ಅಂಪೈರ್ ನಿರ್ಣಯ ಪ್ರಶ್ನಿಸಲು ಮೈದಾನಕ್ಕೆ ನುಗ್ಗಿದ ಧೋನಿ ...! ವೀಡಿಯೋ ವೈರಲ್
ಗುರುವಾರದಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯ ಹಲವು ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಯಿತು.
ನವದೆಹಲಿ: ಗುರುವಾರದಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯ ಹಲವು ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಯಿತು.
ಕೊನೆಯ ಓವರ್ ನಲ್ಲಿ ನೋಬಾಲ್ ಅಂಪೈರ್ ನೋಬಾಲ್ ನೀಡಿ ರನ್ ನೀಡದೆ ಗೊಂದಲ ವ್ಯಕ್ತವಾದಾಗ ತಕ್ಷಣ ಮೈದಾನಕ್ಕೆ ಇಳಿದ ಧೋನಿ ಇಬ್ಬರು ಅಂಪೈರ್ ಗಳನ್ನು ಪ್ರಶ್ನಿಸಿದರು.ಈಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.ಮೈದಾನದಲ್ಲಿ ತಮ್ಮ ಕೂಲ್ ನಡೆಗೆ ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ನಿನ್ನೆ ಮಾತ್ರ ಏಕಾಏಕಿ ರೊಚ್ಚಿಗೆದ್ದು ಅಭಿಮಾನಿಗಳಿಗೆ ತಮ್ಮ ಹೊಸ ಅವತಾರವನ್ನು ಪರಿಚಯಿಸಿದರು.
ಜೈಪುರ್ ನಲ್ಲಿ ನಡೆದ ಈ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಚೆನ್ನೈ ತಂಡಕ್ಕೆ 18 ರನ್ ಗಳ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಬೆನ್ ಸ್ಟೋಕ್ಸ್ ಇತರೆ ರನ್ ಗಳನ್ನೂ ನೀಡುವುದರ ಮೂಲಕ ಚೆನ್ನೈ ತಂಡಕ್ಕೆ ಗೆಲುವನ್ನು ಸುಲಭ ಮಾಡಿದರು. ಧೋನಿ ಈ ಪಂದ್ಯದಲ್ಲಿ 43 ಎಸೆತಗಳಲ್ಲಿ 58 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.