Hubli : ಕೆ.ಎಲ್. ರಾಹುಲ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ. ಸಾಕಷ್ಟು ಜನ ಅಭಿಮಾನಿಗಳನ್ನು ಹೊಂದಿರುವ ಕೆ.ಎಲ್‌.ರಾಹುಲ್ ವಿದ್ಯಾರ್ಥಿಯೊಬ್ಬನಿಗೆ ಆರ್ಥಿಕ ನೆರವು ನೀಡುವ ಮೂಲಕ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ. ಹೌದು..ಅಮೃತ ಮಾವಿನಕಟ್ಟಿ ಎಂಬುವಂತ ಮಹಲಿಂಗಪುರದ ಸಾಮಾನ್ಯ ಯುವಕ ಮೊನ್ನೆಯಷ್ಟೇ ಪಿಯುಸಿ ಕಾಮರ್ಸನಲ್ಲಿ 600ಕ್ಕೆ 571 ಅಂಕಗಳನ್ನು ಪಡೆದಿದ್ದಾನೆ.


COMMERCIAL BREAK
SCROLL TO CONTINUE READING

ಆದರೆ ಕಡುಬಡತನದಲ್ಲಿರುವ ಈ ಯುವಕ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತಾಯಿ ತೀರಿ ಹೋಗಿದ್ದಾರೆ. ಆದರೆ ಓದಲೇ ಬೇಕು ಎಂಬುವಂತ ಛಲ ಯುವಕನಿಗೆ ನೀತಿನ ಹಾಗೂ ಹುಬ್ಬಳ್ಳಿಯ ಅವರನ್ನು ಭೇಟಿ ಮಾಡಿಸಿದೆ. ಅದೃಷ್ಟವಶಾತ್ ಮಂಜುನಾಥ ಅವರು ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಅವರೊಂದಿಗೆ ಮಾತನಾಡಿ ಯುವಕನ ಶಿಕ್ಷಣಕ್ಕೆ ಆರ್ಥಿಕ ನೆರವು ಕೊಡಿಸಿದ್ದಾರೆ.


ಇದನ್ನೂ ಓದಿ-WTC ಮುಗಿದು 24 ಗಂಟೆಯಾಗುವಷ್ಟರಲ್ಲಿ Team Indiaಗೆ ಬಿತ್ತು ದಂಡದ ಬಿಸಿ! 11 ಆಟಗಾರರ ವಿರುದ್ಧವೂ ಕ್ರಮ: ಕಾರಣ?


ಇನ್ನೂ ಯುವಕ ಬಿಕಾಂ ಓದಲು ಕೆಎಲ್ಇ ಸಂಸ್ಥೆಯ ಬಿವ್ಹಿಬಿ ಕಾಲೇಜಿಗೆ ಬಂದಿದ್ದಾನೆ. ಆತನ ಪರಿಸ್ಥಿತಿ ಹಾಗೂ ಆತನ ಅಂಕಗಳನ್ನು ನೋಡಿದ ಆಡಳಿತ ಮಂಡಳಿ 10 ಸಾವಿರ ರಿಯಾಯಿತಿ ನೀಡಿದೆ. ಆದರೆ ಉಳಿದ ಹಣವನ್ನು ತುಂಬಲು ಸಾಧ್ಯವಾಗದೇ ಇದ್ದಾಗ ಕೆ.ಎಲ್.ರಾಹುಲ್ 75 ಸಾವಿರ ಹಣವನ್ನು ಯುವಕನ ಖಾತೆಗೆ ಜಮಾ ಮಾಡಿದ್ದು, ಯುವಕ‌ನ ಭವಿಷ್ಯಕ್ಕೆ ಬೆಳಕಾಗಿದ್ದಾರೆ.


ಒಟ್ಟಿನಲ್ಲಿ ಯುವಕನ ನೆರವಿಗೆ ಹುಬ್ಬಳ್ಳಿಯ ಮಂಜು ಸಾಕಷ್ಟು ಶ್ರಮವಹಿಸಿದ್ದು, ಕೆ.ಎಲ್.ಹುಲ್ ಮೂಲಕ ಯುವಕನ ಬದುಕಿಗೆ ಹೊಸ ಅರ್ಥ ಕಲ್ಪಿಸಿದ್ದಾರೆ. ಅದೆಷ್ಟೋ ಪ್ರತಿಭೆಗಳು ಸೂಕ್ತ ವೇದಿಕೆ, ಪ್ರೋತ್ಸಾಹ ಸಿಗದೇ ಪರದಾಡುತ್ತಿವೆ. ಈ ಬಗ್ಗೆ ಉಳ್ಳವರು ಬಡ ಪ್ರತಿಭೆಗಳ ಬಗ್ಗೆ ಕಾಳಜಿ ವಹಿಸಬೇಕು ಎಂಬುವುದು ನಮ್ಮ ಆಶಯ ಕೂಡಾ.


ಇದನ್ನೂ ಓದಿ-ಟೆಸ್ಟ್ ಕ್ರಿಕೆಟ್’ಗೆ ರೋಹಿತ್ ಶರ್ಮಾ ನಿವೃತ್ತಿ ಘೋಷಣೆ! ಆಘಾತಕಾರಿ ಪೋಸ್ಟ್’ನಲ್ಲಿ ಬಹಿರಂಗ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ