ವಿರಾಟ್ ಕೊಹ್ಲಿ ನಂತರ ಯಾರು? ಎನ್ನುವ ಪ್ರಶ್ನೆಗೆ ಕ್ರಿಸ್ ಗೇಲ್ ಹೇಳ್ತಾರೆ ಕನ್ನಡಿಗ ಅಂತಾ..!
ವೆಸ್ಟ್ ಇಂಡೀಸ್ ನ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ನಂತರ ಅವರ ಸ್ಥಾನವನ್ನು ಕನ್ನಡಿಗ ಕೆ.ಎಲ್.ರಾಹುಲ್ ತುಂಬುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ವೆಸ್ಟ್ ಇಂಡೀಸ್ ನ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ನಂತರ ಅವರ ಸ್ಥಾನವನ್ನು ಕನ್ನಡಿಗ ಕೆ.ಎಲ್.ರಾಹುಲ್ ತುಂಬುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಈಗಿನ ಆಟಗಾರರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಕೆ.ಎಲ್. ರಾಹುಲ್ ನಿಸಂಶಯವಾಗಿ ನನ್ನ ಮನಸ್ಸಿನಲ್ಲಿ ಬರುತ್ತಾರೆ.ಅವರು ವಿರಾಟ್ ರೀತಿಯಲ್ಲಿ ಆಟ ಆಡಲಿದ್ದಾರೆ ಎಂದು ನಾವು ಆಶಿಸುವೆ, ವಿರಾಟ್ ಕೊಹ್ಲಿ ನಂತರ ರಾಹುಲ್ ಆ ಸ್ಥಾನ ತುಂಬ ಬಲ್ಲರು. ಹಾಗಂತ ಅವರು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಅವರು ಅವರಾಗಿಯೇ ಉಳಿಯಬೇಕು ಯಾರ ಜೊತೆ ಹೋಲಿಕೆ ಅಥವಾ ಸ್ಪರ್ಧೆ ಮಾಡುವ ಅಗತ್ಯವಿಲ್ಲ" ಗೇಲ್ ಎಂದು ತಿಳಿಸಿದರು.
"ಭಾರತದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ.ಆದರೆ ಕೆಲವರಿಗೆ ಆಡುವ ಅವಕಾಶ ಸಿಗದೇ ಹೋಗಬಹುದು" ಎಂದು ಗೇಲ್ ಹೇಳಿದರು. ಸದ್ಯ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರವಾಗಿ ಆಡುತ್ತಿರುವ ಕ್ರಿಸ್ ಗೇಲ್ ಮತ್ತು ರಾಹುಲ್ ತಂಡದ ಪರವಾಗಿ ಅಧಿಕ ರನ್ ಗಳಿಸಿದ ಆಟಗಾರಾಗಿದ್ದಾರೆ.
ಕೆಲವು ತಿಂಗಳ ಹಿಂದೆ ಖಾಸಗಿ ಟಿವಿ ಶೋ ವೊಂದರಲ್ಲಿ ಮಹಿಳೆಯರ ಕುರಿತಾಗಿ ನೀಡಿರುವ ಹೇಳಿಕೆಗೆ ಕೆ.ಎಲ್.ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ವಿವಾದಕ್ಕೆ ಸಿಲುಕಿದ್ದರು.ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.