ನವದೆಹಲಿ: ಕ್ರಿಕೆಟ್ ವಿಶ್ವಕಪ್ 2019 ರಲ್ಲಿ (ಐಸಿಸಿ ಕ್ರಿಕೆಟ್ ವಿಶ್ವಕಪ್ 2019) ಭಾರತಕ್ಕೆ ದೊಡ್ಡ ಆಘಾತ ಎದುರಾಗಿದೆ. ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ  ಎನ್ನುವಷ್ಟರಲ್ಲಿ ಭಾನುವಾರ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಆರಂಭಿಕ ಆಟಗಾರ ಶಿಖರ್ ಧವನ್‌ಗೆ ವೈದ್ಯರು ಮೂರು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ. 


COMMERCIAL BREAK
SCROLL TO CONTINUE READING

ಭಾನುವಾರ ನಡೆದ ಪಂದ್ಯದಲ್ಲಿ, ಶಿಖರ್ ಧವನ್ ಆಕರ್ಷಕ ಶತಕವನ್ನು ಸಿಡಿಸಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ಗೆಲುವಿಗೆ ನೆರವಾಗಿದ್ದರು. ಬ್ಯಾಟಿಂಗ್ ಸಮಯದಲ್ಲಿ, ಹೆಬ್ಬೆರಳಿಗೆ ನೋವಾಯಿತು. ಬೆರಳಿನ ನೋವಿನ ನಡುವೆಯೂ ಅವರು 109 ಎಸೆತಗಳಲ್ಲಿ 117 ರನ್ ಕಲೆಹಾಕಿದ್ದರು. 


ಬಳಿಕ ಶಿಖರ್ ಧವನ್‌ಗೆ ಚಿಕಿತ್ಸೆ ನೀಡಿದ್ದ ವೈದ್ಯರು ಮುನ್ನೆಚ್ಚರಿಕಾ ಕ್ರಮವಾಗಿ ಸ್ಕಾನಿಂಗ್ ಮಾಡಿಸಿದ್ದರು. ಧವನ್‌ ಬೆರಳು ಬಿರುಕುಗೊಂಡಿರುವ ಕಾರಣ ವೈದ್ಯರು ಅವರಿಗೆ ಮೂರು ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ.


ವೈದ್ಯರ ಸೂಚನೆ ಮೇರೆಗೆ ಧವನ್ ಮೂರು ವಾರಗಳು ಕ್ರಿಕೆಟ್‌ನಿಂದ ದೂರ ಉಳಿಯುತ್ತಿರುವ ಹಿನ್ನೆಲೆಯಲ್ಲಿ ಜೂ.13 ಹಾಗೂ 16 ರಂದು ನ್ಯೂಝಿಲ್ಯಾಂಡ್ ಹಾಗೂ ಪಾಕಿಸ್ತಾನ ವಿರುದ್ಧ ಭಾರತ ಆಡಲಿರುವ ಮಹತ್ವದ ವಿಶ್ವಕಪ್‌ ಪಂದ್ಯಗಳಿಂದ ವಂಚಿತರಾಗಿದ್ದಾರೆ.