ಭಾರತ-ವೆಸ್ಟ್ ಇಂಡೀಸ್ ಐತಿಹಾಸಿಕ 100 ನೇ ಪಂದ್ಯಕ್ಕೆ ಕರ್ನಾಟಕದ ಸೈಕಲ್ ಪ್ಯೂರ್ ಪ್ರಾಯೋಜಕತ್ವ


COMMERCIAL BREAK
SCROLL TO CONTINUE READING

ಬೆಂಗಳೂರು:  ಭಾರತದ ಪ್ರಮುಖ ಅಗರಬತ್ತಿ ತಯಾರಕ ಸೈಕಲ್ ಪ್ಯೂರ್,  ಕೆರಿಬಿಯನ್ ನಾಡಿನಲ್ಲಿ ನಡೆಯುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಟೆಸ್ಟ್ ಸರಣಿಗೆ ಶೀರ್ಷಿಕೆ ಪ್ರಾಯೋಜಕರಾಗಿದೆ. ಉಭಯ ದೇಶಗಳ ನಡುವಿನ ಫ್ರಾಂಕ್ ವೊರೆಲ್ ಟ್ರೋಫಿಗಾಗಿ ಸಾಂಪ್ರದಾಯಿಕವಾಗಿ ಸೆಣೆಸುತ್ತಿದ್ದು, 2023 ರ ಸರಣಿಯನ್ನು ‘ಸೈಕಲ್ ಪ್ಯೂರ್ ಅಗರಬತ್ತಿ ಟೆಸ್ಟ್ ಸರಣಿ’ ಎಂದು ಕರೆಯಲಾಗುತ್ತದೆ.ಟ್ರಿನಿಡಾಡ್ನ ಹೆಸರಾಂತ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಜುಲೈ 20 ರಿಂದ ಜುಲೈ 24 ರವರೆಗೆ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವು ಉಭಯ ರಾಷ್ಟ್ರಗಳ ನಡುವಿನ 100 ನೇ ಪಂದ್ಯವಾಗಿರುವುದರಿಂದ ಈ ಸರಣಿಯು ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. 


1948 ರಲ್ಲಿ ದೆಹಲಿಯಲ್ಲಿ ಎರಡೂ ದೇಶಗಳು ಮೊದಲ ಟೆಸ್ಟ್ ಪಂದ್ಯ ಆಡಿದ್ದವು.ಈ ಸರಣಿಯು ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಐದು ಟ್ವೆಂಟಿ-20 ಪಂದ್ಯಗಳನ್ನು ಒಳಗೊಂಡಿರುತ್ತದೆ.  ಜುಲೈ 12 ರಂದು ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ಟೆಸ್ಟ್ ಪಂದ್ಯದೊಂದಿಗೆ ಪ್ರವಾಸ ಸರಣಿ ಪ್ರಾರಂಭವಾಗುತ್ತದೆ.


ಇದನ್ನೂ ಓದಿ: ಸ್ವಯಂಪ್ರೇರಿತ ಹೇಳಿಕೆಯಲ್ಲಿ ಶ್ರೀಕಿ ಅಸಲಿ ಮುಖ ಅನಾವರಣ


ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮವಾಗಿ ಕಾಣುತ್ತಾರೆ. ಪ್ರಾರ್ಥನೆಯ ದ್ಯೋತಕವಾಗಿ ಹೊತ್ತಿಸುವ ಸೈಕಲ್ ಫ್ಯೂರ್ ಅಗರ್ಬತ್ತಿಯಂತೆ ಗಡಿ, ಭಾಷೆ, ಸಂಸ್ಕೃತಿ ಎಲ್ಲವನ್ನೂ ಮೀರಿ ಎಲ್ಲರನ್ನೂ ಒಟ್ಟಿಗೆ ಸೇರಿಸುವ ಕ್ರೀಡೆಯಿದು. ಈ ಪ್ರಾಯೋಜಕತ್ವದ ಮೂಲಕ, ಸೈಕಲ್ ಬ್ರ್ಯಾಂಡ್ ಕೇವಲ ಆಟವನ್ನು ಬೆಂಬಲಿಸುವುದು ಮಾತ್ರವಲ್ಲ, ಭರವಸೆ ಮತ್ತು ಸಕಾರಾತ್ಮಕತೆಯನ್ನು ಹರಡುವ ದೊಡ್ಡ ಉದ್ದೇಶಕ್ಕೆ ಕೊಡುಗೆ ನೀಡುತ್ತದೆ. ಕ್ರಿಕೆಟ್ನಂತಹ ಆಟ ಸವಾಲಿನ ಸಮಯದಲ್ಲೂ ವ್ಯಕ್ತಿಗಳು, ಸಮುದಾಯಗಳು ಮತ್ತು ರಾಷ್ಟ್ರಗಳನ್ನು ಪ್ರೇರೇಪಿಸುವ ಮತ್ತು ಮೇಲಕ್ಕೆತ್ತುವ ಸಾಮರ್ಥ್ಯವನ್ನು ಹೊಂದಿವೆ ಎಂದು ಸೈಕಲ್ ಪ್ಯೂರ್ ಅಗರಬತ್ತಿ ದೃಢವಾಗಿ ನಂಬುತ್ತದೆ.


ಪಾಲುದಾರಿಕೆಯನ್ನು ಪ್ರಕಟಿಸಿ ಮಾತನಾಡಿದ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗ, ‘ಸೈಕಲ್ ಪ್ಯೂರ್ನಲ್ಲಿ, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮತ್ತು ಸಬಲೀಕರಣಗೊಳಿಸುವುದು ನಮ್ಮ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ. ಪಂದ್ಯದ ಸಮಯದಲ್ಲಿಯೂ ಪ್ರತಿಯೊಬ್ಬರೂ ಪ್ರಾರ್ಥಿಸಲು ಕಾರಣವಿದೆ ಎಂದು ನಾವು ದೃಢವಾಗಿ ನಂಬುತ್ತೇವೆ. ಕ್ರಿಕೆಟ್ ಒಂದು ಏಕೀಕರಣ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ಗಡಿಗಳನ್ನು ಮೀರಿ ಜನರನ್ನು ಒಟ್ಟುಗೂಡಿಸುತ್ತದೆ. 


ಇದನ್ನೂ ಓದಿ: ಇನ್ನೇಕೆ ಹೇರ್ ಡೈ..? ಈ 3 ಎಲೆಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಕಪ್ಪಾಗುತ್ತೆ!


ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ 2023ರ ಪ್ರವಾಸಕ್ಕೆ ನಮ್ಮ ಶೀರ್ಷಿಕೆ ಪ್ರಾಯೋಜಕತ್ವವನ್ನು  ಘೋಷಿಸಲು ಸಂತೋಷವಾಗಿದೆ. ಈ ಪಾಲುದಾರಿಕೆಯು ಏಕತೆಯ ಮೌಲ್ಯಗಳನ್ನು ಪ್ರಚಾರ ಮಾಡಲು ನಮಗೆ ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ.  ಭಾರತೀಯ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸುತ್ತೇನೆ. ಉಭಯ ತಂಡಗಳ ನಡುವಿನ 100 ನೇ ಐತಿಹಾಸಿಕ ಪಂದ್ಯವನ್ನು ವೀಕ್ಷಿಸಲು ಕುತೂಹಲಭರಿತನಾಗಿದ್ದೇನೆ’ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.