ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ಇಬ್ಬರು ದಿಗ್ಗಜರು! ಒಬ್ಬ ಧೋನಿ ಪ್ರಿಯಮಿತ್ರ-ಮತ್ತೊಬ್ಬ ಯುವಿ ಸ್ನೇಹಿತ!
moeen ali and stuart broad retirement: ಮೊಯೀನ್ ಅಲಿ ಇನ್ನು ಮುಂದೆ ಯಾವುದೇ ಸಂದರ್ಭದಲ್ಲೂ ಟೆಸ್ಟ್ ಕ್ರಿಕೆಟ್ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. ಇನ್ನೊಬ್ಬ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ.
moeen ali and stuart broad retirement: ಆಸ್ಟ್ರೇಲಿಯ ವಿರುದ್ಧದ ಆ್ಯಶಸ್ ಸರಣಿಯ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಇಬ್ಬರು ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಸ್ಟುವರ್ಟ್ ಬ್ರಾಡ್ ನಿವೃತ್ತಿ ಬಗ್ಗೆ ಅದಾಗಲೇ ಸುದ್ದಿ ಎಲ್ಲೆಡೆ ಹರಿದಾಡಿದೆ. ಆದರೆ ಈಗ ಕೇವಲ 4 ಟೆಸ್ಟ್ ಪಂದ್ಯಗಳ ಹಿಂದೆಯೇ ನಿವೃತ್ತಿ ಘೋಷಿಸಿ, ಮತ್ತೆ ತಂಡಕ್ಕೆ ಸೇರಿದ ಮೊಯೀನ್ ಅಲಿ ಕೂಡ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ವದಂತಿ ಮಧ್ಯೆ "ಒಂದಾನೊಂದು ಕಾಲದಲ್ಲಿ" ಅಂತಲೇ ಬೋಲ್ಡ್ ಫೋಟೊ ಶೇರ್ ಮಾಡಿದ ದೀಪಿಕಾ..!
ಮೊಯೀನ್ ಅಲಿ ಇನ್ನು ಮುಂದೆ ಯಾವುದೇ ಸಂದರ್ಭದಲ್ಲೂ ಟೆಸ್ಟ್ ಕ್ರಿಕೆಟ್ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. ಅನುಭವಿ ಆಲ್‌ರೌಂಡರ್ ಆರಂಭದಲ್ಲಿ 2021 ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಆದರೆ ಎಡಗೈ ಸ್ಪಿನ್ನರ್ ಜ್ಯಾಕ್ ಲೀಚ್ ಗಾಯಗೊಂಡ ಕಾರಣ, ಮತ್ತೆ ತಂಡಕ್ಕೆ ಪುನರಾಗಮನ ಮಾಡಿದ್ದರು.
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರ ಆದೇಶದ ಮೇರೆಗೆ ಪುನರಾಗಮನ ಮಾಡಿದ ಮೊಯಿನ್ ಅಲಿ, ಈಗ ಇದು ಅಂತಿಮ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ. “ನಾನು ಹಿಂತಿರುಗಿ ಬಂದು ಆಡಿದ್ದೇನೆ ಎಂದು ಹೇಳುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಬ್ರಾಡ್, ಜಿಮ್ಮಿ ಮತ್ತು ವುಡಿ ಅವರೊಂದಿಗೆ ಮತ್ತೊಮ್ಮೆ ಆಡಲು ಅದ್ಭುತ ಅವಕಾಶ ಒದಗಿ ಬಂದಿತ್ತು. ಜೊತೆಗೆ ತಂಡಕ್ಕೆ ಸಹಾಯ ಮಾಡಲು ಸಾಧ್ಯವಾಯಿತು ಎಂದು ನನಗೆ ಖುಷಿಯಾಗುತ್ತಿದೆ” ಎಂದಿದ್ದಾರೆ.
ಆಶಸ್ 2023 ರ ಸರಣಿಯಲ್ಲಿ ಅಲಿಯು ಇಂಗ್ಲೆಂಡ್‌ನ ಪ್ರಮುಖ ಸ್ಪಿನ್ನರ್ ಆಗಿ ಮಾತ್ರವಲ್ಲದೆ ನಂಬರ್ 3 ಬ್ಯಾಟ್ಸ್‌ಮನ್ ಆಗಿಯೂ ಕಣಕ್ಕಿಳಿದಿದ್ದರು. ಆಲ್ ರೌಂಡರ್ ಪಾತ್ರವನ್ನು ಅದ್ಭುತ ರೀತಿಯಲ್ಲಿ ನಿರ್ವಹಿಸಿದ್ದಾರೆ. ಅಲಿ ಬ್ಯಾಟ್ಸ್‌ಮನ್ ಮತ್ತು ಬೌಲರ್ ಎರಡರಲ್ಲೂ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ ಎಂದು ಹೇಳಬಹುದು. ಜೊತೆಗೆ ರೆಡ್ ಬಾಲ್ ಕ್ರಿಕೆಟ್’ನಲ್ಲಿ ತಮ್ಮ ವೃತ್ತಿ ಜೀವನದ 200 ನೇ ವಿಕೆಟ್ ಕೂಡ ಪಡೆದಿದ್ದಾರೆ. ಮೊಯಿನ್ ಅಲಿ ಐಪಿಎಲ್ ಸಂದರ್ಭದಲ್ಲಿ ಸಿಎಸ್ ಕೆ ತಂಡದ ಪರ ಆಡುತ್ತಾರೆ. ಇವರು ಧೋನಿಗೆ ಪರಮಾಪ್ತ ಮತ್ತು ನಂಬಿಕಸ್ಥ ಆಲ್ ರೌಂಡರ್ ಕೂಡ ಹೌದು.
ಇನ್ನೊಬ್ಬ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ. ಸ್ಟುವರ್ಟ್ ಬ್ರಾಡ್ ತಮ್ಮ ವೃತ್ತಿಜೀವನ ಮತ್ತು ದಾಖಲೆಗಳ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. 2007 ರ ಟಿ 20 ವಿಶ್ವಕಪ್ ನಲ್ಲಿ ಭಾರತದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಹೊಡೆದಾಗ, ಅವರ ವೃತ್ತಿಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫಾಲ್ಕೆ ಪ್ರಶಸ್ತಿ ಗೆದ್ದ ಬಾಲಿವುಡ್’ನ ಖ್ಯಾತ ಸಿಂಗರ್ ಪ್ರೀತಿಯಲ್ಲಿ ಬಿದ್ದ ಸ್ಮೃತಿ ಮಂಧಾನ! ಯಾರಾತ ಗೊತ್ತಾ?
2007ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ನನ್ನ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ್ದರು ಎಂದು ಸ್ಟುವರ್ಟ್ ಬ್ರಾಡ್ ಹೇಳಿದ್ದಾರೆ. ಆದರೆ ಆ ಓವರ್ ನನಗೆ ಉತ್ತಮ ಕ್ರಿಕೆಟಿಗನಾಗಲು ನೆರವಾಯಿತು. ಆ ಓವರ್ ನಂತರ ನಾನು ಉತ್ತಮ ಕ್ರಿಕೆಟಿಗನಾದೆ ಎಂದು ಹೇಳಿದರು. ಆ 6 ಎಸೆತಗಳಿಂದಲೇ ನಾನು ಇಂದು ಈ ಸ್ಥಿತಿಗೆ ಬರಲು ಕಾರಣ ಎಂದು ಹೇಳಿದ್ದಾರೆ. ಈ ಮೂಲಕ ಯುವಿ ಮತ್ತು ಸ್ಟುವರ್ಟ್ ಗೆಳೆತನ ಮುಂದುವರೆದಿದೆ. ಇದೀಗ ನಿವೃತ್ತಿ ಘೋಷಿಸುತ್ತಿದ್ದಂತೆ ಸ್ಟುವರ್ಟ್’ಗೆ ಭಾವನಾತ್ಮಕ ಸಂದೇಶವನ್ನು ಯುವಿ ಪೋಸ್ಟ್ ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.