ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿದ ವಿಂಡೀಸ್ ಕ್ಯಾಪ್ಟನ್!
Kraigg Brathwaite Statement: ವೆಸ್ಟ್ ಇಂಡೀಸ್ ಟೆಸ್ಟ್ ನಾಯಕ ಕ್ರೇಗ್ ಬ್ರಾಥ್ ವೈಟ್, ಜುಲೈ 12 ರಂದು ಆರಂಭವಾಗಲಿರುವ ಭಾರತ ವಿರುದ್ಧದ ಎರಡು ಟೆಸ್ಟ್ ಸರಣಿಯಲ್ಲಿ ಮಾನಸಿಕ ಸಿದ್ಧತೆ ಮತ್ತು ತಂತ್ರವನ್ನು ಕಾರ್ಯಗತಗೊಳಿಸುವ ಕೌಶಲ್ಯವು ಯಶಸ್ಸಿಗೆ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Kraigg Brathwaite Statement: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಜುಲೈ 12 ರಿಂದ ಪ್ರಾರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯ ಡೊಮಿನಿಕಾದಲ್ಲಿ, ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ನಡೆಯಲಿದೆ. ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ವೆಸ್ಟ್ ಇಂಡೀಸ್ ತಂಡದ ನಾಯಕ ಕ್ರೇಗ್ ಬ್ರಾಥ್ ವೈಟ್ ಟೀಂ ಇಂಡಿಯಾಗೆ ಹೇಳಿಕೆ ಮೂಲಕ ಅವಾಜ್ ಹಾಕಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಕಾರಿಗೆ ಕ್ಯಾಂಟರ್ ಡಿಕ್ಕಿ: ಭೀಕರ ಅಪಘಾತದಿಂದ ಸ್ಥಿತಿ ಗಂಭೀರ!
ವೆಸ್ಟ್ ಇಂಡೀಸ್ ಟೆಸ್ಟ್ ನಾಯಕ ಕ್ರೇಗ್ ಬ್ರಾಥ್ ವೈಟ್, ಜುಲೈ 12 ರಂದು ಆರಂಭವಾಗಲಿರುವ ಭಾರತ ವಿರುದ್ಧದ ಎರಡು ಟೆಸ್ಟ್ ಸರಣಿಯಲ್ಲಿ ಮಾನಸಿಕ ಸಿದ್ಧತೆ ಮತ್ತು ತಂತ್ರವನ್ನು ಕಾರ್ಯಗತಗೊಳಿಸುವ ಕೌಶಲ್ಯವು ಯಶಸ್ಸಿಗೆ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.
ಕ್ರೇಗ್ ಬ್ರಾಥ್‌ವೈಟ್ ಮತ್ತು ಅವರ ತಂಡವು ಭಾರತದ ವಿರುದ್ಧ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನ ಹೊಸ ಋತುವನ್ನು ಪ್ರಾರಂಭಿಸಲು ಕಾತುರದಿಂದ ಕಾಯುತ್ತಿದ್ದಾರಂತೆ. ಸದ್ಯ ವೆಸ್ಟ್ ಇಂಡೀಸ್ ಕ್ರಿಕೆಟಿಗರು ಕೂಲಿ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. “ಚೆನ್ನಾಗಿ ಪ್ರಾರಂಭಿಸುವುದು ಮುಖ್ಯ. ನಾವು ಭಾರತದ ವಿರುದ್ಧ ಆಡುತ್ತಿದ್ದೇವೆ ಮತ್ತು ಎಲ್ಲರೂ ಅದಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ” ಎಂದು ಬ್ರೈತ್‌ವೈಟ್ ಹೇಳಿಕೆಯನ್ನು ಕ್ರಿಕೆಟ್ ವೆಸ್ಟ್ ಇಂಡೀಸ್ ಉಲ್ಲೇಖಿಸಿದೆ.
“ಒಂದು ತಂಡವಾಗಿ, ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಾಗಿ, ಏನನ್ನು ನಿರೀಕ್ಷಿಸಬಹುದು ಎಂದು ನಮಗೆ ತಿಳಿದಿದೆ. ಇದಕ್ಕಾಗಿ ತಯಾರಿ ಬಹಳ ಮುಖ್ಯ. ಭಾರತ ತಂಡ ಮತ್ತು ಇಲ್ಲಿನ ಪರಿಸ್ಥಿತಿಗಳ ಬಗ್ಗೆ ನಮಗೆ ತಿಳಿದಿದೆ, ಆದ್ದರಿಂದ ಮಾನಸಿಕ ಸಿದ್ಧತೆ ಬಹಳ ಮುಖ್ಯ. ನಾವು ನಿಖರವಾದ ತಂತ್ರವನ್ನು ರೂಪಿಸಬೇಕು ಮತ್ತು ಅದನ್ನು ಕಾರ್ಯಗತಗೊಳಿಸಬೇಕು. ತಂಡವನ್ನು ಹುರಿದುಂಬಿಸಲು ಕೆರಿಬಿಯನ್ ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು}” ಬ್ರೈತ್‌ವೈಟ್ ಒತ್ತಾಯಿಸಿದರು.
"ಮೊದಲ ಟೆಸ್ಟ್ ಡೊಮಿನಿಕಾದಲ್ಲಿ ನಡೆಯಲಿದೆ ಮತ್ತು ನಮ್ಮ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ನಾವು ಬಯಸುತ್ತೇವೆ" ಎಂದು ಅವರು ಹೇಳಿದರು,
ಎರಡನೇ ಟೆಸ್ಟ್ ಜುಲೈ 20 ರಿಂದ ಟ್ರಿನಿಡಾಡ್‌ನಲ್ಲಿ ನಡೆಯಲಿದೆ. ಇದರ ನಂತರ ಜುಲೈ 27 ರಿಂದ ಮೂರು ಏಕದಿನ ಪಂದ್ಯಗಳು ಮತ್ತು ಆಗಸ್ಟ್ 3 ರಿಂದ ಐದು ಟಿ20 ಪಂದ್ಯಗಳು ನಡೆಯಲಿವೆ.
ಭಾರತದ ಟೆಸ್ಟ್ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.
ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಪಂದ್ಯಗಳು (ಭಾರತೀಯ ಕಾಲಮಾನ)
1ನೇ ಟೆಸ್ಟ್, ಜುಲೈ 12-16, ಡೊಮಿನಿಕಾ, ರಾತ್ರಿ 7.30
2ನೇ ಟೆಸ್ಟ್, ಜುಲೈ 20-24, ರಾತ್ರಿ 7.30, ಟ್ರಿನಿಡಾಡ್
ಭಾರತ vs ವೆಸ್ಟ್ ಇಂಡೀಸ್ ODI ಸರಣಿ
1ನೇ ODI, ಜುಲೈ 27, ರಾತ್ರಿ 7.00, ಬಾರ್ಬಡೋಸ್
2ನೇ ODI ಜುಲೈ 29, ರಾತ್ರಿ 7.00, ಬಾರ್ಬಡೋಸ್
3ನೇ ODI, ಆಗಸ್ಟ್ 1, ರಾತ್ರಿ 7.00, ಟ್ರಿನಿಡಾಡ್
ಇದನ್ನೂ ಓದಿ: ಟೆಸ್ಟ್ ಸರಣಿಯಿಂದ ಈ ಸ್ಟಾರ್ ಓಪನರ್ ಔಟ್: Team Indiaದ ಭವಿಷ್ಯ ಬರೆದಾತನಿಗೆ ಆಯ್ಕೆ ಸಮಿತಿಯಿಂದ ಮೋಸ!
ಭಾರತ vs ವೆಸ್ಟ್ ಇಂಡೀಸ್ ಟಿ20 ಸರಣಿ
1ನೇ ಟಿ20 ಪಂದ್ಯ, ಆಗಸ್ಟ್ 3, ರಾತ್ರಿ 8.00, ಟ್ರಿನಿಡಾಡ್
2ನೇ ಟಿ20 ಪಂದ್ಯ, ಆಗಸ್ಟ್ 6, ರಾತ್ರಿ 8.00, ಗಯಾನಾ
3ನೇ ಟಿ20 ಪಂದ್ಯ, ಆಗಸ್ಟ್ 8, ರಾತ್ರಿ 8.00, ಗಯಾನಾ
4ನೇ ಟಿ20 ಪಂದ್ಯ, ಆಗಸ್ಟ್ 12, ರಾತ್ರಿ 8.00, ಫ್ಲೋರಿಡಾ
5ನೇ ಟಿ20 ಪಂದ್ಯ, ಆಗಸ್ಟ್ 13, ರಾತ್ರಿ 8.00, ಫ್ಲೋರಿಡಾ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.