ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ನ ಸ್ಟಾರ್ ಬ್ಯಾಟ್ಸ್ ಮನ್ ಮಿಥಾಲಿ ರಾಜ್  ಈಗ ಟ್ವೆಂಟಿ ಕ್ರಿಕೆಟ್ ನಲ್ಲಿ 2000 ರನ್ ಗಳಿಸಿದ ಮೊದಲ ಭಾರತೀಯಳು ಎನ್ನುವ ಶ್ರೇಯವನ್ನು ತಮ್ಮದಾಗಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಮೂಲತಃ ರಾಜಸ್ತಾನ್ ದ ಜೈಪುರದವರಾದ ಮಿಥಾಲಿ ರಾಜ್ ಅವರು ಶ್ರೀಲಂಕಾ ವಿರುದ್ದ ಮಹಿಳಾ ಏಷ್ಯಾ ಟ್ವೆಂಟಿ ಪಂಧ್ಯದಲ್ಲಿ  23 ರನ್ ಗಳಿಸುವ ಮೂಲಕ ಈ ಶ್ರೇಯವನ್ನು ತಮ್ಮದಾಗಿಸಿಕೊಂಡರು. ಈಗ 75 ಪಂದ್ಯಗಳಲ್ಲಿ ಒಟ್ಟು 2,015ರನ್ ಗಳಿಸಿದ್ದಾರೆ.


ಈಗ ಈ ಸಾಧನೆಯನ್ನು ಗುರುತಿಸಿರುವ ಐಸಿಸಿ ಟ್ವಿಟ್ಟರ್ ಖಾತೆಯಲ್ಲಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದೆ.


"ಧನ್ಯವಾದಗಳು ಮಿಥಾಲಿ ರಾಜ್ ಟ್ವೆಂಟಿ ಪಂಧ್ಯದಲ್ಲಿ 2000 ರನ್ ಗಳ ಮೈಲುಗಲ್ಲನ್ನು ತಲುಪಿದ್ದಕ್ಕೆ,ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕಟ್ ಆಟಗಾರಳು" ಎಂದು ಅದು ಟ್ವೀಟ್ ಮಾಡಿದೆ.


ವಿಶೇಷವೆಂದರೆ ಈ ಸಾಧನೆ ಮಾಡಿದ ವಿಶ್ವದ ಏಳನೆಯ ಆಟಗಾರ್ತಿ ಮಿಥಾಲಿ ರಾಜ್ ಆಗಿದ್ದಾರೆ.ಮಹಿಳಾ ವಿಭಾಗದಲ್ಲಿ  ಚಾರ್ಲೊಟ್ಟೆ ಎಡ್ವರ್ಡ್(2,605)ಅವರು ಅಗ್ರಸ್ಥಾನ ಗಳಿಸಿದ್ದಾರೆ.ಅಚ್ಚರಿಯೆಂದರೆ ಪುರುಷ ಆಟಗಾರರಲ್ಲಿ ಇದುವರೆಗೂ ಯಾರು ಕೂಡ ಟ್ವೆಂಟಿ ಪಂಧ್ಯದಲ್ಲಿ 2000 ರನ್ ಗಳ ದಾಖಲೆಯನ್ನು ಮಾಡಿಲ್ಲ ಎನ್ನುವುದು.ವಿರಾಟ್ ಕೊಹ್ಲಿ 1983 ರನ್ ಗಳನ್ನು ಗಳಿಸಿದ್ದಾರೆ.