Krunal Pandya: ಟೀಂ ಇಂಡಿಯಾದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ತಂದೆಯಾಗಿದ್ದಾರೆ. ಕೃನಾಲ್ ಪಾಂಡ್ಯ ಪತ್ನಿ ಪಂಖುರಿ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮದುವೆಯಾಗಿ ಸುಮಾರು ನಾಲ್ಕೂವರೆ ವರ್ಷಗಳ ನಂತರ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖುರಿ ಶರ್ಮಾ ಮುದ್ದಾದ ಮಗುವನ್ನು ಸ್ವಾಗತಿಸಿದ್ದಾರೆ. ಕೃನಾಲ್ ಪಾಂಡ್ಯ ಮತ್ತು ಪಂಖುರಿ ಶರ್ಮಾ 27 ಡಿಸೆಂಬರ್ 2017 ರಂದು ವಿವಾಹವಾದರು. ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖೂರಿ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಣವೀರ್ ಸಿಂಗ್ ಬಳಿಕ ಬೆತ್ತಲಾದ ಸೌತ್‌ ಸ್ಟಾರ್‌, ಪತ್ನಿಗೆ ಸಿಕ್ತು ಕ್ರೆಡಿಟ್‌


ಹಾರ್ದಿಕ್ ಪಾಂಡ್ಯ ಅವರ ಹಿರಿಯ ಸಹೋದರ ಕೃನಾಲ್ ಪಾಂಡ್ಯ: 


ಕೃನಾಲ್ ಪಾಂಡ್ಯ ಅವರ ಮನೆಯಲ್ಲಿ ಮಗುವಿನ ನಗು ಅರಳಿದೆ. ಅವರು ತಂದೆಯಾಗಿದ್ದಾರೆ. ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖುರಿ ಶರ್ಮಾ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಈ ಶುಭ ಸುದ್ದಿ ನೀಡಿದ್ದಾರೆ. ಕೃನಾಲ್ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಪತ್ನಿ ಮತ್ತು ಮಗನನ್ನು ಚುಂಬಿಸುತ್ತಿದ್ದಾರೆ. ಇಬ್ಬರೂ ತಮ್ಮ ಮಗನಿಗೆ ಕವಿರ್ ಕೃನಾಲ್ ಪಾಂಡ್ಯ ಎಂದು ಹೆಸರಿಟ್ಟಿದ್ದಾರೆ.


 


ಈ ಆಟಗಾರ ತಂಡದಲ್ಲಿ ಇದ್ರೆ ವಿಶ್ವಕಪ್ ಪಕ್ಕಾ ಎಂದ ರಿಕ್ಕಿ ಪಾಂಟಿಂಗ್..!


ಕೃನಾಲ್ ಪಾಂಡ್ಯ ಪತ್ನಿ ಕೂಡ ಮಾಡೆಲ್: 


ಕೃನಾಲ್ ಪಾಂಡ್ಯ ಅವರ ಪತ್ನಿ ಪಂಖುರಿ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಕಿರಿಯ ಸಹೋದರ ಹಾರ್ದಿಕ್ ಪಾಂಡ್ಯ ಜೋಡಿಯಂತೆ, ಕೃನಾಲ್ ಪಾಂಡ್ಯ ಕಪಲ್‌ ಕೂಡ ತುಂಬಾ ರೋಮ್ಯಾಂಟಿಕ್ ಆಗಿದ್ದಾರೆ. ಅವರು ಪಂಖುರಿ ಅವರೊಂದಿಗೆ ಪ್ರೇಮ ವಿವಾಹವಾಗಿದ್ದಾರೆ. ಪಂಖುರಿ ಶರ್ಮಾ ಕೂಡ ಮಾಡೆಲ್ ಆಗಿದ್ದಾರೆ. ಕೃನಾಲ್ ಪಾಂಡ್ಯ ತನ್ನ ಗೆಳತಿ ಪಂಖುರಿ ಶರ್ಮಾ ಅವರನ್ನು ದೀರ್ಘಕಾಲದ ವರೆಗೆ ಪ್ರೀತಿಸಿ ನಂತರ ಮದುವೆಯಾದರು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.