ಬಡವರಿಗೆ ಸೇರಬೇಕಾದ ಪಡಿತರ ಅಕ್ಕಿ, ರಹಸ್ಯವಾಗಿ ಗೋದಾಮುಗಳಿಂದಲೇ ನಾಪತ್ತೆ: ಬಿಜೆಪಿ ಆರೋಪ
Anna Bhagya scheme: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಹಾರ ಹಾಗೂ ಅಕ್ಕಿ ವಿತರಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರ ನಡುವೆ ಹೊಸ ಪಡಿತರ ಚೀಟಿ ಕೊಡುವುದಕ್ಕೂ ಸಿದ್ದರಾಮಯ್ಯರ ಸರ್ಕಾರ ನಿರಾಕರಿಸಿದೆ ಎಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು: ಬಡವರಿಗೆ ಸೇರಬೇಕಾದ ಪಡಿತರ ಅಕ್ಕಿ, ರಹಸ್ಯವಾಗಿ ಗೋದಾಮುಗಳಿಂದಲೇ ನಾಪತ್ತೆಯಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಟೀಕಿಸಿರುವ ಬಿಜೆಪಿ, ‘ಈ ಅಕ್ಕಿ ನಾಪತ್ತೆಯ ಬಗ್ಗೆ ಕೊಂಚವೂ ತಲೆಕೆಡಿಸಿಕೊಳ್ಳದ #ATMSarkara, ಬಡವರಿಗೆ ಪಡಿತರ ಅಕ್ಕಿ ವಿತರಿಸಲು, ಅಕ್ಕಿ ಎಲ್ಲಿಯೂ ದೊರೆಯುತ್ತಿಲ್ಲವೆಂದು ಮೊಸಳೆ ಕಣ್ಣೀರು ಸುರಿಸಿ, ಸದಾ ಇತರರ ಮೇಲೆ ಗೂಬೆ ಕೂರಿಸುತ್ತಿದೆ’ ಎಂದು ಟೀಕಿಸಿದೆ.
‘ನಾಪತ್ತೆಯಾಗಿರುವ ಈ ₹1.32 ಕೋಟಿ ಮೌಲ್ಯದ ಅಕ್ಕಿ, ಯಾರ ಹೊಟ್ಟೆ ತುಂಬಿಸಲು ಹೋಗಿದೆ ಎಂಬುದನ್ನು ಕಾಂಗ್ರೆಸ್ ಸರ್ಕಾರ ಸ್ಪಷ್ಟಪಡಿಸಲಿ! ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಹಾರ ಹಾಗೂ ಅಕ್ಕಿ ವಿತರಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರ ನಡುವೆ ಹೊಸ ಪಡಿತರ ಚೀಟಿ ಕೊಡುವುದಕ್ಕೂ ಸಿದ್ದರಾಮಯ್ಯರ ಸರ್ಕಾರ ನಿರಾಕರಿಸಿದೆ. 3 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಪರಿಶೀಲನೆ ಮಾಡದೆ ಕಳ್ಳಾಟವಾಡಲಾಗುತ್ತಿದೆ. ಅಕ್ಕಿಯಲ್ಲೂ ಒಣ ರಾಜಕೀಯ ಮಾಡಿದ ಸರ್ಕಾರ ಮುಂದಿನ ತಿಂಗಳ ಅಕ್ಕಿ ವಿತರಿಕೆಯಲ್ಲಿಯೂ ಈಗಲೇ ಸೋತಾಗಿದೆ!’ ಎಂದು ಬಿಜೆಪಿ ಕುಟುಕಿದೆ.
ಸರ್ಕಾರಿ ಶಾಲಾ ಶಿಕ್ಷಕಿಗೆ ಅದ್ಧೂರಿ ಬೀಳ್ಕೊಡುಗೆ..! ಜನರಿಂದ ಭಾರಿ ಪ್ರಶಂಸೆ
ಸಚಿವ-ಶಾಸಕರ ಪತ್ರಗಳ ಸರಣಿ!
ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: 26 ಟನ್ ಅಕ್ಕಿ ವಶಕ್ಕೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.