ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ, ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಪಂದ್ಯ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್ ನಡೆಯುತ್ತಿದ್ದ ವೇಳೆ ಮೈದಾನದಲ್ಲಿ ಆರ್‌ಸಿಬಿ ಫ್ಯಾನ್ ಒಬ್ಬಳು ಹುಡುಗನಿಗೆ ಪ್ರಪೋಸ್ ಮಾಡಿದ ಪ್ರಸಂಗ ಇಡೀ ವಿಶ್ವದ ಗಮನ ಸೆಳೆದಿದೆ. ಸಧ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಚೆನ್ನೈ ಸೂಪರ್ ಕಿಂಗ್ಸ್ ನ ಇನಿಂಗ್ಸ್ ನ 11ನೇ ಓವರ್ ನಡೆಯುತ್ತಿದ್ದ ವೇಳೆ ಹುಡುಗಿಯೊಬ್ಬಳು ಮಂಡಿಯೂರಿ ತನ್ನ ಗೆಳೆಯನಿಗೆ ಲವ್ ಪ್ರಪೋಸ್ ಮಾಡಿದಳು, ಇದನ್ನು ಒಪ್ಪಿಕೊಂಡ ಹುಡುಗ, ನಂತರ ಇಬ್ಬರೂ ಪರಸ್ಪರ ಅಪ್ಪಿಕೊಂಡರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.


ಇದನ್ನೂ ಓದಿ : ICC Ranking ನಲ್ಲಿ ಭಾರತ ನಂ.1: ಟೆಸ್ಟ್‌ ಶ್ರೇಯಾಂಕದಲ್ಲೂ ಟೀಂ ಇಂಡಿಯಾಗೆ ಅಗ್ರಸ್ಥಾನ


ಹುಡುಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ಧರಿಸಿದ್ದು, ಹುಡುಗಿ ಕೂಡ ಕೆಂಪು ಬಣ್ಣದ ಡ್ರೆಸ್ ಧರಿಸಿದ್ದಳು. ಪ್ರಪೋಸ್ ಮಾಡಿದಾಗ ಮೈದಾನದಲ್ಲಿ ಗದ್ದಲ, ಚಪ್ಪಾಳೆ ಸದ್ದು ಜೋರಾಗಿತ್ತು.


ಐಪಿಎಲ್ ಮ್ಯಾಚ್ ವೇಳೆ ಮೈದಾನದಲ್ಲಿ ಇಂತಹ ಪ್ರಸಂಗಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಪ್ರೇಕ್ಷಕರು ಮಾತ್ರವಲ್ಲ ಆಟಗಾರರು ಕೂಡ ಇಂತಹ ಪ್ರಪೋಸ್ ಮಾಡಿದ್ದಾರೆ. ಕಳೆದ ವರ್ಷ ಮೈದಾನದಲ್ಲಿಯೇ ಪಂದ್ಯ ಮುಗಿದ ಕೂಡಲೇ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಹಾರ್ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದರು. ಐಪಿಎಲ್ ಮುಗಿದ ನಂತರವೇ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.