ಕೊಚ್ಚಿ: ಅರ್ಜೆಂಟೀನಾ ಫುಟ್ಬಾಲ್ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ ಫುಟ್ ಬಾಲ ದಂತಕಥೆ Diego Maradona ಕಳೆದ ತಿಂಗಳು ಜಗತ್ತಿಗೆ ವಿದಾಯ ಹೇಳಿದ್ದಾರೆ. ಅವನಿಗೆ 60 ವರ್ಷ ವಯಸ್ಸಾಗಿತ್ತು ಹಾಗೂ ಅವರು ಮರಡೋನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮರಡೋನಾಗೆ ಮನೆಯಲ್ಲಿ ಹೃದಯಾಘಾತ ಸಂಭವಿಸಿದೆಅವನ ಸಾವಿಗೆ ಎರಡು ವಾರಗಳ ಮೊದಲು ಅವನ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.


COMMERCIAL BREAK
SCROLL TO CONTINUE READING

ಇದನ್ನು ಓದಿ- ಒಂದು ದಿನ ನಾವು ಆಕಾಶದಲ್ಲಿ ಒಟ್ಟಿಗೆ ಸಾಕರ್ ಆಡುತ್ತೇವೆ-ಮರಡೋನಾ ಬಗ್ಗೆ ಪಿಲೆ ಭಾವುಕ ನುಡಿ ನಮನ


ಇದೀಗ ಈ ದಿಗ್ಗಜ ಫುಟ್ಬಾಲ್ ಆಟಗಾರನ ಸ್ಮರಣಾರ್ಥ ಕೇರಳದ ಉದ್ಯಮಿಯೊಬ್ಬರು ಮ್ಯೂಸಿಯಂ ನಿರ್ಮಿಸಲು ಹೊರಟಿದ್ದಾರೆ. ಸೋಮವಾರ ಈ ಕುರಿತು ಹೇಳಿಕೆ ನೀಡಿರುವ ಉದ್ಯಮಿ, ಡಿಯಾಗೋ ಮರಡೋನಾ ಸ್ಮರಣಾರ್ಥ ಅಂತಾರಾಷ್ಟ್ರೀಯ ಮಟ್ಟದ ಸಂಗ್ರಹಾಲಯ ಸಿದ್ಧಪಡಿಸಲಾಗುವುದು ಮತ್ತು ಅದರಲ್ಲಿ ಈ ದಿಗ್ಗಜ ಆಟಗಾರನ ಚಿನ್ನದ ಮೂರ್ತಿ ಮುಖ್ಯ ಆಕರ್ಷಣೆಯಾಗಿರಲಿದೆ ಎಂದು ಹೇಳಿದ್ದಾರೆ. 


ಇದನ್ನು ಓದಿ- Diego Maradona Death:ಮರಡೋನಾಗೆ ಶೃದ್ಧಾಂಜಲಿ ಅರ್ಪಿಸಿದ Lionel Messiಗೆ ದಂಡ, ಕಾರಣ ಇಲ್ಲಿದೆ


'ದಿ ಹ್ಯಾಂಡ್ ಆಫ್ ಗೋಲ್ಡ' ಅನ್ನು ಪ್ರತಿನಿಧಿಸಲಿದೆ ಈ ಪ್ರತಿಮೆ
ಈ ಕುರಿತು ಹೇಳಿಕೆ ನೀಡಿರುವ ಬಾಬಿ ಚೆಮ್ಮನೂರ್ ಇಂಟರ್ನ್ಯಾಷನಲ್ ಗ್ರೂಪ್ ನ ಛೇರ್ಮನ್ ಹಾಗೂ MD ಬಾಬಿ ಚೆಮ್ಮನೂರು , ಮರಡೋನಾ ಅವರ ಎತ್ತರ ಹಾಗೂ ಶರೀರ ಸೌಷ್ಟ್ಯವನ್ನು ಹೋಲುವ ಈ ಪ್ರತಿಮೆ 'ದಿ ಹ್ಯಾಂಡ್ ಆಫ್ ಗೋಲ್ಡ್' ಅನ್ನು ಪ್ರತಿನಿಧಿಸಲಿದೆ ಎಂದಿದ್ದಾರ. ಅರ್ಜೆಂಟೀನಾದ ಈ ಮಹಾನ್ ಆಟಗಾರ 1986ರ ಫಿಫಾ ವಿಶ್ವ ಕಪ್ ನಲ್ಲಿ ತಾನು ದಾಖಲಿಸಿದ್ದ ಒಂದು ಮಹತ್ವದ ಗೋಲ್ ಗೆ ಈ ಹೆಸರನ್ನು ಇಟ್ಟಿದ್ದರು. ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಚೆಮ್ಮನೌರು, ಈ ಪ್ರಸ್ತಾವಿತ ಸಂಗ್ರಹಾಲಯ ಕೊಲ್ಕತಾ ಅಥವಾ ದಕ್ಷಿಣ ಭಾರತದಲ್ಲಿ ನಿರ್ಮಿಸಲಾಗುವುದು ಎಂದಿದ್ದಾರೆ. ಈ ಸಂಗ್ರಹಾಲಯದಲ್ಲಿ ಮರಡೋನಾ ಅವರ ವೈಯಕ್ತಿಕ ಹಾಗೂ ವೃತ್ತಿ ಜೀವನದ ಚಿತ್ರಣ ಇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.