IND vs ENG: ಕೆ.ಎಸ್.ಭರತ್ ಆಂಗ್ಲರ ಮುಂದೆ ಆಡಿದ ಭರ್ಜರಿ ಆಟದಿಂದ ಪಂದ್ಯ ಡ್ರಾ ಆಡಗಿದೆ. ಇತ್ತೀಚಿನ ದಿನಗಳಲ್ಲಿ ಭಾರತ-ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ ಟೆಸ್ಟ್  ಸರಣಿ ನಡೆಯುತ್ತಿದೆ. ಅದರಲ್ಲಿ ಮೊದಲ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಮೊದಲ ಪಂದ್ಯದಲ್ಲಿ ಸೋಲಿನ ಅಂಚಿನಲ್ಲಿದ್ದ ಟೀಂ ಇಂಡಿಯಾವನ್ನು ಕೆ.ಎಸ್.ಭರತ್ ಪಾರು ಮಾಡಿದ್ದು, ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಈ ವೇಳೆ ಎಡಗೈ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಕೂಡ ಅದ್ಭುತ ಇನ್ನಿಂಗ್ಸ್‌ ಆಡಿದ್ದು ಭಾರತ ತಂಡಕ್ಕೆ ನೆರವಾದರು. 


COMMERCIAL BREAK
SCROLL TO CONTINUE READING

ನಾಲ್ಕು ದಿನಗಳ ಟೆಸ್ಟ್‌ನ ಮೊದಲ ಪಂದ್ಯದಲ್ಲಿ, ಮೂರು ದಿನಗಳ ನಂತರ, ಟೀಮ್ ಇಂಡಿಯಾ ಸ್ಕೋರ್ 159/4 ಆಗಿತ್ತು. ನಾಲ್ಕನೇ ಅಂದರೆ ಕೊನೆಯ ದಿನ 6 ವಿಕೆಟ್‌ಗಳನ್ನು ಉಳಿಸುವ ಮೂಲಕ ಗೆಲ್ಲಲು 331 ರನ್‌ಗಳ ಅಗತ್ಯವಿತ್ತು. ಮೂರನೇ ದಿನದಾಟದ ಅಂತ್ಯಕ್ಕೆ ಮಾನವ್ ಸುತಾರ್ ಅಜೇಯ 1 ರನ್ ಹಾಗೂ ಓಪನಿಂಗ್ ಮಾಡಲು ಬಂದ ಸಾಯಿ ಸುದರ್ಶನ್ 53 ರನ್ ಗಳಿಸಿ ಅಜೇಯರಾಗುಳಿದರು. ಸುದರ್ಶನ್ 208 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 97 ರನ್ ಗಳಿಸಿದರು.


ಇದನ್ನೂ ಓದಿ: IND vs BAN: ಟೀಂ ಇಂಡಿಯಾ ನಾಯಕನ ಜೊತೆ ಜಗಳಕ್ಕೆ ನಿಂತ ಬಾಂಗ್ಲಾ ಆಟಗಾರರು… ಮುಂದಾಗಿದ್ದೇನು? ವಿಡಿಯೋ ನೋಡಿ 


ಸುದರ್ಶನ್ ಅವರ ವಿಕೆಟ್ ನಂತರ, ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಕೆಎಸ್ ಭರತ್ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ದರು. ಈ ಸಮಯದಲ್ಲಿ ಮಾನವ್ ಸುತಾರ್ ಅವರಿಗೆ ಉತ್ತಮ ಬೆಂಬಲ ನೀಡಿದರು. ದಿನದ ಅಂತ್ಯದವರೆಗೂ ಇಬ್ಬರೂ ಆಟಗಾರರು ಆಂಗ್ಲ ಬೌಲರ್‌ಗಳ ಎದುರು ಕ್ರೀಸ್‌ನಲ್ಲಿದ್ದರು. ಈ ವೇಳೆ ಭರತ್ 165 ಎಸೆತಗಳಲ್ಲಿ 116* ರನ್ ಮತ್ತು ಮಾನವ್ 254 ಎಸೆತಗಳಲ್ಲಿ 89* ರನ್ ಗಳಿಸಿದರು. ಈ ಮೂಲಕ ದಿನದಾಟದ ಅಂತ್ಯಕ್ಕೆ ಭಾರತ ತಂಡ 426/5 ರನ್ ಗಳಿಸಿ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಿತು.


ಶತಕ ಬಾರಿಸಿದ ಕೂಡಲೇ ಕೆಎಸ್ ಭರತ್ ಮೈದಾನದದಲ್ಲಿ ಸಂಭ್ರಮಾಚರಿಸಿದರು. ಬೌಂಡರಿ ಸಿಡಿಸುವ ಮೂಲಕ ಶತಕ ಪೂರೈಸಿದರು. ಈ ವೇಳೆ ಭರತ್ ಬಿಲ್ಲನ್ನು ಹಿಡಿದು ಬಾಣ ಬಿಡುವ ಭಂಗಿಯನ್ನು ಪ್ರದರ್ಶಿಸುವ ಮೂಲಕ ತಮ್ಮ ಈ ಶತಕವನ್ನು ಪ್ರಭು ಶ್ರೀರಾಮನಿಗೆ ಅರ್ಪಿಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 


 


 

 

 

 



 

 

 

 

 

 

 

 

 

 

 

A post shared by K S Bharat (@konasbharat)


 


ಇಂಗ್ಲೆಂಡ್ ಲಯನ್ಸ್ ವಿರುದ್ಧ ಕೆಎಸ್ ಭರತ್ ಇಂಗ್ಲೆಂಡ್ ಅಮೋಘ ಪ್ರದರ್ಶನ ನೀಡಿದರು. ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಈಗಾಗಲೇ ಟೀಂ ಇಂಡಿಯಾದಲ್ಲಿ ಭರತ್ ಆಯ್ಕೆಯಾಗಿದ್ದಾರೆ. ತವರು ನೆಲದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಜನವರಿ 25 ರಿಂದ ಆರಂಭವಾಗಲಿದೆ. 


ಇದನ್ನೂ ಓದಿ: IND vs ENG: ವಿಶೇಷ ದಾಖಲೆಯ ಹೊಸ್ತಿಲಲ್ಲಿ ಅಶ್ವಿನ್…! ಈ ಸಾಧನೆ ಮಾಡಿದರೆ ಅನಿಲ್ ಕುಂಬ್ಳೆ ರೆಕಾರ್ಡ್ ಬ್ರೇಕ್ ಖಚಿತ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.