Pakistan: ಪಾಕಿಸ್ತಾನದಲ್ಲಿ ಬದುಕುವುದು ಜೈಲಿನಲ್ಲಿ ಇದ್ದಂತೆ..! ಹಿರಿಯ ಕ್ರಿಕೆಟಿಗನಿಂದಲೇ ಗಂಭೀರ ಆರೋಪ!
Pakistan: ನ್ಯೂಜಿಲೆಂಡ್’ನ ಹಿರಿಯ ಕ್ರಿಕೆಟಿಗ ಸೈಮನ್ ಡೌಲ್, ಪಾಕಿಸ್ತಾನ ವಿರುದ್ಧದ ಸರಣಿಗೂ ಮುನ್ನ ಇಂತಹ ಹೇಳಿಕೆ ನೀಡಿದ್ದಾರೆ. ಕಾಮೆಂಟೇಟರ್ ಪಾತ್ರವನ್ನು ನಿರ್ವಹಿಸುವ ಡೌಲ್ ಅವರು ತಮ್ಮ ಹೇಳಿಕೆಗಳಿಂದಲೇ ಆಗಾಗ್ಗ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇತ್ತೀಚೆಗೆ, ಲೈವ್ ಕಾಮೆಂಟರಿ ಸಮಯದಲ್ಲಿ ಅವರು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರ ಸ್ಟ್ರೈಕ್ ರೇಟ್ ಅನ್ನು ಟೀಕಿಸಿದರು.
Pakistan: ಪಾಕಿಸ್ತಾನ ಕ್ರಿಕೆಟ್ ತಂಡವು ಉತ್ತಮ ಪ್ರದರ್ಶನ ನೀಡಬಹುದು. ಆದರೆ ಆ ದೇಶದ ಆತಿಥ್ಯದಲ್ಲಿ ಯಾರೂ ಆಡಲು ಸಿದ್ಧರಿರುವುದಿಲ್ಲ. ಇದಕ್ಕೆ ಪ್ರಮುಖ ಉದಾಹರಣೆಯೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ವಿವಾದ. ಇತರ ದೇಶಗಳ ಆಟಗಾರರು ಕೂಡ ಪಾಕಿಸ್ತಾನಕ್ಕೆ ಹೋಗಿ ಆಡಲು ಒಪ್ಪುವುದಿಲ್ಲ. ಸದ್ಯ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವಾಸದಲ್ಲಿದೆ. ಈ ನಡುವೆ ನ್ಯೂಜಿಲೆಂಡ್’ನ ಅನುಭವಿ ಆಟಗಾರನೊಬ್ಬ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ: CSK vs RR ಪಂದ್ಯದಲ್ಲಿ ಅಂಪೈರ್ ವಿರುದ್ಧ ಗಂಭೀರ ಆರೋಪ ಮಾಡಿದ ಅಶ್ವಿನ್! ಹುಟ್ಟಿಕೊಂಡ ಹೊಸ ವಿವಾದ ಏನು?
ನ್ಯೂಜಿಲೆಂಡ್’ನ ಹಿರಿಯ ಕ್ರಿಕೆಟಿಗ ಸೈಮನ್ ಡೌಲ್, ಪಾಕಿಸ್ತಾನ ವಿರುದ್ಧದ ಸರಣಿಗೂ ಮುನ್ನ ಇಂತಹ ಹೇಳಿಕೆ ನೀಡಿದ್ದಾರೆ. ಕಾಮೆಂಟೇಟರ್ ಪಾತ್ರವನ್ನು ನಿರ್ವಹಿಸುವ ಡೌಲ್ ಅವರು ತಮ್ಮ ಹೇಳಿಕೆಗಳಿಂದಲೇ ಆಗಾಗ್ಗ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇತ್ತೀಚೆಗೆ, ಲೈವ್ ಕಾಮೆಂಟರಿ ಸಮಯದಲ್ಲಿ ಅವರು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರ ಸ್ಟ್ರೈಕ್ ರೇಟ್ ಅನ್ನು ಟೀಕಿಸಿದರು. ಅಷ್ಟೇ ಅಲ್ಲ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಮೀರ್ ಸೊಹೈಲ್ ಜತೆಯೂ ವಾಗ್ವಾದ ನಡೆಸಿದ್ದರು. ಇದೀಗ ಅವರು ಪಾಕಿಸ್ತಾನದಲ್ಲಿ ವಾಸಿಸುವ ಅನುಭವವನ್ನು ಹಂಚಿಕೊಂಡಿದ್ದಾರೆ.
ಮಾನಸಿಕ ಹಿಂಸೆಯನ್ನೂ ಎದುರಿಸಬೇಕಾಗಿತ್ತು!
ಈ ನ್ಯೂಜಿಲೆಂಡ್’ನ ಮಾಜಿ ಹಿರಿಯ ಕ್ರಿಕೆಟಿಗ ತಾನು ಪಾಕಿಸ್ತಾನದಲ್ಲಿದ್ದಾಗ ಮಾನಸಿಕ ಹಿಂಸೆಯನ್ನು ಎದುರಿಸಬೇಕಾಯಿತು ಎಂದು ಹೇಳಿದ್ದಾರೆ. ಪಾಕಿಸ್ತಾನದ ಚಾನೆಲ್ ಜಿಯೋ ನ್ಯೂಸ್’ಗೆ ಹೇಳಿಕೆ ನೀಡಿದ ಅವರು, 'ಪಾಕಿಸ್ತಾನದಲ್ಲಿ ವಾಸಿಸುವುದು ಜೈಲಿನಲ್ಲಿ ವಾಸಿಸುವಂತೆ. ಬಾಬರ್ ಆಜಂ ಅಭಿಮಾನಿಗಳು ನನಗಾಗಿ ಕಾಯುತ್ತಿದ್ದರಿಂದ ನನಗೆ ಹೊರಗೆ ಹೋಗಲು ಬಿಡಲಿಲ್ಲ. ಹಲವು ದಿನ ಏನೂ ತಿನ್ನದೇ ಪಾಕಿಸ್ತಾನದಲ್ಲೇ ಇರಬೇಕಾಯಿತು. ನಾನು ಮಾನಸಿಕವಾಗಿ ತುಂಬಾ ನೊಂದಿದ್ದೆ ಆದರೆ ಹೇಗಾದರೂ ನಾನು ಪಾಕಿಸ್ತಾನದಿಂದ ಸುರಕ್ಷಿತವಾಗಿ ಹೊರಬಂದಿದ್ದೇನೆ” ಎಂದು ಹೇಳಿದರು.
ಇದನ್ನೂ ಓದಿ: Shahneel Gill: ‘ದಿಲ್’ ಗೆದ್ದಳು ಅಪ್ಸರೆ..! ಶುಭ್ಮನ್ ಗಿಲ್ ಸಹೋದರಿಯ ಮುಂದೆ ಬಾಲಿವುಡ್ ನಟಿಯರು ಝೀರೋ,,,
ಸದ್ಯ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಅವರ ಮೊದಲ ಪಂದ್ಯ ಶುಕ್ರವಾರ ಅಂದರೆ ಏಪ್ರಿಲ್ 14 ರಂದು ನಡೆಯಲಿದೆ. ಸರಣಿಯ ಆರಂಭಿಕ ಪಂದ್ಯ ಲಾಹೋರ್‌ನಲ್ಲಿ ನಡೆಯಲಿದೆ. ಸರಣಿಯ ಮೊದಲ ಮೂರು ಟಿ20 ಪಂದ್ಯಗಳು ಲಾಹೋರ್’ನಲ್ಲಿ ನಡೆಯಲಿದ್ದು, ಕೊನೆಯ 2 ಪಂದ್ಯಗಳು ರಾವಲ್ಪಿಂಡಿಯಲ್ಲಿ ನಡೆಯಲಿದೆ. ಟಿ20 ನಂತರ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ನೆಲದಲ್ಲಿ 5 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳು ರಾವಲ್ಪಿಂಡಿಯಲ್ಲಿ ಮತ್ತು ಉಳಿದ ಮೂರು ಪಂದ್ಯಗಳು ಕರಾಚಿಯಲ್ಲಿ ನಡೆಯಲಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.