ಮುರಿಯೋದು ಬಿಡಿ... ಯಾರಿಂದಲೂ ಟಚ್ ಮಾಡೋಕು ಸಾಧ್ಯವಿಲ್ಲದ ಭಾರತದ ಸ್ಪಿನ್ ಮಾಸ್ಟರ್ ಆರ್ ಅಶ್ವಿನ್ ಹೆಸರಲ್ಲಿರುವ ದಾಖಲೆಗಳಿವು
Unbreakable Records of R Ashwin: ಆರ್ ಅಶ್ವಿನ್, ಕ್ರಿಕೆಟ್ ಜಗತ್ತು ಕಂಡ ಧೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಅಂತಹ ದಿಗ್ಗಜ ಆಟಗಾರ ಆರ್ ಅಶ್ವಿನ್ ಅವರು ಸೃಷ್ಟಿಸಿದ ಹಲವಾರು ದಾಖಲೆಗಳ ಮಧ್ಯೆ ಒಂದಷ್ಟು ದಾಖಲೆಗಳನ್ನು ಯಾರಿಂದರಲೂ ಮುರಿಯಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಅಂತಹ 5 ದಾಖಲೆಗಳ ಮಾಹಿತಿ ತಿಳಿಯೋಣ.
5 records of Ravichandran Ashwin that no one can break: ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಗಬ್ಬಾ ಟೆಸ್ಟ್ ಬಳಿಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸ್ಪಿನ್ ಮಾಸ್ಟರ್ ನಿರ್ಧಾರ ಅಭಿಮಾನಿಗಳು ಮತ್ತು ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದೆ. ಗಬ್ಬಾ ಟೆಸ್ಟ್ ಅವರ ಕೊನೆಯ ಟೆಸ್ಟ್ ಪಂದ್ಯ.
ಇನ್ನು ಆರ್ ಅಶ್ವಿನ್, ಕ್ರಿಕೆಟ್ ಜಗತ್ತು ಕಂಡ ಧೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಅಂತಹ ದಿಗ್ಗಜ ಆಟಗಾರ ಆರ್ ಅಶ್ವಿನ್ ಅವರು ಸೃಷ್ಟಿಸಿದ ಹಲವಾರು ದಾಖಲೆಗಳ ಮಧ್ಯೆ ಒಂದಷ್ಟು ದಾಖಲೆಗಳನ್ನು ಯಾರಿಂದರಲೂ ಮುರಿಯಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಅಂತಹ 5 ದಾಖಲೆಗಳ ಮಾಹಿತಿ ತಿಳಿಯೋಣ.
ಅತಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ:
ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ 11 ಬಾರಿ "ಪ್ಲೇಯರ್ ಆಫ್ ದಿ ಸೀರೀಸ್" ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ ಈ ಪ್ರಶಸ್ತಿ ಪಡೆದಿರುವ ಆಟಗಾರ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.
5 ವಿಕೆಟ್ ಪಡೆದ ಸಾಧನೆ:
ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ 37 ಬಾರಿ ಇನ್ನಿಂಗ್ಸ್ʼನಲ್ಲಿ 5 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಈ ಸಾಧನೆಯಲ್ಲಿ ವಿಶ್ವದ ಎರಡನೇ ಮತ್ತು ಭಾರತದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಅಶ್ವಿನ್. ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಇದ್ದು ಅವರು 67 ಬಾರಿ ಈ ಸಾಧನೆ ಮಾಡಿದ್ದಾರೆ.
350 ವಿಕೆಟ್‌ಗಳ ಸಾಧನೆ:
ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 66 ಪಂದ್ಯಗಳಲ್ಲಿ 350 ವಿಕೆಟ್‌ಗಳನ್ನು ತಲುಪಿದ ದಾಖಲೆಯನ್ನು ಹೊಂದಿದ್ದಾರೆ. ಇದು ಯಾವುದೇ ಬೌಲರ್ ಇಷ್ಟೊಂದು ವೇಗವಾಗಿ ಮಾಡಲು ಸಾಧ್ಯವಾಗದ ದಾಖಲೆಯಾಗಿದೆ.
ಒಂದೇ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು 5 ವಿಕೆಟ್:
ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ 100 ರನ್ ಮತ್ತು 5 ವಿಕೆಟ್ ಪಡೆದ ದಾಖಲೆಯನ್ನೂ ಮಾಡಿದ್ದಾರೆ. ಇದು ಅತ್ಯಂತ ವಿಶೇಷ ಸಾಧನೆಯಾಗಿದೆ, ಏಕೆಂದರೆ ಒಂದೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುವುದು ತುಂಬಾ ಕಷ್ಟ. ಈ ಮೂಲಕ ಅವರು ಉತ್ತಮ ಆಲ್‌ರೌಂಡರ್ ಎಂಬುದನ್ನು ಸಹ ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ: ಜೈಲಿನಿಂದ ಬಂದ ಚಪ್ಪಲಿ ಬಿಟ್ಟು ಹೊಸ ಚಪ್ಪಲಿ ಹಾಕಿ ಮನೆಗೆ ಹೋದ ಪವಿತ್ರ ಗೌಡ! ಇದೇನಾ ಕಾರಣ?
ಎಡಗೈ ಬ್ಯಾಟ್ಸ್‌ಮನ್‌ಗಳ ವಿಕೆಟ್:
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ ದಾಖಲೆಯನ್ನು ರವಿಚಂದ್ರನ್ ಅಶ್ವಿನ್ ಹೊಂದಿದ್ದಾರೆ. ಇದುವರೆಗೆ 266 ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿರುವ ಅಶ್ವಿನ್ ಅವರ ಬೌಲಿಂಗ್ ವಿಶೇಷತೆಯೇ ಅದು. ಇವರ ಬೌಲಿಂಗ್ ವಿರುದ್ಧ ಎಡಗೈ ಬ್ಯಾಟ್ಸ್ ಮನ್‌ಗಳು ಯಶಸ್ಸು ಕಾಣುವುದೇ ಅಪರೂಪ. ಈ ದಾಖಲೆ ಅವರ ಕ್ರಿಕೆಟ್ ಬದುಕಿನಲ್ಲಿ ಮಹತ್ವದ ಸಾಧನೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.