ನವದೆಹಲಿ: ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಕೆಎಲ್ ರಾಹುಲ್ ಕ್ಯಾಪ್ಟನ್ ಮೆಟೀರಿಯಲ್ ಎಂದು ಭಾವಿಸಿದ್ದಾರೆ ಮತ್ತು ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ನಾಯಕನಾಗಿ ರೂಪುಗೊಳ್ಳಬೇಕು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಟಿ 20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ ನಂತರ ಗವಾಸ್ಕರ್ ಈ ಹೇಳಿಕೆ ನೀಡಿದ್ದಾರೆ. ಕೊಹ್ಲಿ ನಂತರ ಟಿ20 ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಲಿದ್ದಾರೆ.


ಇದನ್ನೂ ಓದಿ: Viral Video: ಕೆ.ಎಲ್.ರಾಹುಲ್‌ ಔಟ್; ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಜಾನಿ ಬೈರ್‌ಸ್ಟೋ


"ಬಿಸಿಸಿಐ ಮುಂದೆ ನೋಡುತ್ತಿರುವುದು ಒಳ್ಳೆಯದು. ಮುಂದೆ ಯೋಚಿಸುವುದು ಮುಖ್ಯ,ಭಾರತವು ಹೊಸ ನಾಯಕನನ್ನು ರೂಪಿಸಲು ಬಯಸಿದರೆ, ಕೆಎಲ್ ರಾಹುಲ್ (KL Rahul) ಅವರನ್ನು ನೋಡಬಹುದು. ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಈಗ ಇಂಗ್ಲೆಂಡ್‌ನಲ್ಲಿಯೂ ಸಹ ಅವರ ಬ್ಯಾಟಿಂಗ್ ಉತ್ತಮವಾಗಿತ್ತು.ಅವರು ಐಪಿಎಲ್ ಮತ್ತು 50 ಓವರ್‌ಗಳ ಕ್ರಿಕೆಟ್ ನಲ್ಲಿ ಮತ್ತು ಅಂತರಾಷ್ಟ್ರೀಯ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ಉಪನಾಯಕನನ್ನಾಗಿ ಮಾಡಬಹುದು"ಎಂದು ಗವಾಸ್ಕರ್ ಸ್ಪೋರ್ಟ್ಸ್ ಟಕ್ ನಲ್ಲಿ ಹೇಳಿದರು.


ಇದನ್ನೂ ಓದಿ: Viral Vdieo: ಜೇಮ್ಸ್ ಆಂಡರ್ಸನ್ ಗೆ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಏನು ಮಾಡಿದ್ದಾರೆ ನೋಡಿ..!


'ಅವರು ಐಪಿಎಲ್‌ನಲ್ಲಿ ಬಹಳ ಪ್ರಭಾವಶಾಲಿ ನಾಯಕತ್ವದ ಗುಣಗಳನ್ನು ತೋರಿಸಿದ್ದಾರೆ. ಅವರು ನಾಯಕತ್ವದ ಹೊಣೆಯನ್ನು ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಲು ಬಿಡಲಿಲ್ಲ. ಅವರ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು" ಎಂದು ಗವಾಸ್ಕರ್ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.