ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲು ಟಾಸ್ ಗೆದ್ದು ಬೆಂಗಳೂರು ತಂಡವು ಹೈದರಾಬಾದ್ ಗೆ ಬ್ಯಾಟಿಂಗ್ ಅವಕಾಶ ನೀಡಿತು.




COMMERCIAL BREAK
SCROLL TO CONTINUE READING

ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಹೈದರಾಬಾದ್ ತಂಡವು ಪಂದ್ಯದ ಮೇಲೆ ಪ್ರಾರಂಭದಿಂದಲೂ ಹಿಡಿತವನ್ನು ಸಾಧಿಸಿತು.ಜಾನಿ ಬೇರ್ ಸ್ಟೋ ಹಾಗೂ ಡೇವಿಡ್ ವಾರ್ನರ್ ಅವರು 185 ರನ್ ಗಳ ಮೊದಲ ವಿಕೆಟ್ ಜೊತೆಯಾಟದಿಂದ ಪಂದ್ಯದ ಚಿತ್ರಣವನ್ನೇ ಬದಲಿಸಿದರು.




ಬೇರ್ ಸ್ಟೋ ಕೇವಲ 56 ಎಸೆತಗಳಲ್ಲಿ 12 ಬೌಂಡರಿ 7 ಸಿಕ್ಸರ್ ನೊಂದಿಗೆ ಮೊದಲ ಐಪಿಎಲ್ ಶತಕವನ್ನು ಗಳಿಸಿದ ಸಾಧನೆ ಮಾಡಿದರು. ಇನ್ನೊಂದೆಡೆಗೆ  ಇವರಿಗೆ ಸಾಥ್ ನೀಡಿದ ಡೇವಿಡ್ ವಾರ್ನರ್ ಕೂಡ 55 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳನ್ನು ಗಳಿಸಿದರು.ಆ ಮೂಲಕ ಹೈದರಾಬಾದ್ ತಂಡವು 20 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 231 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿತು.