ನವದೆಹಲಿ: ರೋಹಿತ್ ಶರ್ಮಾರ ದಾಖಲೆಯ ಮೂರನೇ ದ್ವಿಶತಕದ ಪರಿಣಾಮವಾಗಿ ಎರಡನೇಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-1 ರ ಮೂಲಕ ಸಮಗೊಳಿಸಿದೆ.


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಭಾರತಕ್ಕೆ ಬ್ಯಾಟಿಂಗ್ ಅವಕಾಶ ನೀಡಿದ ಲಂಕಾದ ಲೆಕ್ಕಾಚಾರವನ್ನು ನಾಯಕ  ರೋಹಿತ ಶರ್ಮಾ  ಕೆಲವೇ ಗಂಟೆಗಳಲ್ಲಿ ಛಿದ್ರ ಮಾಡಿದರು ಆ ಮೂಲಕ ಭರ್ಜರಿ 208 ರನ್ ಗಳಿಸುವ ಮೂಲಕ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 392 ರನ್ ಗಳ ಗುರಿಯನ್ನು ಲಂಕಾಗೆ ನೀಡಿತು.ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು  251 ರನ್ ಮಾತ್ರ ಗಳಿಸಲು ಶಕ್ತವಾಯಿತು.


ಲಂಕಾದ ಪರ ಏಂಜಲೋ ರವರ ಶತಕದ ಹೊರತಾಗಿಯೂ ಅದು ಪಂದ್ಯವನ್ನು ಗೆಲ್ಲಲು ವಿಫಲವಾಯಿತು. ಲೆಗ್ ಸ್ಪಿನ್ನರ್  ಯಜವೆಂದ್ರ ಚಹಾಲ್ ರವರು ಲಂಕಾದ ಮೂರು ವಿಕೆಟ್ ಕಬಳಿಸುವ ಮೂಲಕ  ಲಂಕಾ ತಂಡವನ್ನು  ನಿಯಂತ್ರಿಸಿದರು.


ವಿಶೇಷವಾಗಿ ಭಾರತ 300 ಅಧಿಕ ರನ್ಗಳನ್ನು 100 ಬಾರಿ ಗಳಿದ ಸಾಧನೆಯನ್ನು ಈ ಪಂದ್ಯದಲ್ಲಿ ಭಾರತ ಮಾಡಿದೆ. ಅಂತಿಮ ಹಣಾಹಣಿಯು ಇದೆ ಡಿಸೆಂಬರ್ 17 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ.