ಸಂಚಿಯಾನ್ [ದಕ್ಷಿಣ ಕೊರಿಯಾ]: ಮೂರನೇ ಶ್ರೇಯಾಂಕದ ಪಿ.ವಿ ಸಿಂಧು ಜಪಾನ್‌ನ ಅಯಾ ಒಹೊರಿ ವಿರುದ್ಧ ಗೆದ್ದು ಬೀಗಿದ್ದು, ಈ ಮೂಲಕ  ಕೊರಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2022 ರ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Korea Open:ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌: ಮುನ್ನಡೆ ಸಾಧಿಸಿದ ಸಿಂಧು, ಕಿಡಂಬಿ


ಇಲ್ಲಿನ ಪಾಲ್ಮಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ  ಕೊರಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2022ರಲ್ಲಿ ಪಿ.ವಿ ಸಿಂಧು ಭರ್ಜರಿ ಆಟ ಪ್ರದರ್ಶಿಸುತ್ತಿದ್ದಾರೆ. ಇನ್ನು ಎರಡು ಬಾರಿ ಒಲಂಪಿಕ್ ಪದಕ ಗೆದ್ದಿರುವ ಭಾರತೀಯ ಆಟಗಾರ್ತಿ ಸಿಂಧು, ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಜಪಾನ್‌ನ ವಿಶ್ವದ ನಂ. 26ನೇ ಶ್ರೇಯಾಂಕದ ಅಯಾ ಒಹೊರಿ ಅವರನ್ನು 21-15, 21-10 ಸೆಟ್‌ಗಳಿಂದ ಸೋಲಿಸಿದ್ದಾರೆ. ಇನ್ನು ಮುಂದೆ ನಡೆಯಲಿರುವ ಕ್ವಾರ್ಟರ್-ಫೈನಲ್‌ ಪಂದ್ಯದಲ್ಲಿ ಸಿಂಧು, ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಸೆಣಸಲಿದ್ದಾರೆ. 


ಇದನ್ನು ಓದಿ: IPL 2022 : ಬುಮ್ರಾ ಮತ್ತು ನಿತೀಶ್ ರಾಣಾ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಿಸಿಸಿಐ!


ವಿಶ್ವದ ಮಾಜಿ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ 21-18, 21-6 ಪಾಯಿಂಟ್‌ಗಳ ಅಂತರದಿಂದ ಇಸ್ರೇಲ್‌ನ ಮಿಶಾ ಜಿಲ್ಬರ್‌ಮನ್ ಅವರನ್ನು ಸೋಲಿಸಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.