KKR vs SRH, IPL 2022: ಕೆಕೆಆರ್ ಎದುರು ಸೋತ ಹೈದರಾಬಾದ್ ಪ್ಲೇ ಆಫ್ ಕನಸು ನುಚ್ಚುನೂರು!
ಪ್ಲೇ ಆಫ್ ಪ್ರವೇಶಿಸಿಲು ಕೇನ್ ವಿಲಿಯಮ್ಸನ್ ನೇತೃತ್ವದ ಹೈದರಾಬಾದ್ ತಂಡವು ಬಾಕಿ ಇದ್ದ 3 ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಾಗಿತ್ತು.
ಪುಣೆ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಾಣುವ ಮೂಲಕ ಸನ್‍ರೈಸರ್ಸ್ ಹೈದರಾಬಾದ್ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 61ನೇ ಪಂದ್ಯದಲ್ಲಿ ಹೈದರಾಬಾದ್ ಹೀನಾಯ ಸೋಲು ಕಂಡಿತು.
ಪ್ಲೇ ಆಫ್ ಪ್ರವೇಶಿಸಿಲು ಕೇನ್ ವಿಲಿಯಮ್ಸನ್ ನೇತೃತ್ವದ ಹೈದರಾಬಾದ್ ತಂಡವು ಬಾಕಿ ಇದ್ದ 3 ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಾಗಿತ್ತು. ಆದರೆ ಕೆಕೆಆರ್ ಒಡ್ಡಿದ ಸವಾಲಿನ ಮೊತ್ತವನ್ನು ಚೇಸ್ ಮಾಡುವಲ್ಲಿ ವಿಲಿಯಮ್ಸನ್ ಪಡೆ ವಿಫಲವಾಯಿತು. ಈ ಮೂಲಕ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಕೆಕೆಆರ್ ತನ್ನ ಜೊತೆಗೆ ಹೈದರಾಬಾದ್‍ನ ಪ್ಲೇ ಆಫ್ ಕನಸಿಗೆ ತಣ್ಣೀರೆರಚಿದೆ.
ಬೃಹತ್ ಮೊತ್ತ ಪೇರಿಸಿದ ಕೆಕೆಆರ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತು. ಕೆಕೆಆರ್ ಪರ ಆಂಡ್ರೆ ರಸೆಲ್(ಅಜೇಯ 49), ಸ್ಯಾಮ್ ಬಿಲ್ಲಿಂಗ್ಸ್(34), ಅಂಜಿಕ್ಯ ರಹಾನೆ(28), ನಿತೀಶ್ ರಾಣಾ(26) ಮತ್ತು ನಾಯಕ ಶ್ರೇಯಸ್ ಅಯ್ಯರ್(15) ರನ್ ಗಳಿಸಿದರು. ಹೈದರಾಬಾದ್ ಪರ ಉಮ್ರಾನ್ ಮಲಿಕ್ 3 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್ ಮತ್ತು ಟಿ.ನಟರಾಜನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಬೃಹತ್ ಮೊತ್ತ ಚೇಸ್ ಮಾಡದೆ ಸೋತ ಹೈದರಾಬಾದ್
178 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 123 ರನ್ ಗಳಿಸಲಷ್ಟೇ ಶಕ್ತವಾಯಿತು. 56 ರನ್ ಗಳಿಂದ ಹೀನಾಯ ಸೋಲು ಕಂಡ ಹೈದರಾಬಾದ್‍ನ ಕನಸು ನುಚ್ಚುನೂರಾಯಿತು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.