IPL 2025 Mega Auction: ಐಪಿಎಲ್ 2025 ರ ಮೆಗಾ ಹರಾಜಿನ ಬಗ್ಗೆ ಸಾಕಷ್ಟು ಕುತೂಹಲ  ಮೂಡಿದೆ. ರಿಷಬ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವು ಶ್ರೇಷ್ಠ ಆಟಗಾರರು ಮೆಗಾ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. ಅನುಭವಿ ಆಟಗಾರ ಸುನಿಲ್ ಗವಾಸ್ಕರ್ ಕೆಎಲ್ ರಾಹುಲ್ ಬಗ್ಗೆ ಭವಿಷ್ಯ ನುಡಿದಿದ್ದು, ರಾಹುಲ್ ಗಾಗಿ 3 ತಂಡಗಳು ಹರಾಜಿನಲ್ಲಿ ಸ್ಪರ್ಧಿಸಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.  


COMMERCIAL BREAK
SCROLL TO CONTINUE READING

ಲಕ್ನೋ ತಂಡ 5 ಆಟಗಾರರನ್ನು ಉಳಿಸಿಕೊಂಡಿದ್ದು, ಅದರಲ್ಲಿ ರಾಹುಲ್ ಹೆಸರು ಇರಲಿಲ್ಲ. ಈ ಪಟ್ಟಿಯಲ್ಲಿ ನಿಕೋಲಸ್ ಪುರನ್, ರವಿ ಬಿಷ್ಣೋಯ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್ ಮತ್ತು ಆಯುಷ್ ಬದೋನಿ ಸೇರಿದ್ದಾರೆ. ಇನ್ನು ಕೆಎಲ್ ರಾಹುಲ್ ಮೇಲೆ ಯಾವ ತಂಡ ಬಾಜಿ ಕಟ್ಟುತ್ತದೆ ಎಂಬ ಒಂದೇ ಒಂದು ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ. ಹೀಗಿರುವಾಗ ಸುನೀಲ್ ಗವಾಸ್ಕರ್ ಅವರು ರಾಹುಲ್ ಗಾಗಿ 3 ತಂಡಗಳು ಪೈಪೋಟಿ ನಡೆಸಬಹುದು. RCB, CSK ಮತ್ತು SRH ರಾಹುಲ್‌ ಕೊಳ್ಳಲು ಬಾಜಿ ಕಟ್ಟಬಹುದು ಎಂದು ಹೇಳಿದ್ದಾರೆ.


ಇದನ್ನೂ ಓದಿ: IPL 2025: ಈ ಆಟಗಾರರು RCB ಗೆ ಮರಳುತ್ತಾರೆಯೇ? ಇವರೇ ದೊಡ್ಡ ಸ್ಪರ್ಧಿಗಳು!!


ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, 'ಬೆಂಗಳೂರು, ಹೈದರಬಾದ್ ಮತ್ತು ಚೆನ್ನೈ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ. ಬಹುಶಃ ರಾಹುಲ್‌ ಹೈದರಾಬಾದ್‌ ತಂಡಕ್ಕೆ ಹೋಗಬಹುದು. ಆದರೆ ಬೆಂಗಳೂರು ಕೆಎಲ್ ರಾಹುಲ್ ಅವರ ತವರು. ಹೀಗಾಗಿ ಬೆಂಗಳೂರು ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಬಹುದು ಎಂದಿದ್ದಾರೆ. 


ಕಳೆದ ಹಲವು ತಿಂಗಳುಗಳಿಂದ ಕೆಎಲ್ ರಾಹುಲ್ ಅವರ ಬ್ಯಾಟ್ ಮೌನವಾಗಿದೆ. ಸದ್ಯ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎಲ್ಲರ ಕಣ್ಣು ರಾಹುಲ್ ಮೇಲಿದೆ. ಆದರೆ ಅದಕ್ಕೂ ಮೊದಲು ಅವರು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಸಂಪೂರ್ಣ ವಿಫಲರಾಗಿದ್ದಾರೆ. ನವೆಂಬರ್ 24 ಮತ್ತು 25 ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಯಾವ ತಂಡವು ರಾಹುಲ್ ಮೇಲೆ ಬೆಟ್ಟಿಂಗ್ ಮಾಡುತ್ತದೆ ಎಂಬುದು ಈಗ ಕುತೂಹಲಕಾರಿಯಾಗಿದೆ.


ಇದನ್ನೂ ಓದಿ: IPL 2025 ರಲ್ಲಿ ಸಂಚಲನ..! ನಿಷೇಧಕ್ಕೊಳಗಾಗಿದ್ದ ಪಾಕಿಸ್ತಾನಿ ಆಟಗಾರರು ಮೆಗಾ ಹರಾಜಿಗೆ ಎಂಟ್ರಿ..?!


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.