Team India Cricket News: ಭಾರತದ ಟಿ20 ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಆತ್ಮೀಯ ಸ್ನೇಹಿತರೊಬ್ಬರಿಗೆ ನಿರಾಸೆ ಮೂಡಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಈ ಆಟಗಾರ ಆಯ್ಕೆಯಾಗುವುದು ಖಚಿತವಾಗಿತ್ತು, ಆದರೆ ಈಗ ಅವರನ್ನು ಕಡೆಗಣಿಸಲಾಗಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಧುಮೇಹವನ್ನು ಪರ್ಮನೆಂಟ್‌ ಆಗಿ ನಿವಾರಿಸುತ್ತೆ ʻಬ್ಲೂ ಟೀʼ


ಈ ಬ್ಯಾಟ್ಸ್‌ಮನ್ ಐಪಿಎಲ್ ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಅಷ್ಟೇ ಅಲ್ಲದೆ, T20 ಸ್ವರೂಪದಲ್ಲಿ ಚೊಚ್ಚಲ ಪ್ರವೇಶ ಮಾಡಲು ಪ್ರಬಲ ಸ್ಪರ್ಧಿಯಾಗಿದ್ದರು. ನಾಯಕ ಹಾರ್ದಿಕ್ ಪಾಂಡ್ಯ IPL 2023 ರ ಸಮಯದಲ್ಲಿ ತಮಿಳುನಾಡಿನ ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಭಾರತಕ್ಕಾಗಿ T20 ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಬಹುದು ಎಂದು ಹೇಳಿದ್ದರು. ಆದರೆ ಈಗ ವೆಸ್ಟ್ ಇಂಡೀಸ್ ವಿರುದ್ಧದ T20 ಸರಣಿಯಲ್ಲಿ ಅವಕಾಶ ನೀಡಿಲ್ಲ.  


ವೆಸ್ಟ್ ಇಂಡೀಸ್ ವಿರುದ್ಧದ ಈ 5 ಪಂದ್ಯಗಳ T20 ಅಂತರಾಷ್ಟ್ರೀಯ ಸರಣಿಯಲ್ಲಿ, ಹಾರ್ದಿಕ್ ಪಾಂಡ್ಯ ಭಾರತದ ನಾಯಕರಾಗಿದ್ದಾರೆ. ತಮ್ಮ ನಾಯಕತ್ವದಲ್ಲಿ ಸಾಯಿ ಸುದರ್ಶನ್‌ ಗೆ ಅವಕಾಶವನ್ನು ನೀಡಲಿಲ್ಲ. ಐಪಿಎಲ್ 2023 ರ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ಅವರು ಸಾಯಿ ಸುದರ್ಶನ್ ಶೀಘ್ರದಲ್ಲೇ ಭಾರತಕ್ಕೆ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಬಹುದು ಎಂದು ಸೂಚಿಸಿದ್ದರು.


ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟ್ಸ್‌ಮನ್. 21ರ ಹರೆಯದ ಸಾಯಿ ಸುದರ್ಶನ್ ಅವರು ಗುಜರಾತ್ ಟೈಟಾನ್ಸ್ ಪರ ಐಪಿಎಲ್ 2023ರ ಫೈನಲ್‌ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 47 ಎಸೆತಗಳಲ್ಲಿ 96 ರನ್ ಗಳಿಸಿ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು.


ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಸಾಯಿ ಸುದರ್ಶನ್ 8 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಬಾರಿಸಿದರು. ಸಾಯಿ ಸುದರ್ಶನ್ ಅವರ ಇನ್ನಿಂಗ್ಸ್ ಆಧಾರದ ಮೇಲೆ ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಎದುರು 215 ರನ್‌ ಗಳ ಗುರಿಯನ್ನು ನೀಡಿತ್ತು. ಮಳೆ ಅಡ್ಡಿಪಡಿಸಿದ ಈ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ ಗಳಿಂದ ಗೆದ್ದು ಐದನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ವಶಪಡಿಸಿಕೊಂಡಿತು. ಸಾಯಿ ಸುದರ್ಶನ್ ಐಪಿಎಲ್ 2023 ರ 8 ಪಂದ್ಯಗಳಲ್ಲಿ 362 ರನ್ ಗಳಿಸುವ ಮೂಲಕ ಟೀಮ್ ಇಂಡಿಯಾದಲ್ಲಿ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳನ್ನು ಹುಟ್ಟುಹಾಕಿದ್ದರು.


ಭಾರತದ ಟಿ20 ಅಂತರಾಷ್ಟ್ರೀಯ ತಂಡ ಇಂತಿದೆ:


ಇಶಾನ್ ಕಿಶನ್ (ವಿಕೀ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೀ, ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್ ಉಮ್ರಾನ್ ಮಲಿಕ್, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್.


ಇದನ್ನೂ ಓದಿ: ಈ ರಾಶಿಗೆ ಅಷ್ಟೈಶ್ವರ್ಯವನ್ನೇ ಹೊತ್ತು ತರುತ್ತಿದ್ದಾನೆ ಚಂದ್ರ! ದುಡ್ಡಿನ ಮಳೆ ಖಂಡಿತ- ಹೆಚ್ಚಾಗುತ್ತೆ ಆಸ್ತಿ, ಸಂಪತ್ತು, ಆಯಸ್ಸು


ಭಾರತ vs ವೆಸ್ಟ್ ಇಂಡೀಸ್ ಟಿ20 ಸರಣಿ


  • 1ನೇ ಟಿ20 ಪಂದ್ಯ, ಆಗಸ್ಟ್ 3, ರಾತ್ರಿ 8.00, ಟ್ರಿನಿಡಾಡ್

  • 2ನೇ ಟಿ20 ಪಂದ್ಯ, ಆಗಸ್ಟ್ 6, ರಾತ್ರಿ 8.00, ಗಯಾನಾ

  • 3ನೇ ಟಿ20 ಪಂದ್ಯ, ಆಗಸ್ಟ್ 8, ರಾತ್ರಿ 8.00, ಗಯಾನಾ

  • 4ನೇ ಟಿ20 ಪಂದ್ಯ, ಆಗಸ್ಟ್ 12, ರಾತ್ರಿ 8.00, ಫ್ಲೋರಿಡಾ

  • ಐದನೇ ಟಿ20 ಪಂದ್ಯ, ಆಗಸ್ಟ್ 13, ರಾತ್ರಿ 8.00, ಫ್ಲೋರಿಡಾ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ