ಆಗದು ಎಂದು ಕೈಕಟ್ಟಿ ಕುಳಿತರೇ ಕೆಲಸವೂ ಸಾಗದು ಮುಂದೆ ಎಂದು ಅಣ್ಣಾವ್ರು ಹಾಡಿದ ಸಾಲು ಕೊಪ್ಪಳದ ಯುವಕನೊರ್ವನ ಸಾಧನೆಗೆ ಕಾರಣವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ
ಚಿಕ್ಕಬೆಣಕಲ್‌ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಡಳ್ಳಿ ಗ್ರಾಮದ ಲೋಕೇಶ್, ಸತತ ಪ್ರಯತ್ನದ ಫಲವಾಗಿ ಅಂಧರ ಟಿ20 ವಿಶ್ವಕಪ್‌ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: Belagavi : ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರ ಸಾವು!


ಅಂಧರ ಟಿ20 ವಿಶ್ವಕಪ್‌ ಡಿಸೆಂಬರ್‌ನಲ್ಲಿ ನಡೆಯಲಿದ್ದು, ಭಾರತ ತಂಡಕ್ಕೆ ತಾಲೂಕಿನ ಚಿಕ್ಕಬೆಣಕಲ್‌ ಗ್ರಾಮದ ಯಡಳ್ಳಿ ಲೋಕೇಶ್ ಎಂಬ ಯುವಕ ಆಯ್ಕೆಯಾಗಿ ಕೊಪ್ಪಳ ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾನೆ. ಕಡು ಬಡತನ ಕುಟುಂಬದ ರೇಣುಕಪ್ಪ, ಹುಲಿಗೆಮ್ಮ ದಂಪತಿಯ 4ನೇ ಮಗ ಲೋಕೇಶ್ ಹುಟ್ಟುವಾಗಲೇ ಅಂಧತ್ವ ಕಾಡಿತ್ತು. ಚಿಕ್ಕ ವಯಸ್ಸಿನಿಂದ ಕ್ರಿಕೆಟ್ ಆಡುವುದನ್ನು ರೂಢಿಸಿಕೊಂಡಿದ್ದ ಲೋಕೇಶ್ ಸರಿಯಾಗಿ ಮನೆಯವರಿಂದ ಪ್ರೋತ್ಸಾಹ ದೊರೆಯದೆ ಇರುವುದರಿಂದ 15 ವರ್ಷಗಳ ಹಿಂದೆ ಮನೆ ಬಿಟ್ಟು ಬೆಂಗಳೂರಿಗೆ ಹೋಗಿ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದನು.


ಇದನ್ನೂ ಓದಿ: “ಒಕ್ಕಲು ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು”


ಕೂಲಿ ಕೆಲಸದ ಜತೆಗೆ ಬೆಂಗಳೂರಿನ ಸಮರ್ಥನಂ ಟ್ರಸ್ಟ್ ಎಂಬ ಸಂಸ್ಥೆಯಲ್ಲಿ ಕ್ರಿಕೆಟ್ ಅಭ್ಯಾಸ ಮಾಡುವ ಮೂಲಕ ರಣಜಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾನೆ. ನಂತರ ಭಾರತ ತಂಡದ ಅಂಧರ ವಿಭಾಗಕ್ಕೆ ಆಯ್ಕೆಯಾಗಿ, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಅವಕಾಶ ಪಡೆದು ಕೊಂಡಿದ್ದಾನೆ. ಮೊದಲ ಬಾರಿ 2016ರಲ್ಲಿ ಅಂಧರ ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಉತ್ತಮ ಆಲ್‌ ರೌಂಡರ್ ಎಂದು ಗುರುತಿಸಿ ಕೊಂಡಿದ್ದಾನೆ.ಅಂಧರ ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಕನಸು ಕಟ್ಟಿ ಕೊಂಡು, ಸತತ ಅಭ್ಯಾಸ ನಡೆಸುತ್ತಿದ್ದ ಲೋಕೇಶ್ ಕೊನೆಗೂ ತನ್ನ ಕನಸು ನನಸು ಮಾಡಿಕೊಂಡಿದ್ದಾನೆ.


ಇದನ್ನೂ ಓದಿ: "ಸಂವಿಧಾನ ಪ್ರತಿಯೊಬ್ಬ ಭಾರತೀಯನಿಗೂ ಪವಿತ್ರ ಗ್ರಂಥ"


ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬೈಂಡ್  ಇನ್ ಇಂಡಿಯಾ ಸಂಸ್ಥೆಯು ದೇಶದ 56  ಆಟಗಾರರನ್ನು ಆಯ್ಕೆ ಮಾಡಿಕೊಂಡು, ಬೆಂಗಳೂರಿನಲ್ಲಿ ಶಿಬಿರ ನಡೆಸಿ, ತರಬೇತಿ ನೀಡಿತ್ತು. ನಂತರ ಆಯ್ಕೆ ಸಮಿತಿಯಿಂದ ಮೌಲ್ಯ ಮಾಪನ ಮಾಡಲಾಗಿದ್ದು, 56 ಜನ ಆಟಗಾರರಲ್ಲಿ ಕೇವಲ 29 ಜನ ಆಟಗಾರರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಯಿತು. ನಂತರ ಭೋಪಾಲ್‌ನಲ್ಲಿ 121 ದಿನಗಳ ಕಾಲ ಕಠಿಣ ಕ್ರಿಕೆಟ್ ತರಬೇತಿ ಹಾಗೂ ಹಾಗೂ ದೈಹಿಕ ಸದೃಢತೆಯ – ಮೌಲ್ಯಮಾಪನ ನಡೆಸಲಾಗಿದ್ದು, ಕೊನೆಯದಾಗಿ ಟಿ20 ವಿಶ್ವಕಪ್‌ಗೆ ಅವಶ್ಯಕ  ಇರುವ 17 ಜನ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ 17 ಆಟಗಾರರಲ್ಲಿ ಲೋಕೇಶ್ ಸ್ಥಾನ ಪಡೆದುಕೊಂಡು 3ನೇ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದಾನೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.