ಬೆಂಗಳೂರು: ಭಾರತದಲ್ಲಿ ಫುಟ್ಬಾಲ್ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇತ್ತೀಚಿಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಸೇವಿಲ್ಲಾ ಫುಟ್ಬಾಲ್ ಕ್ಲಬ್ ಈಗ ಲಾಲಿಗಾ ಬೂಸ್ಟ್ ಮೂಲಕ, ತನ್ನ ಎಲ್ಲಾ 42 ಕ್ಲಬ್‍ಗಳಿಗೆ ನಗದು ಪೂರೈಕೆಗಳೊಂದಿಗೆ ಕ್ರೀಡಾಂಗಣ ಮತ್ತು ಮೂಲಸೌಕರ್ಯ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಮತ್ತು ಬ್ರ್ಯಾಂಡ್ ಅಂತರಾಷ್ಟ್ರೀಕರಣದ ಕಾರ್ಯಯೋಜನೆ ಮೂಲಕ ಈಗ ಫುಟ್ಬಾಲ್ ನ್ನು ಜಾಗತಿಕವಾಗಿ ಬೆಳೆಸುವ ನಿಟ್ಟಿನಲ್ಲಿ ಧೃಡವಾದ ಹೆಜ್ಜೆಯನ್ನಿರಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Chaddi Campaign: ಚಡ್ಡಿ ಸುಟ್ಟು ಶಾಸಕ ಪಿ.ರಾಜೀವ್ ಮನೆಮುಂದೆ ಬೂದಿ ಇಟ್ಟರು!


ಇದರ ಭಾಗವಾಗಿ ಈಗ ಅದು ಭಾರತದಲ್ಲಿನ ಸಾಂಪ್ರದಾಯಿಕ ವಿಧಾನಗಳನ್ನು ಮೀರಿ ವೈಜ್ಞಾನಿಕ ವ್ಯವಹಾರಿಕ ಮತ್ತು ತಾಂತ್ರಿಕ ಪರಿಣಿತಿಯೊಂದಿಗೆ ಹೂಡಿಕೆ ಮಾಡಲು ನಿರ್ಧರಿಸಿದೆ.ಇತ್ತೀಚಿಗಿನ ಭಾರತದ ಭೇಟಿಯು ದೇಶಿಯವಾಗಿ ಇರುವ ಕ್ರೀಡಾ ಸಂಸ್ಕೃತಿ ಹಾಗೂ ಫುಟ್ಬಾಲ್ ಕ್ರೀಡೆಯ ಬೆಳವಣಿಗೆ ಬಗೆಯನ್ನು ಅರ್ಥೈಸಿಕೊಳ್ಳಲು ಕ್ಲಬ್ ಗೆ ಸಹಾಯಕಾರಿಯಾಗಿದೆ ಎನ್ನಲಾಗಿದೆ.


ಈಗ ಈ ವಿಚಾರವಾಗಿ ಮಾತನಾಡಿರುವ ಸೇವಿಲ್ಲಾ ಪುಟ್ಬಾಲ್ ಕ್ಲಬ್ ಅಧ್ಯಕ್ಷ ಜೋಸ್ ಕ್ಯಾಸ್ಟ್ರೋ 'ನಮ್ಮ ಭಾರತದ ಭೇಟಿಯು ಫಲಪ್ರದವಾಗಿದೆ, ಈ ಭೇಟಿಯಿಂದಾಗಿ ಭಾರತೀಯರು ಫುಟ್ಬಾಲ್ ಬಗ್ಗೆ ಹೊಂದಿರುವ ಉತ್ಸಾಹವನ್ನು ನೋಡಿ ಸೇವಿಲ್ಲಾ ಫುಟ್ಬಾಲ್ ಕ್ಲಬ್ ಬ್ರ್ಯಾಂಡ್ ಅನ್ನು ಇಲ್ಲಿ ಇನ್ನಷ್ಟು ಕ್ರೂಡಿಕರಿಸಲು ಹಾಗೂ ಬೆಳೆಸಲು ಹಿಂದೆಂದಿಗಿಂತಲೂ ನಾವು ಹೆಚ್ಚು ಬದ್ಧರಾಗಿದ್ದೇವೆ' ಎಂದು ಹೇಳಿದ್ದಾರೆ.


ಇದನ್ನೂ ಓದಿ: ಪ್ರವಾದಿ ಮಹಮ್ಮದ್ ಅವಹೇಳನ: ನಡುರಸ್ತೆಯಲ್ಲೇ ನೂಪುರ್ ಶರ್ಮಾ ಪ್ರತಿಕೃತಿ ನೇತು ಹಾಕಿದ ಕಿಡಿಗೇಡಿಗಳು!


ಇನ್ನೊಂದೆಡೆಗೆ ಲಾಲಿಗಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜೋಸ್ ಅಂತೋನಿಯೋ ಕ್ಯಾಚಾಜಾ ಮಾತನಾಡಿ 'ಸ್ಪಾನಿಶ್ ಬ್ರ್ಯಾಂಡ್ ಗಳು ವಿಶೇಷವಾಗಿ ಸೇವಿಲ್ಲಾ ದಂತಹ ಸುದೀರ್ಘ ಇತಿಹಾಸವನ್ನು ಮತ್ತು ಪರಿಣಿತಿಯನ್ನು ಹೊಂದಿರುವ ಕ್ಲಬ್ ಈಗ ಭಾರತದಲ್ಲಿನ ಫುಟ್ಬಾಲ್ ಸಾಮರ್ಥ್ಯವನ್ನು ಗುರುತಿಸುತ್ತಿರುವುದು ನಿಜಕ್ಕೂ ನಮಗೆ ಸಂತಸ ತಂದಿದೆ' ಎಂದು ಅವರು ಹೇಳಿದರು.


ಏನಿದು LaLiga ?


ಲಾಲಿಗಾ ಜಾಗತಿಕ, ನವೀನ ಮತ್ತು ಸಾಮಾಜಿಕ ಜವಾಬ್ದಾರಿ ಹೊಂದಿರುವ ಸಂಸ್ಥೆಯಾಗಿರುವುದಲ್ಲದೆ ಮನರಂಜನಾ ವಲಯದಲ್ಲಿಯೂ ಮುಂಚೂಣಿಯಲ್ಲಿದೆ.ಇದು 20 ಸಾರ್ವಜನಿಕ ಸೀಮಿತ ಕ್ರೀಡಾ ಕಂಪನಿಗಳು ಹಾಗೂ 22 ಕ್ಲಬ್ ಗಳನ್ನು ಒಳಗೊಂಡಿರುವ ಒಕ್ಕೂಟವಾಗಿದೆ ಮತ್ತು ಸ್ಪೇನ್ ನಲ್ಲಿ ವೃತ್ತಿಪರ ಫುಟ್ಬಾಲ್ ಸ್ಪರ್ಧೆಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದೆ. ಇದರ ಕಾರ್ಯಾಚರಣೆ ಈಗ ಸುಮಾರು 41 ದೇಶಗಳಲ್ಲಿದ್ದು, ಅಷ್ಟೇ ಅಲ್ಲದೆ ಈ ಸಂಸ್ಥೆಯು ತನ್ನ ಪ್ರತಿಷ್ಠಾನದ ಮೂಲಕ ಸಾಮಾಜಿಕ ಕಾರ್ಯವನ್ನು ನಿರ್ವಹಿಸುತ್ತಿದೆ ಮತ್ತು ಮಾನಸಿಕ ವಿಕಲಚೇತನ ಫುಟ್ಬಾಲ್ ಆಟಗಾರರಿಗೆ ಲೀಗ್ ನ್ನು ಸ್ಥಾಪಿಸಿದ ವಿಶ್ವದ ಮೊದಲ ಫುಟ್ಬಾಲ್ ಲೀಗ್ ಎನ್ನುವ ಹೆಗ್ಗಳಿಕೆ ಈ ಲೀಗ್ ಗೆ ಇದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.