India vs Nepal, Asia Cup 2023: ಇಂದು ಅಂದರೆ ಸೆಪ್ಟೆಂಬರ್ 4 ರಂದು ಭಾರತ ತಂಡವು ನೇಪಾಳ ವಿರುದ್ಧ ಏಷ್ಯಾ ಕಪ್-2023ರ ತನ್ನ ಎರಡನೇ ಪಂದ್ಯವನ್ನು ಆಡಲಿದೆ. ಈ ಪಂದ್ಯ ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಟೀಂ ಇಂಡಿಯಾದ 3 ಆಟಗಾರರು ಈ ಪಂದ್ಯದ ಭಾಗವಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮುಂದಿನ 118 ದಿನ ಈ ರಾಶಿಯವರಿಗೆ ದುಡ್ಡೋ ದುಡ್ಡು..! ಎಲ್ಲಾ ಕೆಲಸದಲ್ಲೂ ಯಶಸ್ಸು-ಮುಗಿಯದಷ್ಟೂ ಸಂಪತ್ತು ಕರುಣಿಸುವ ಬೃಹಸ್ಪತಿ


ಈ ಟೂರ್ನಿಯಲ್ಲಿ ಭಾರತ ತಂಡ ತನ್ನ ಕೊನೆಯ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿದ್ದು, ಮಳೆ ಮತ್ತು ಕೆಟ್ಟ ಹವಾಮಾನದಿಂದಾಗಿ ಪಂದ್ಯ ರದ್ದಾಗಿತ್ತು. ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಮಾಡಿದರೂ ಮಳೆಯಿಂದಾಗಿ ಪಾಕ್ ತಂಡಕ್ಕೆ ಬ್ಯಾಟಿಂಗ್’ಗೆ ಇಳಿಯಲು ಸಾಧ್ಯವಾಗಲಿಲ್ಲ. ಬಳಿಕ ಪಂದ್ಯ ಡ್ರಾ ಎಂದು ಘೋಷಿಸಬೇಕಾಯಿತು.


ಇದೀಗ ನೇಪಾಳ ವಿರುದ್ಧ ಜಯ ಸಾಧಿಸುವ ಮೂಲಕ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್-4ರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಟೀಂ ಇಂಡಿಯಾ ಬಯಸಿದೆ. ಎ ಗುಂಪಿನಿಂದ ಪಾಕಿಸ್ತಾನ ಈಗಾಗಲೇ ಸೂಪರ್-4ರಲ್ಲಿ ಸ್ಥಾನ ಪಡೆದಿದೆ. 2 ಪಂದ್ಯಗಳಿಂದ 3 ಅಂಕಗಳನ್ನು ಪಡೆದಿದೆ. ಪಾಕಿಸ್ತಾನ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾದ ಬಳಿಕ ಭಾರತಕ್ಕೆ ಒಂದು ಅಂಕ ಲಭಿಸಿದೆ. ಇನ್ನು ನೇಪಾಳದೊಂದಿಗಿನ ಪಂದ್ಯದ ವೇಳೆಯೂ ಮಳೆ ಬಂದು, ಮ್ಯಾಚ್ ಕ್ಯಾನ್ಸಲ್ ಆದರೆ, ಭಾರತ 2 ಅಂಕಗಳೊಂದಿಗೆ ಸೂಪರ್-4 ತಲುಪುತ್ತದೆ.


ಈ ಮೂವರಿಗೆ ಇಲ್ಲ ಸ್ಥಾನ...!


ನೇಪಾಳ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡುತಿಲ್ಲ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಯಿಂದ ಫಿಟ್‌ನೆಸ್ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಆದರೆ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ರಾಹುಲ್ ಪಾಲ್ಗೊಳ್ಳುವುದಿಲ್ಲ ಎಂದು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಈಗಾಗಲೇ ಸ್ಪಷ್ಟಪಡಿಸಿದ್ದರು. ಎರಡನೇ ಹೆಸರು ಸೂರ್ಯಕುಮಾರ್ ಯಾದವ್ ಅವರದ್ದು, ಯಾದವ್ ತಂಡದಲ್ಲಿದ್ದರೂ ಸಹ ಪ್ಲೇಯಿಂಗ್-11 ರ ಭಾಗವಾಗಲು ಸಾಧ್ಯವಾಗುವುದಿಲ್ಲ. ಇನ್ನು ರಾಹುಲ್ ಆಡದ ಕಾರಣ, ಇಶಾನ್ ಕಿಶನ್ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಇಶಾನ್ 5ನೇ ಸ್ಥಾನಕ್ಕೆ ಇಳಿದಿದ್ದರೆ, ಶ್ರೇಯಸ್ ಅಯ್ಯರ್ ನಂಬರ್-4ರಲ್ಲಿ ಬ್ಯಾಟಿಂಗ್ ಮಾಡಿದ್ದರು. ಹೀಗಿರುವಾಗ ಸೂರ್ಯಕುಮಾರ್ ಗೆ ಸ್ಥಾನ ಸಿಗುವುದು ಅಸಾಧ್ಯ ಎನಿಸುತ್ತಿದೆ.


ಇದನ್ನೂ ಓದಿ: ರಕ್ಷಾ ಪಂಚಮಿ ಪುಣ್ಯದಿನ ಇಂದು.. ಈ ರಾಶಿಗಿರಲಿದೆ ಮಹಾಶಿವನ ಶ್ರೀರಕ್ಷೆ- ಸಂಪತ್ತು ವೃದ್ಧಿ


ಅರ್ಧದಲ್ಲೇ ಪಂದ್ಯ ತೊರೆದ ಬುಮ್ರಾ!


ಇನ್ನೊಂದೆಡೆ, ವೇಗಿ ಜಸ್ಪ್ರೀತ್ ಬುಮ್ರಾ ಪಂದ್ಯಾವಳಿಯನ್ನು ಮಧ್ಯದಲ್ಲಿ ತೊರೆದು ಮನೆಗೆ ಮರಳಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ಅಪ್‌ಡೇಟ್ ಬಂದಿಲ್ಲ. ಆದರೆ ವೈಯಕ್ತಿಕ ಕಾರಣಗಳಿಂದ ಅವರು ಭಾನುವಾರ ಕೊಲಂಬೊದಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ. ಬುಮ್ರಾ ಇತ್ತೀಚೆಗೆ ಐರ್ಲೆಂಡ್ ವಿರುದ್ಧದ ಸರಣಿಯ ಮೂಲಕ ಮೈದಾನಕ್ಕೆ ಮರಳಿದ್ದರು. ಅಷ್ಟೇ ಅಲ್ಲದೆ ನಾಯಕತ್ವವನ್ನೂ ವಹಿಸಿಕೊಂಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ