ಶೋಯೆಬ್ ಅಖ್ತರ್ ಹೆಸರಿನಲ್ಲಿರುವ 161.3 KM ವೇಗದ ಬೌಲಿಂಗ್ ದಾಖಲೆ ಮುರಿಯಬಲ್ಲ ಸಾಮಾರ್ಥ್ಯ ಇರೋದು ಇಡೀ ಜಗತ್ತಲ್ಲಿ ಈತನಿಗೆ ಮಾತ್ರ! ಆತ ಭಾರತದ ಸ್ಟಾರ್ ಬೌಲರ್...
Fastest Bowler in Cricket History: ಇಲ್ಲಿಯವರೆಗೂ ಯಾವುದೇ ಬೌಲರ್ ಶೋಯೆಬ್ ಅಖ್ತರ್ ಅವರ ಈ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಓರ್ವ ಬೌಲರ್ ಮಾತ್ರ ಆ ದಾಖಲೆ ಮುರಿಯುವ ಸಾಮಾರ್ಥ್ಯ ಹೊಂದಿದ್ದಾನೆ.
Mayank Yadav: ಸದ್ಯ ವಿಶ್ವದ ಅತಿ ವೇಗದ ಬಾಲ್ ಎಸೆದ ದಾಖಲೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೆಸರಿನಲ್ಲಿದೆ. ಅಖ್ತರ್ 2003ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮಾಡಿದ ಬೌಲಿಂಗ್, ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲಿಂಗ್ ಎನಿಸಿಕೊಂಡಿದೆ. ಇನ್ನು ಶೋಯೆಬ್ ಅಖ್ತರ್ ಎಸೆದ ಆ ಚೆಂಡಿನ ವೇಗ ಗಂಟೆಗೆ 161.3 ಕಿ.ಮೀ. ಇತ್ತು. ಇಲ್ಲಿಯವರೆಗೂ ಯಾವುದೇ ಬೌಲರ್ ಶೋಯೆಬ್ ಅಖ್ತರ್ ಅವರ ಈ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಓರ್ವ ಬೌಲರ್ ಮಾತ್ರ ಆ ದಾಖಲೆ ಮುರಿಯುವ ಸಾಮಾರ್ಥ್ಯ ಹೊಂದಿದ್ದಾನೆ.
ಆ ಬೌಲರ್ ಬೇರೆ ಯಾರೂ ಅಲ್ಲ ಭಾರತದ ವೇಗಿ ಮಯಾಂಕ್ ಯಾದವ್. ಮಯಾಂಕ್ ಯಾದವ್ ಬಾಲ್ಯದಿಂದಲೂ ಜೆಟ್ ವಿಮಾನ, ರಾಕೆಟ್ ಮತ್ತು ಸೂಪರ್ ಬೈಕ್‌ಗಳ ವೇಗದಿಂದ ಪ್ರಭಾವಿತರಾಗಿದ್ದರಂತೆ. ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವಾಗ ಮಯಾಂಕ್ ಯಾದವ್ ಅತ್ಯಂತ ವೇಗದ ಚೆಂಡನ್ನು ಬೌಲ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದರು. ಅಂದು RCB ವಿರುದ್ಧದ ಪಂದ್ಯದಲ್ಲಿ ಮಯಾಂಕ್ 156.7 kmph ವೇಗದಲ್ಲಿ ಚೆಂಡನ್ನು ಬೌಲ್ ಮಾಡಿದ್ದರು.
ಮಯಾಂಕ್ ಯಾದವ್ ಗಂಟೆಗೆ 156 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದಿದ್ದಾರೆ. ಮಯಾಂಕ್ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಭಾರತ ಪರ 3 ಟಿ20 ಪಂದ್ಯಗಳನ್ನಾಡಿರುವ ಮಯಾಂಕ್ ಯಾದವ್ 4 ವಿಕೆಟ್ ಕಬಳಿಸಿದ್ದಾರೆ. ಅಂದಹಾಗೆ ಮಯಾಂಕ್ ಯಾದವ್ ತಮ್ಮ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡರೆ, ಒಂದಲ್ಲ ಒಂದು ದಿನ ಶೋಯೆಬ್ ಅಖ್ತರ್ ಅವರ ವಿಶ್ವ ದಾಖಲೆಯನ್ನು ಮುರಿಯಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: "ಸಲ್ಮಾನ್ ಖಾನ್ ಬದುಕಬೇಕೆಂದರೆ ಇರೋದು ಒಂದೇ ದಾರಿ"- ಬಿಷ್ಣೋಯ್ ಗ್ಯಾಂಗ್‌ನಿಂದ ಸಂಚಲನಕಾರಿ ಹೇಳಿಕೆ
ಮಯಾಂಕ್ ಯಾದವ್ ಹುಟ್ಟಿದ್ದು ದೆಹಲಿಯಲ್ಲಿ ಆದರೆ ಅವರ ನಿಕಟತೆ ಹೆಚ್ಚಾಗಿರೋದು ಬಿಹಾರದ ಜೊತೆ. ಮಯಾಂಕ್ ಸುಪೌಲ್‌ನ ಮರೋನಾ ಬ್ಲಾಕ್‌ನ ರಾಥೋ ಗ್ರಾಮಕ್ಕೆ ಸೇರಿದವರು. ಅವರ ತಂದೆ ಪ್ರಭು ಯಾದವ್ ಅವರು ದೆಹಲಿಯ ಡ್ಯೂರಾ ಇಂಡಿಯಾ ಟೋನ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಸೈರನ್ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ಮಯಾಂಕ್ ಯಾದವ್ ಅವರ ತಂದೆ ಪ್ರಭು ಯಾದವ್ ಚಹಾ ಅಂಗಡಿಯಲ್ಲಿ ಮತ್ತು ಮೊಟ್ಟೆಯ ಅಂಗಡಿಯಲ್ಲಿ ಕೆಲಸ ಮಾಡಬೇಕಾಗಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ