Asian Games 2018: ರೋಯಿಂಗ್ನಲ್ಲಿ ಭಾರತಕ್ಕೆ ಚಿನ್ನದ ಪದಕ
ರೋಯಿಂಗ್ನ ಸಿಂಗಲ್ ಸ್ಕಲ್ಸ್ನಲ್ಲಿ ದುಷ್ಯಂತ್ ಹಾಗೂ ಡಬಲ್ ಸ್ಕಲ್ಸ್ನಲ್ಲಿ ರೋಹಿತ್ ಕುಮಾರ್ ಮತ್ತು ಭಗವಾನ್ ದಾಸ್ ಕಂಚಿನ ಪದಕ ಗೆದ್ದಿದ್ದಾರೆ.
ನವದೆಹಲಿ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರ 18 ನೇ ಆವೃತ್ತಿಯ ಆರನೇ ದಿನ ಕ್ರೀಡಾಕೂಟವಾದ ಇಂದೂ ಸಹ ಭಾರತದ ಚಿನ್ನದ ಬೇಟೆ ಮುಂದುವರೆದಿದೆ. ಭಾರತವು 9 ನೇ ಶ್ರೇಯಾಂಕದಲ್ಲಿ ಒಟ್ಟು 21 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 5 ಚಿನ್ನ, 4 ಬೆಳ್ಳಿ ಮತ್ತು 12 ಕಂಚಿನ ಪದಕಗಳು ಸೇರಿವೆ.
ಏಷ್ಯನ್ ಕ್ರೀಡಾಕೂಟದಲ್ಲಿ ರೋಯಿಂಗ್, ಪುರುಷರ ಕ್ವಾಡ್ರುಪ್ ಫೈನಲ್ನಲ್ಲಿ ಭಾರತ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಥೈಲ್ಯಾಂಡ್ ತನ್ನ ಗುರಿ ತಲುಪಲು 6:22:41 ಸಮಯ ತೆಗೆದುಕೊಂಡಿತು. ಭಾರತದ ಸವಾರ್ನ್ ಸಿಂಗ್, ದತ್ತು ಬಾಬಾನ್ ಭೋಕನಾಲ್, ಓಂ ಪ್ರಕಾಶ್, ಸುಖ್ಮೆತ್ ಸಿಂಗ್ 6:20:58ರಲ್ಲಿ ತಮ್ಮ ಗುರಿ ಸೇರಿದರು. ಇದರಿಂದಾಗಿ ಭಾರತಕ್ಕೆ 2018 ಏಷ್ಯನ್ ಗೇಮ್ಸ್ನಲ್ಲಿ 5 ನೇ ಚಿನ್ನದ ಪದಕ ಲಭಿಸಿದೆ.
ಇದು ರೋವಿಂಗ್ನಲ್ಲಿ ಭಾರತದ ಎರಡನೇಯ ಚಿನ್ನದ ಪದಕವಾಗಿದೆ. ರೋವಿಂಗ್ ಇಂಡಿವಿಜುಯಲ್ ನಲ್ಲಿ ಗುವಾಂಗ್ಝೌ ಏಷ್ಯನ್ ಗೇಮ್ಸ್ 2010ರಲ್ಲಿ ಭಾರತದ ಬಜ್ರಂಗ್ ಲಾಲ್ ತಖರ್ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದರು.