ಏಕದಿನ ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ ಮಿಥಾಲಿ ರಾಜ್
ಸೆಡಾನ್ ಪಾರ್ಕ್ ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ 200 ಏಕದಿನ ಪಂದ್ಯಗಳಲ್ಲಿ ಆಡಿದ ಮೊದಲ ಕ್ರಿಕೆಟ್ ಆಟಗಾರ್ತಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.
ಹ್ಯಾಮಿಲ್ಟನ್: ಸೆಡಾನ್ ಪಾರ್ಕ್ ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ 200 ಏಕದಿನ ಪಂದ್ಯಗಳಲ್ಲಿ ಆಡಿದ ಮೊದಲ ಕ್ರಿಕೆಟ್ ಆಟಗಾರ್ತಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.
1999 ರ ಜೂನ್ ನಲ್ಲಿ ಐರ್ಲೆಂಡ್ ವಿರುದ್ಧದ ಚೊಚ್ಚಲ ಪಂದ್ಯದ ಮೂಲಕ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಮಿಥಾಲಿ ರಾಜ್ ಇಂಗ್ಲಿಷ್ ಕ್ರಿಕೆಟ ಆಟಗಾರ್ತಿ ಚಾರ್ಲೊಟ್ ಎಡ್ವರ್ಡ್ಸ್ ಅವರ 191 ಪಂದ್ಯಗಳ ದಾಖಲೆಯನ್ನು ಅಳಿಸಿಹಾಕಿದರು.
ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 6000ಕ್ಕೂ ಅಧಿಕ ರನ್ ಗಳಿಸಿರುವ ದಾಖಲೆ ಮಿಥಾಲಿ ರಾಜ್ ಪಾತ್ರರಾಗಿದ್ದಾರೆ. ಅಲ್ಲದೆ ಟ್ವೆಂಟಿ ಕ್ರಿಕೆಟ್ ನಲ್ಲಿಯೂ ಕೂಡ 2000 ರನ್ ಗಳಿಸಿರುವ ಮೊದಲ ಮಹಿಳಾ ಆಟಗಾರ್ತಿ ಎನ್ನುವ ದಾಖಲೆಯನ್ನು ಹೊಂದಿದ್ದಾರೆ. ವಿಶೇಷವೆಂದರೆ ಮಿಥಾಲಿ ರಾಜ್ 2005 ರಲ್ಲಿ ಮತ್ತು 2017 ರಲ್ಲಿ ಮಹಿಳಾ ವಿಶ್ವಕಪ್ ಫೈನಲ್ ತಂಡದ ನೇತೃತ್ವವನ್ನು ವಹಿಸಿದ್ದಾರೆ. ಮೂಲತಃ ರಾಜಸ್ತಾನದ ಜೋದಪುರದವರಾಗಿರುವ ಮಿಥಾಲಿ ರಾಜ್ ಸದ್ಯ ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ.