ನವದೆಹಲಿ: ನಿನ್ನೆ 277 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡಿದ್ದ ಆಸಿಸ್ ತಂಡವು ಇಂದು 326 ರನ್ ಗಳಿಗೆ ಆಲೌಟ್ ಆಯಿತು.  


COMMERCIAL BREAK
SCROLL TO CONTINUE READING

ಇದಾದ ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ಕೆ.ಎಲ್.ರಾಹುಲ್ (2) ಹಾಗೂ ಮುರಳಿ ವಿಜಯ್ (0) ಔಟಾಗುವುದರ ಮೂಲಕ ಆರಂಭಿಕ ಆಘಾತವನ್ನು ಎದುರಿಸಿತು.ತದನಂತರ ಬಂದತಹ ವಿರಾಟ್ ಕೊಹ್ಲಿ ಮತ್ತು ಚೇತೆಶ್ವರ್ ಪೂಜಾರ್ ಅವರು ಉತ್ತಮ ಜೊತೆಯಾಟ ನಿಡುವ ಸೂಚನೆ ನೀಡಿದ್ದರು ಆದರೆ ಅಷ್ಟರಲ್ಲಿ ಪೂಜಾರ್ ಅವರು ಮಿಷೆಲ್ ಸ್ಟಾರ್ಕ್ ಅವರಿಗೆ ವಿಕೆಟ್ ಒಪ್ಪಿಸಿದರು.



ನಂತರ ಬಂದ ಅಜಿಂಖ್ಯಾ ರಹಾನೆ ಬೇಗನೆ ರನ್ ಗಳಿಸುವ ಮೂಲಕ ನಾಯಕ ಕೊಹ್ಲಿಗೆ ಸಾಥ್ ನೀಡುತ್ತಿದ್ದಾರೆ.ಇನ್ನೊಂದೆಡೆ ವಿರಾಟ್ ಕೊಹ್ಲಿ(60) ಕೂಡ ಅರ್ಧಶತಕವನ್ನು ಗಳಿಸುವುದರ ಮೂಲಕ ಭಾರತಕ್ಕೆ ಭದ್ರ ಬುನಾಧಿ ಹಾಕಿದ್ದಾರೆ.ಕೊಹ್ಲಿಯವರದ್ದು ಇದು ಒಟ್ಟಾರೆ 20ನೇ ಟೆಸ್ಟ್ ಅರ್ಧಶತಕವಾಗಿದೆ.ಸಧ್ಯ ಭಾರತ ಮೂರು ವಿಕೆಟ್ಗಳನ್ನು ಕಳೆದುಕೊಂಡು 130 ರನ್ ಗಳಿಸಿದೆ. 


ಈಗಾಗಲೇ ನಾಲ್ಕು ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿರುವ ಭಾರತ ತಂಡವು ಈಗ ಎರಡನೇ ಟೆಸ್ಟ್ ನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದೆ.