ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2020 ಕ್ಕೆ ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 38 ವರ್ಷದ ಧೋನಿ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಕಲ್ಲಂಗಡಿ ಮತ್ತು ಪಪ್ಪಾಯಿ ಬೆಳೆಯುವುದರಲ್ಲಿ ನಿರತರಾಗಿದ್ದಾರೆ.


COMMERCIAL BREAK
SCROLL TO CONTINUE READING

ಧೋನಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಸಾವಯವ ಕಲ್ಲಂಗಡಿಗಳು ಮತ್ತು ಪಪ್ಪಾಯಿಗಳನ್ನು ಬೆಳೆಸುವ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕೆಲವು ಜನರೊಂದಿಗೆ ಕಾಣಿಸಿಕೊಂಡಿದ್ದಾರೆ.'ರಾಂಚಿಯಲ್ಲಿ ಕಲ್ಲಂಗಡಿ ಸಾವಯವ ಕೃಷಿಯ ಪ್ರಾರಂಭ ಮತ್ತು ನಂತರ 20 ದಿನಗಳ ಅವಧಿಯಲ್ಲಿ ಪಪ್ಪಾಯಿ. ಮೊದಲ ಬಾರಿಗೆ ತುಂಬಾ ಉತ್ಸುಕನಾಗಿದ್ದೆ" ಎಂದು ಧೋನಿ ವಿಡಿಯೋ ಶೀರ್ಷಿಕೆ ಬರೆದಿದ್ದಾರೆ.



ಈ ವೀಡಿಯೊದಲ್ಲಿ ಧೋನಿ ಪ್ರಾರ್ಥನೆ ಸಲ್ಲಿಸುವುದು ಮತ್ತು ಧಾರ್ಮಿಕ ವಿಧಿಗಳನ್ನು ನಡೆಸುವುದು ಕಂಡುಬರುತ್ತದೆ. ಸಂಪ್ರದಾಯದ ಪ್ರಕಾರ ತೆಂಗಿನಕಾಯಿಯನ್ನು ಒಡೆಯುವುದು ಮತ್ತು ನಂತರ ಹೂವುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸುವುದನ್ನು ಕಾಣಬಹುದು. ಕಲ್ಲಂಗಡಿ ಮತ್ತು ಪಪ್ಪಾಯಿಯನ್ನು ಬೆಳೆಯಲು ಗದ್ದೆಯನ್ನು ಹಲವಾರು ಸಾಲುಗಳಾಗಿ ವಿಂಗಡಿಸಲಾಗಿದೆ ಮತ್ತು ಪ್ರತಿಯೊಂದನ್ನು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗುತ್ತದೆ.