49 ವರ್ಷಗಳಲ್ಲಿ ಇದೇ ಮೊದಲು… ಕುಲದೀಪ್-ಜಡೇಜಾ ಜೋಡಿ ಮೋಡಿಗೆ ಇತಿಹಾಸದಲ್ಲೇ ವಿಶಿಷ್ಟ ದಾಖಲೆ ನಿರ್ಮಾಣ!
Kuldeep Yadav and Ravindra Jadeja World Record: ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಆತಿಥೇಯ ತಂಡದ 10 ವಿಕೆಟ್ ಗಳಲ್ಲಿ 7 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಮಾಡಿದ್ದಾರೆ.
Kuldeep Yadav and Ravindra Jadeja World Record: ಟೀಂ ಇಂಡಿಯಾದ ಮಾರಕ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಬ್ರಿಡ್ಜ್’ಟೌನ್ ನಲ್ಲಿ ಗುರುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿಶ್ವ ದಾಖಲೆ ಮಾಡಿದ್ದಾರೆ. ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಈ ವಿಶ್ವ ದಾಖಲೆಯ ಮೂಲಕ ಇಡೀ ವಿಶ್ವವನ್ನೇ ಬೆರಗುಗೊಳಿಸಿದ್ದಾರೆ ಎಂದರೆ ತಪ್ಪಾಗಲಾರದು. ಇತಿಹಾಸದಲ್ಲಿ ಹಿಂದೆಂದೂ ನಡೆಯದ ಸಾಧನೆ ಇದಾಗಿದೆ.
ಇದನ್ನೂ ಓದಿ: World Cup 2023: ಇಂಡೋ-ಪಾಕ್ ಪಂದ್ಯದ ಪ್ರತಿ 10 ಸೆಕೆಂಡ್ ಜಾಹಿರಾತಿಗೆ ರೂ.30 ಲಕ್ಷ ಫಿಕ್ಸ್…!!
ಬ್ರಿಡ್ಜ್ ಟೌನ್ ನಲ್ಲಿ ಗುರುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಮಾರಕ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಆತಿಥೇಯ ತಂಡದ 10 ವಿಕೆಟ್ ಗಳಲ್ಲಿ 7 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಮಾಡಿದ್ದಾರೆ.
ಏಕದಿನ ಕ್ರಿಕೆಟ್ ನ ಇತಿಹಾಸದಲ್ಲಿ ಇಬ್ಬರು ಎಡಗೈ ಸ್ಪಿನ್ ಬೌಲರ್ ಗಳ ಜೋಡಿ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಗಳಲ್ಲಿ 7 ವಿಕೆಟ್ ಪಡೆದದ್ದು ಇದೇ ಮೊದಲು. ಕುಲ್ದೀಪ್ ಯಾದವ್ ಎಡಗೈ ಬೌಲರ್ ಆಗಿದ್ದರೆ, ರವೀಂದ್ರ ಜಡೇಜಾ ನಿಧಾನವಾದ ಎಡಗೈ ಫಿಂಗರ್ ಸ್ಪಿನ್ನರ್.
ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಈ ವಿಶ್ವ ದಾಖಲೆಯ ಮೂಲಕ ಇಡೀ ವಿಶ್ವವನ್ನೇ ಬೆರಗುಗೊಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಬ್ರಿಡ್ಜ್‌ಟೌನ್‌ನಲ್ಲಿ ಗುರುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕುಲದೀಪ್ ಯಾದವ್ 3 ಓವರ್‌ಗಳಲ್ಲಿ 6 ರನ್ ನೀಡಿ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮಾರಕ ಬೌಲಿಂಗ್ ಮಾಡಿ 6 ಓವರ್ ಗಳಲ್ಲಿ 37 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಅವರ ಸ್ಪಿನ್ ಸ್ಪೆಲ್ ನಂತರ, ಆರಂಭಿಕ ಇಶಾನ್ ಕಿಶನ್ ಅವರ ಅರ್ಧಶತಕದ ನೆರವಿನಿಂದ ಭಾರತವು ಬ್ರಿಡ್ಜ್‌ಟೌನ್’ನಲ್ಲಿ ನಡೆದ ಮೊದಲ ODI ನಲ್ಲಿ ವೆಸ್ಟ್ ಇಂಡೀಸ್ ಅನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಇದು ಕ್ರಿಕೆಟ್ ಜಗತ್ತಿನಲ್ಲಿ ಮೊದಲ ಬಾರಿ…
ಎಡಗೈ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 23 ಓವರ್ ಗಳಲ್ಲಿ 114 ರನ್ ಗಳಿಗೆ ಆಲೌಟ್ ಮಾಡಿದರು. ಶಾರ್ದೂಲ್ ಠಾಕೂರ್ (14 ರನ್ ಗಳಿಗೆ ಒಂದು ವಿಕೆಟ್), ಹಾರ್ದಿಕ್ ಪಾಂಡ್ಯ (17 ರನ್ ಗಳಿಗೆ ಒಂದು ವಿಕೆಟ್) ಮತ್ತು ಮುಖೇಶ್ ಕುಮಾರ್ (22 ರನ್ ಗಳಿಗೆ ಒಂದು ವಿಕೆಟ್) ತಲಾ ಒಂದು ವಿಕೆಟ್ ಪಡೆದರು. ಇನ್ನು ಬ್ಯಾಟಿಂಗ್ ನಲ್ಲಿ ಆರಂಭಿಕ ಇಶಾನ್ ಕಿಶನ್ (46 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ ಭಾರತ 22.5 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಸುಲಭ ಜಯ ದಾಖಲಿಸಿತು.
ಇದನ್ನೂ ಓದಿ: 10 ವರ್ಷಗಳ ಬಳಿಕ Team India ಏಕದಿನದಲ್ಲಿ ಅವಕಾಶ ಪಡೆದ ಕೊಹ್ಲಿ ಗೆಳೆಯ! ಇನ್ಮುಂದೆ ಕಾರುಬಾರು ಶುರು…
ಗುರಿಯನ್ನು ಬೆನ್ನಟ್ಟಿದ ಭಾರತವು ತನ್ನ ಇಬ್ಬರು ಅನುಭವಿ ಬ್ಯಾಟ್ಸ್‌ಮನ್ ಗಳಲ್ಲಿ ಒಬ್ಬರಾದ ನಾಯಕ ರೋಹಿತ್ ಶರ್ಮಾ (ಔಟಾಗದೆ 12) ಅವರನ್ನು ಏಳನೇ ಕ್ರಮಾಂಕದಲ್ಲಿ ಇಳಿಸಿತು. ಆದರೆ ವಿರಾಟ್ ಕೊಹ್ಲಿ ಕ್ರೀಸ್ ಗೆ ಬರಲಿಲ್ಲ. ರವೀಂದ್ರ ಜಡೇಜಾ 16 ರನ್ ಗಳಿಸಿ ಅಜೇಯರಾಗಿ ಉಳಿದರು. ವೆಸ್ಟ್ ಇಂಡೀಸ್ ಪರ ಎಡಗೈ ಸ್ಪಿನ್ನರ್ ಗುಡಾಕೇಶ್ ಮೋತಿ 26 ರನ್ ನೀಡಿ ಎರಡು ವಿಕೆಟ್ ಪಡೆದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ