KL Rahul : ಔಟಾಗಿದ್ದಕ್ಕೆ ಕೋಪಗೊಂಡ ಕೆಎಲ್ ರಾಹುಲ್ ಮಾಡಿದ್ದು ಹೀಗೆ : Video ಸಖತ್ ವೈರಲ್
KL Rahul Viral Video : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸಮನ್ ಕೆಎಲ್ ರಾಹುಲ್ ಪ್ರದರ್ಶನ ಮತ್ತೆ ವಿಫಲವಾಗಿದೆ.
KL Rahul Viral Video : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸಮನ್ ಕೆಎಲ್ ರಾಹುಲ್
ಪ್ರದರ್ಶನ ಮತ್ತೆ ವಿಫಲವಾಗಿದೆ. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ನಾಯಕತ್ವದ ಜೊತೆಗೆ ಓಪನಿಂಗ್ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದ ರಾಹುಲ್, ಶುಭಮನ್ ಗಿಲ್ ಜೊತೆಗೆ ಇನ್ನಿಂಗ್ಸ್ ಓಪನರ್ ಆಗಿ ಬಂದರು. ಆದರೆ, ರಾಹುಲ್ ಉತ್ತಮ ಪ್ರದರ್ಶನ ನೀಡದೆ, ಖಾಲಿದ್ ಅಹ್ಮದ್ ಬೌಲಿಂಗ್ ಗೆ ಬೌಲ್ಡ್ ಆದರು. ಈ ಔಟ್ ಆಗಿದ್ದಕ್ಕೆ ರಾಹುಲ್ ಪ್ರತಿಕ್ರಿಯಿಸಿದ ದೃಶ್ಯದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಗ್ಗವಾಗಿ ಮರಳಿದ ಕೆಎಲ್ ರಾಹುಲ್
ಚಿತ್ತಗಾಂಗ್‌ನ ಜಹೂರ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾದ ಹಂಗಾಮಿ ನಾಯಕ ಕೆಎಲ್ ರಾಹುಲ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಮೊದಲು ಬ್ಯಾಟಿಂಗ್‌ಗೆ ಇಳಿದ ಟೀಂ ಇಂಡಿಯಾಗೆ ಶುಭಮನ್ ಗಿಲ್ (20) ರೂಪದಲ್ಲಿ ಆರಂಭಿಕ ಆಘಾತ ಎದುರಾಯಿತು. ನಂತರ ಕೆಎಲ್ ರಾಹುಲ್ ಕೂಡ ಅಗ್ಗವಾಗಿ ಪೆವಿಲಿಯನ್ ಗೆ ಮರಳಿದರು. ಖಾಲಿದ್ ಅಹ್ಮದ್ ಹಾಕಿದ ಬಾಲ್ ಗೆ ರಾಹುಲ್ ಬೌಲ್ಡ್ ಆದರು. ರಾಹುಲ್ 54 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 22 ರನ್ ಗಳಿಸಿದರು.
ಇದನ್ನೂ ಓದಿ : R Ashwin Record: ಐತಿಹಾಸಿಕ ದಾಖಲೆ ಮುರಿಯುವ ಸನಿಹದಲ್ಲಿ ಅಶ್ವಿನ್: ಅನಿಲ್ ಕುಂಬ್ಳೆ ರೆಕಾರ್ಡ್ ಬ್ರೇಕ್ ಮಾಡ್ತಾರಾ!
ರಾಹುಲ್ ಮತ್ತು ಗಿಲ್ ಪಾರ್ಟ್ನರ್ ನಲ್ಲಿ 41 ರನ್
ರಾಹುಲ್ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 41 ರನ್ ಗಳಿಸಿ ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಲು ಪ್ರಯತ್ನಿಸಿದರು. ಆದರೆ, ಇನಿಂಗ್ಸ್ ನ 14ನೇ ಓವರ್ ನಲ್ಲಿ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಶುಭಮನ್ ಗಿಲ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದರಿಂದ ರಾಹುಲ್‌ಗೆ ನಾಯಕತ್ವ ನೀಡಲಾಗಿದೆ. ಗಿಲ್ 40 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ 20 ರನ್ ಗಳಿಸಿದರು.
ಕೆಎಲ್ ರಾಹುಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಖಲೀದ್ ಅಹ್ಮದ್ ಹಾಕಿದ ಬಾಲ್ ಅನ್ನು ಆಫ್ ಸ್ಟಂಪ್ ಹೊರಗೆ ರಾಹುಲ್ ಕವರ್ಸ್ ದಿಕ್ಕಿನಲ್ಲಿ ಹೊಡೆಯಲು ಪ್ರಯತ್ನಿಸಿದರು. ಆದರೆ ಬಾಲ್ ಬ್ಯಾಟ್‌ಗೆ ಬಡಿದು ಸ್ಟಂಪ್‌ಗೆ ಬಡಿಯಿತು. 19ನೇ ಓವರ್‌ನ ಮೊದಲ ಎಸೆತದಲ್ಲಿ ರಾಹುಲ್ ಔಟಾದರು. ಈ ರೀತಿ ವಿಕೆಟ್ ಕಳೆದುಕೊಂಡಿದ್ದಕ್ಕೆ ರಾಹುಲ್ ತುಂಬಾ ಕೋಪಗೊಂಡಿದ್ದರಂತೆ. ಪೆವಿಲಿಯನ್‌ಗೆ ಮರಳುತ್ತಿದ್ದಾಗ ರಾಹುಲ್ ಗ್ಲೌಸ್ ಧರಿಸಿ ಜೋರಾಗಿ ಬ್ಯಾಟ್‌ಗೆ ಹೊಡೆದರು. ಈ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿಯಲ್ಲಿ ಸೋತು ಸುಣ್ಣಾಗಿದೆ. ಸರಣಿಯ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಬೇಕಾಯಿತು. ಇದಾದ ಬಳಿಕ ಮೂರನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವ ವಹಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಪಂದ್ಯದಲ್ಲಿ ಇಶಾನ್ ಕಿಶನ್ ದ್ವಿಶತಕ ಸಿಡಿಸಿದರೆ ವಿರಾಟ್ ಶತಕ ಸಿಡಿಸಿದ್ದರು.
PKL 2022 Playoffs: ಗೂಳಿಗಳ ಆರ್ಭಟ.. ದಬಾಂಗ್ ಡೆಲ್ಲಿ ಮಣಿಸಿ ಬುಲ್ಸ್ ಸೆಮಿಫೈನಲ್ ಪ್ರವೇಶ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.