“ಇದೇ ಕಾರಣಕ್ಕೆ ಯುಜ್ವೇಂದ್ರ ಚಹಾಲ್’ರನ್ನು RCBಯಿಂದ ಕೈಬಿಟ್ಟಿದ್ದು”: ಕಡೆಗೂ ಉತ್ತರ ನೀಡಿದ ಮೈಕ್ ಹಸನ್
Mike Hasan statement about Yuzvendra Chahal: “ನಾವು ಮೂವರು ಆಟಗಾರರನ್ನು ಉಳಿಸಿಕೊಂಡಿದ್ದು, ಇದರಿಂದ 4 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಪಡೆದಿದ್ದೇವೆ. ಯುಜಿ ಮತ್ತು ಹರ್ಷಲ್ ಅವರನ್ನು ಮರಳಿ ಖರೀದಿಸಬೇಕಾಯಿತು. ಮತ್ತೆ ಖರೀದಿಸುವಾಗ, ಹರಾಜಿನಲ್ಲಿ ಯುಜಿ ಹೆಸರು ಬಹಳ ತಡವಾಗಿ ಬಂದಿತು” ಎಂದಿದ್ದಾರೆ.
Yuzvendra Chahal: 2022ರ ಐಪಿಎಲ್ ಹರಾಜಿನ ಮೊದಲು ಯುಜ್ವೇಂದ್ರ ಚಹಾಲ್ RCBಯಿಂದ ಬಿಡುಗಡೆಯಾಗಿದ್ದರು. ಈ ಬೆಳವಣಿಗೆ ಕ್ರಿಕೆಟ್ ಲೋಕದಲ್ಲಿ ಅಚ್ಚರಿಯ ಸುದ್ದಿಯಾಗಿತ್ತು. ಅಷ್ಟೇ ಅಲ್ಲದೆ, ತನ್ನನ್ನು ಹೊರಗಿಟ್ಟ ಬಳಿಕ ಚಹಾಲ್ ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ಎಲ್ಲಾ ವಿಷಯಗಳ ಬಗ್ಗೆ ಇದೀಗ ತಂಡದ ಮಾಜಿ ನಿರ್ದೇಶಕ ಮೈಕ್ ಹೆಸ್ಸನ್ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: Yashasvi Jaiswal: ಟೆಂಟ್’ನಿಂದ ಅರಮನೆಯತ್ತ… ಎಷ್ಟೊಂದು ಅದ್ಭುತವಾಗಿದೆ ನೋಡಿ ಯಶಸ್ವಿ ಜೈಸ್ವಾಲ್ ಐಷಾರಾಮಿ ಮನೆ!
“ನಾವು ಮೂವರು ಆಟಗಾರರನ್ನು ಉಳಿಸಿಕೊಂಡಿದ್ದು, ಇದರಿಂದ 4 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಪಡೆದಿದ್ದೇವೆ. ಯುಜಿ ಮತ್ತು ಹರ್ಷಲ್ ಅವರನ್ನು ಮರಳಿ ಖರೀದಿಸಬೇಕಾಯಿತು. ಮತ್ತೆ ಖರೀದಿಸುವಾಗ, ಹರಾಜಿನಲ್ಲಿ ಯುಜಿ ಹೆಸರು ಬಹಳ ತಡವಾಗಿ ಬಂದಿತು” ಎಂದಿದ್ದಾರೆ.
“ಹರ್ಷಲ್ ಮೊದಲ ಮೂರು ಸೆಟ್’ಗಳಲ್ಲಿದ್ದರು. ಯುಜಿ ಸಾಕಷ್ಟು ಕುಸಿತ ಕಂಡಿದ್ದರು. ಚಹಲ್’ಗಾಗಿ ಆರನೇ ಸೆಟ್ ವರೆಗೂ ಕಾದು ಹಣ ಉಳಿಸಿಕೊಂಡಿದ್ದರೆ, ನಮಗಿಂತ ಹೆಚ್ಚು ಹಣವಿರುವ ಐದು ತಂಡಗಳಿದ್ದವು. ಊಹಿಸಿಕೊಳ್ಳಿ, ನಾವು ಎಲ್ಲಾ ಬೌಲರ್‌ಗಳನ್ನು ಹೋಗಲು ಬಿಟ್ಟಿದ್ದರೆ ಮತ್ತು ಯುಜಿಯನ್ನು ಸಹ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ನಾವು ಲೆಗ್ ಸ್ಪಿನ್ನರ್ ಇಲ್ಲದೆ ಉಳಿಯಬೇಕಾಗಿತ್ತು. ಯುಜಿಯನ್ನು ಮರಳಿ ಕರೆತರುವುದು ಹೇಗೆ ಎಂದು ಅಣಕು ಹರಾಜಿನಲ್ಲಿ ಸಾಕಷ್ಟು ಚರ್ಚಿಸಿದ್ದೆವು” ಎಂದಿದ್ದಾರೆ.
ಇದನ್ನೂ ಓದಿ: 15 ವರ್ಷ ಪ್ರತಿದಿನ 500 ಬಾಲ್’ಗಳಿಂದ ಅಭ್ಯಾಸ…ಸರ್ಫರಾಜ್ ಸತತ ಪರಿಶ್ರಮಕ್ಕೆ ಕಡೆಗೂ ಸಿಕ್ತು ಫಲ!
“ಹರಾಜಿನ ಮೊದಲು ಯುಜುವೇಂದ್ರಗೆ ಕರೆ ಮಾಡಲಾಗಿತ್ತು. ಆದರೆ ಅವರು ನಿರಾಶೆಗೊಂಡರು. ಅಷ್ಟೇ ಅಲ್ಲದೆ, ಹರಾಜಿನಲ್ಲಿ ವಿಷಯಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಅವನಿಗೆ ವಿವರಿಸುವುದು ಕಷ್ಟಕರವಾಗಿತ್ತು. ಅದರಲ್ಲಿ ಆಸಕ್ತಿಯನ್ನು ಸಹ ತೆಗೆದುಕೊಳ್ಳುತ್ತಿರಲಿಲ್ಲ. ಇದಕ್ಕಾಗಿ ಅವರನ್ನು ದೂಷಿಸಬಾರದು. ಏಕೆಂದರೆ ಅವರು ಆರ್’ಸಿಬಿ ಆಟಗಾರರಾಗಿದ್ದು, ಕೈಬಿಟ್ಟಾಗ ಕೋಪಗೊಂಡಿದ್ದರು” ಎಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.