ಇಂಗ್ಲೆಂಡ್ ತಂಡವನ್ನು ಸೋಲಿಸಿದ ಪ್ಲಾನ್ ಬಿಚ್ಚಿಟ್ಟ ಲಸಿತ್ ಮಾಲಿಂಗ್...!
ಶುಕ್ರವಾರದಂದು ಇಂಗ್ಲೆಂಡ್ ವಿರುದ್ಧ ರೋಚಕ ಗೆಲವು ಸಾಧಿಸಿದ ಶ್ರೀಲಂಕಾ ತಂಡವು ಈಗ ತಾನು ಆತೇಥಿಯ ತಂಡವನ್ನು ಸೋಲಿಸಿದ್ದು ಹೇಗೆ ಎನ್ನುವ ಪ್ಲಾನ್ ನ್ನು ಪಂದ್ಯದ ನಂತರ ತಿಳಿಸಿದೆ.
ನವದೆಹಲಿ: ಶುಕ್ರವಾರದಂದು ಇಂಗ್ಲೆಂಡ್ ವಿರುದ್ಧ ರೋಚಕ ಗೆಲವು ಸಾಧಿಸಿದ ಶ್ರೀಲಂಕಾ ತಂಡವು ಈಗ ತಾನು ಆತೇಥಿಯ ತಂಡವನ್ನು ಸೋಲಿಸಿದ್ದು ಹೇಗೆ ಎನ್ನುವ ಪ್ಲಾನ್ ನ್ನು ಪಂದ್ಯದ ನಂತರ ತಿಳಿಸಿದೆ.
ನಿನ್ನೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 9 ವಿಕೆಟ್ ನಷ್ಟಕ್ಕೆ 232 ರನ್ ಗಳನ್ನು ಗಳಿಸಿತ್ತು. ಅಂಜೆಲೋ ಮ್ಯಾಥ್ಯೂ ಅಜೇಯ 85 ರನ್ ಗಳನ್ನು ಗಳಿಸುವ ಮೂಲಕ ತಂಡಕ್ಕೆ ನೇರವಾಗಿದ್ದರು. ಈ ಸಾಧಾರಣ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿ ಇಂಗ್ಲೆಂಡ್ ತಂಡವು ಗೆಲ್ಲಬಹುದು ಎಂದು ಭಾವಿಸಿದ್ದಾದರೂ ಕೂಡ ಲಂಕಾ ಬೌಲರ್ ಗಳ ಕೈ ಚಳಕದಿಂದಾಗಿ ಪಂದ್ಯದ ಚಿತ್ರಣವೇ ಬದಲಾಯಿತು.
ಲಸೀತ್ ಮಾಲಿಂಗ್ ಅವರು ನಾಲ್ಕು ವಿಕೆಟ್ ಗಳನ್ನು ಪಡೆಯುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಒಂದು ಹಂತದಲ್ಲಿ ಬೆನ್ ಸ್ಟಾಕ್ ಅಜೇಯರಾಗಿ ಉಳಿದಿದ್ದು ಅಪಾಯಕಾರಿಯಾಗಿತ್ತು. ಈಗ ಇದೆಲ್ಲವನ್ನು ಮೀರಿ ತಂಡವು ಜಯ ಸಾಧಿಸಿರುವ ಬಗ್ಗೆ ಲಸೀತ್ ಮಾಲಿಂಗ್ ಪಂದ್ಯದ ನಂತರ ಮಾತನಾಡಿ " ನಮಗೆ ಗೊತ್ತು ಬೆನ್ ಸ್ಟೋಕ್ ಎಷ್ಟು ಕಠಿಣ ಪ್ರಯತ್ನ ಪಟ್ಟಿದ್ದಾರೆ ಎಂದು, ಅವರು ಎರಡು ಮೂರು ಬೌಂಡರಿಗಳನ್ನು ಬಾರಿಸಿದರು. ಆದರೆ ನಾವು ಸ್ಟಾಕ್ ಬಾಲನ್ನು ಹಾಕುತ್ತಲೇ ಇದ್ದೇವು. ನಮ್ಮ ಮೂಲ ಯೋಜನೆ ಲೈನ್ ಮತ್ತು ಲೆಂತ್ ನ್ನು ಕಾಪಾಡಿಕೊಳ್ಳುವುದು ಇನ್ನು ಯಾವುದೇ ಲೂಸ್ ಬಾಲನ್ನು ಹಾಕದೆ ಇರುವುದು. ಜೊತೆಗೆ ಬೌನ್ಸ್ ನಲ್ಲಿ ವೈವಿದ್ಯತೆನ್ನು ತರುವುದು ಎಂದು ಹೇಳಿದರು.
ಈಗ ಇಂಗ್ಲೆಂಡ್ ತಂಡವು ಸೋಲನ್ನು ಅನುಭವಿಸಿರುವುದು ಸೆಮಿಫೈನಲ್ ಅರ್ಹತೆಯನ್ನು ಕಾಡುತ್ತಿದೆ. ಆತಿಥೇಯರು ಮುಂದಿನ ಲೀಗ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದ್ದಾರೆ ಮತ್ತು ಪ್ರಸ್ತುತ ಎಂಟು ಅಂಕಗಳೊಂದಿಗೆ ವಿಶ್ವಕಪ್ 2019 ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.