ನವದೆಹಲಿ: ಕಿದಾಂಬಿ ಶ್ರೀಕಾಂತ್ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ  ವಿಶ್ವದ ನಂಬರ್ 1 ಸ್ಥಾನ ಗಳಿಸಿದ ಭಾರತದ ಮೊದಲ  ಆಟಗಾರ ಎನ್ನುವ ಖ್ಯಾತಿಯನ್ನು ಪಡೆದರು 


COMMERCIAL BREAK
SCROLL TO CONTINUE READING

ಡೆನ್ಮಾರ್ಕ್ನ ವಿಕ್ಟರ್ ಆಕ್ಸೆಲ್ಸೆನ್ ಅವರನ್ನು ಹಿಂದಿಕ್ಕಿ ಅವರು ಈ ಸಾಧನೆಗೈದಿದ್ದಾರೆ. ಈ ಹಿಂದೆ 2015 ರಲ್ಲಿ ಮಹಿಳಾ ವಿಭಾಗದಲ್ಲಿ  ಸೈನಾ ನೆಹ್ವಾಲ್ ವಿಶ್ವ ಶ್ರೇಯಾಂಕವನ್ನು ತಲುಪಿದ ಮೊದಲ ಭಾರತೀಯಳು ಎನ್ನುವ ಸಾಧನೆ ಮಾಡಿದ್ದರು.



Photo:BWF


25 ವರ್ಷ ವಯಸ್ಸಿನ ಶ್ರೀಕಾಂತ್ 76,895 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಏರಿದ್ದಾರೆ. ಆಕ್ಸೆಲ್ಸನ್ 77,130 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಗಳಿಸಿದ್ದಾರೆ.ಶ್ರೀಕಾಂತ್ ಕಳೆದ ವರ್ಷದಲ್ಲಿ ಇಂಡೋನೇಷ್ಯಾ ಓಪನ್, ಆಸ್ಟ್ರೇಲಿಯನ್ ಓಪನ್, ಡೆನ್ಮಾರ್ಕ್ ಓಪನ್ ಮತ್ತು ಫ್ರೆಂಚ್ ಓಪನ್ ಒಟ್ಟು  ನಾಲ್ಕು ಸೂಪರ್ ಸೀರೀಸ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಗೋಲ್ಡ್ ಕೋಸ್ಟ್ ನಲ್ಲಿ  ಭಾರತದ ಮಿಕ್ಸ್ ಬ್ಯಾಡ್ಮಿಂಟನ್ ತಂಡವು ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. 


ಶ್ರೀಕಾಂತ್ ಕಿದಂಬಿಯವರ ಸಾಧನೆಗೆ ಪ್ರತಿಕ್ರಿಯಿಸಿರುವ ಗೋಪಿಚೆಂದ" ಇದು ಭಾರತ ಮತ್ತು ಶ್ರೀಕಾಂತ್ ಮಟ್ಟಿಗೆ ಮಹತ್ವದ ಸಾಧನೆಯಾಗಿದೆ, ನಮ್ಮ ಮಹಿಳೆಯರ ಪ್ರದರ್ಶನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ, ಆದರೆ ಈಗ ಪುರುಷರು ನಂ 1 ಸ್ಥಾನವನ್ನು ಪಡೆದುಕೊಂಡಿದ್ದೇವೆ" ಎಂದರು .