ಲಂಡನ್:ಮಾಜಿ ವಿಶ್ವದ ನಂಬರ್ 1 ಟೆನಿಸ್ ಆಟಗಾರ  ಮರತ್ ಸಾಪಿನ್  ರೋಜರ್ ಫೆಡೆರೆರ್ ಮತ್ತು ರಾಫೆಲ್ ನಡಾಲ್ ಟೆನಿಸ್ ನಲ್ಲಿನ ಪ್ರಭಾವದ ಬಗ್ಗೆ ಮಾತನಾಡುತ್ತಾ ಟೆನಿಸ್ ಕುರಿತಾಗಿ ಸಂಶಯ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ಸಾಫಿನ್ 2009ರಲ್ಲಿ ಟೆನಿಸ್ ನಿವೃತ್ತಿ ಹೊಂದಿದ್ದರು.ಆ ಸಂದರ್ಭದಲ್ಲಿ ರೋಜರ್ ಫೆಡರರ್ ರಾಫೆಲ್ ನಡಾಲ್  ನೋವಾಕ್ ಜೋಕೊವೊವಿಕ್  ಮತ್ತು ಆಂಡಿ ಮುರ್ರೆ ಯವರು ಅಂದಿನಿಂದ ಜಾಗತಿಕ ಟೆನಿಸ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಸಿರುವ ಸಾಫಿನ್ ಅಲ್ಲಿಂದ ಇಲ್ಲಿಯವರೆಗೆ ಟೆನಿಸ್ ನಲ್ಲಿ ಹೆಚ್ಚಿನ ಬೆಳವಣಿಗೆಯಾಗಿಲ್ಲವೆಂದರು. ಫೆಡೆರೆರ್ ಮತ್ತು ನಡಾಲ್ ಟೆನಿಸ್ನಲ್ಲಿ ಇನ್ನು ಗೆಲ್ಲುತ್ತಿದ್ದಾರೆಂದರೆ ಅದರಲ್ಲಿ ಏನೂ ಸಮಸ್ಯೆ ಇದೆ ಎಂದರು. ಈ ಹಿಂದೆ ಟೂರ್ನಿಗಳಲ್ಲಿ 16,17ರ ವಯಸ್ಸಿನಲ್ಲಿ ಪಂದ್ಯಗಳನ್ನು ಗೆಲ್ಲುತ್ತಿದ್ದರು.ಆದರೆ ಈಗ ಅದು 25ರ ನಂತರ ಗೆಲ್ಲಲು ಸಾಧ್ಯವಾಗುತ್ತಿದೆ. 


ಇದುವರೆಗೆ ರೋಜರ್ ಫೆಡರರ್, ರಾಫೆಲ್ ನಡಾಲ್, ನೋವಾಕ್ ಜೋಕೊವೊವಿಕ್  ಮತ್ತು ಆಂಡಿ ಮುರ್ರೆ ಎಲ್ಲರು 51 ಟೂರ್ನಿಗಳಲ್ಲಿ 49 ನ್ನು ಗೆದ್ದಿದ್ದಾರೆ.ಸಾಫಿನ್ ರವರ ಹೇಳುವಂತೆ ಈ ಮೊದಲು ಆಟಗಾರರು 30ನೆ ವಯಸ್ಸಿಗೆ ನಿವೃತ್ತಿ ಹೊಂದುತ್ತಿದ್ದರುರು ಆದರೆ ಈಗ ಅದು 38ರವರೆಗೆ ಆಗಿದೆ ಎಂದರು.