ಟೇಬಲ್ ಟೆನಿಸ್ ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ ಮನಿಕಾ ಬಾತ್ರಾ
ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಶನಿವಾರ ನಡೆಯುತ್ತಿರುವ ITTF-ATTU ಏಷ್ಯನ್ ಕಪ್ ಟೂರ್ನಿಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡರು, ಆ ಮೂಲಕ ಈಗ ಈ ಟೂರ್ನಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾಡ್ಲರ್ ಎನಿಸಿಕೊಂಡಿದ್ದಾರೆ.
ಬ್ಯಾಂಕಾಂಕ್: ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಶನಿವಾರ ನಡೆಯುತ್ತಿರುವ ITTF-ATTU ಏಷ್ಯನ್ ಕಪ್ ಟೂರ್ನಿಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡರು, ಆ ಮೂಲಕ ಈಗ ಈ ಟೂರ್ನಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾಡ್ಲರ್ ಎನಿಸಿಕೊಂಡಿದ್ದಾರೆ.
ಅವರು ಕಂಚಿನ ಪದಕಕ್ಕಾಗಿ ವಿಶ್ವದ ಆರನೇ ಶ್ರೇಯಾಂಕದ ಮತ್ತು ಮೂರು ಬಾರಿ ಏಷ್ಯನ್ ಚಾಂಪಿಯನ್ ಹಿನಾ ಹಯಾತಾ ವಿರುದ್ಧ 4-2 ಅಂತರದಿಂದ ಗೆದ್ದರು.ಬಾತ್ರಾ ತಮ್ಮ ಎದುರಾಳಿಯನ್ನು 11-6, 6-11, 11-7, 12-10, 4-11, 11-2 ಅಂತರದಿಂದ ಸೋಲಿಸಿದರು.ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯದಲ್ಲಿ ಮಿಮಾ ಇಟೊ ವಿರುದ್ಧ 2-4 (8-11, 11-7, 7-11, 6-11, 11-8, 7-11) ಅಂತರದಿಂದ ಸೋತಿದ್ದರು. ಸೋತರೂ ಕಂಚಿನ ಪದಕದ ಪಂದ್ಯದಲ್ಲಿ ಆಡಿ ಬಹುಮಾನ ಗೆದ್ದರು.ಹನಿ ಟ್ರಾಪ್ ಹನಿಗಳು ಸಿಎಂ ಕಚೇರಿಯಲ್ಲಿ ಬಿದ್ದಿದ್ದರ ಬಗ್ಗೆ ಸಿಎಂ ಬೊಮ್ಮಾಯಿ ಮಾತಾಡ್ಬೇಕು: ಕಾಂಗ್ರೆಸ್
ಗುರುವಾರ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕಪ್ 2022 ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ವಿಶ್ವ ನಂ. 7 ಚೀನಾದ ಚೆನ್ ಕ್ಸಿಂಗ್‌ಟಾಂಗ್ ವಿರುದ್ಧ ಜಯ ದಾಖಲಿಸಲು ಬಾತ್ರಾ ಅದ್ಭುತ ಪ್ರದರ್ಶನ ನೀಡಿದರು.ಹುವಾಮಾರ್ಕ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪೈಪೋಟಿಯಲ್ಲಿ ವಿಶ್ವ ನಂ.44 ಬಾತ್ರಾ ಅವರು ನಾಲ್ಕನೇ ಶ್ರೇಯಾಂಕದ ಟೇಬಲ್ ಟೆನಿಸ್ ಆಟಗಾರರನ್ನು 4-3 (8-11, 11-9, 11-6, 11-6, 9-11, 8-11, 11- ಸೆಟ್‌ಗಳಿಂದ ಸೋಲಿಸಿದರು.
ಇದನ್ನೂ ಓದಿ: ಬಡ ಮಕ್ಕಳ ಹಾಲಿಗೂ ಕನ್ನ : ʼಕ್ಷೀರಭಾಗ್ಯʼ ಕಾಳಸಂತೆಯಲ್ಲಿ ಮಾರಾಟ..!
ಇದರ ಬೆನ್ನಲ್ಲೇ ಅವರು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದರು, ಅಲ್ಲಿ, ಅವರು 4-3 (6-11, 11-6, 11-5, 11-7, 8-11, 9-11, 11-9) ರಿಂದ ತೈವಾನ್‌ನ ಚೆನ್ ಸ್ಜು-ಯು ಅವರನ್ನು ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆದರು.ಏಷ್ಯನ್ ಕಪ್‌ನ ಪ್ರಸಕ್ತ ಆವೃತ್ತಿಯು ನವೆಂಬರ್ 17 ರಿಂದ ನವೆಂಬರ್ 19 ರವರೆಗೆ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿರುವ ಹುವಾಮಾರ್ಕ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.