಲ ಪಂದ್ಯವಾಡಿದ್ದರು. ಈ ಸ್ವರೂಪದ ಪಂದ್ಯದಲ್ಲಿ ಮೊದಲ ಬೌಂಡರಿ ಬಾರಿಸಿದ ಕ್ರಿಕೆಟ್ ಆಟಗಾರ ಎಂಬ ದಾಖಲೆ ಕೂಡ ಅವರ ಹೆಸರಲ್ಲಿದೆ.
ಇದನ್ನು ಓದಿ- ಬಿಸಿಸಿಐ ನೂತನ ಹಿರಿಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಚೇತನ್ ಶರ್ಮಾ ನೇಮಕ
ಸರೆ ತಂಡದ ಪರ ಕೌಂಟಿ ಕ್ರಿಕೆಟ್ ಆಡುತ್ತಿದ್ದ ಎಡ್ರಿಚ್, ತನ್ನ ಫಸ್ಟ್ ಕ್ಲಾಸ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 39 ಸಾವಿರಕ್ಕಿಂತ ಅಧಿಕ ರನ್ಸ್ ಗಳನ್ನು ಬಾರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.