ನವದೆಹಲಿ: ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆಯುತ್ತಾ ಮುಂದೆ ಸಾಗುತ್ತಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. 


COMMERCIAL BREAK
SCROLL TO CONTINUE READING

ಹೊಸದಾಗಿ ಬಿಡುಗಡೆಯಾದ ಐಸಿಸಿಯ ಅಂಕ ಪಟ್ಟಿಯಲ್ಲಿ ಕೊಹ್ಲಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ 900 ಅಂಕಗಳನ್ನು ಗಳಿಸಿದ್ದಾರೆ.ಆ ಮೂಲಕ ಎಬಿ ಡಿವಿಲಿಯರ್ಸ್ ನಂತರ  ಈ ದಾಖಲೆ ಮಾಡಿರುವ ಎರಡನೆ ಬ್ಯಾಟ್ಸಮನ್ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ.


ಇತ್ತೀಚಿಗೆ ವಿರಾಟ್ ಕೊಹ್ಲಿ ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರು ಶತಕಗಳೊಂದಿಗೆ 558 ರನ್ ಗಳಿಸಿದ್ದರು.ಟೆಸ್ಟ್ ನ ಅಂಕಪಟ್ಟಿಯಲ್ಲಿ ಈಗಾಗಲೇ ಬ್ರಿಯಾನ್ ಲಾರಾರನ್ನು ಹಿಂದಿಕ್ಕಿರುವ ಕೊಹ್ಲಿ, ಸದ್ಯ ಸಾರ್ವಕಾಲಿಕ ಏಕದಿನ ಪಂದ್ಯದ ಅಂಕಪಟ್ಟಿಯಲ್ಲಿ 7ನೇ ಸ್ಥಾನವನ್ನು ಪಡೆದಿದ್ದಾರೆ.