Mohammed Shami: 2023 ರ ODI ವಿಶ್ವಕಪ್‌ʼನಲ್ಲಿ ಮೊಹಮ್ಮದ್ ಶಮಿ ಆಡಿದ 7 ಪಂದ್ಯಗಳಲ್ಲಿ ಪ್ರಮುಖ ವಿಕೆಟ್‌ ಆಗಿ ಹೊರಹೊಮ್ಮಿದ್ದರು. ಟೀಂ ಇಂಡಿಯಾ ಫೈನಲ್‌ ತಲುಪುವಲ್ಲಿ ಶಮಿ ಮಹತ್ವದ ಕೊಡುಗೆ ನೀಡಿದ್ದರು. ಆದರೆ ಇಷ್ಟೆಲ್ಲಾ ಸಾಧನೆ ತೋರುತ್ತಿರುವ ಕ್ರಿಕೆಟಿಗ ಶಮಿ ವೈಯಕ್ತಿಕ ಬದುಕು ಮಾತ್ರ ಸವಾಲಿನಿಂದ ಕೂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಕೊನೆಗೂ ಖುಲಾಯಿಸಿತು ಲಕ್‌; ಮೊದಲ ಬಾರಿಗೆ ವಾರ್ಷಿಕ ಒಪ್ಪಂದದಲ್ಲಿ ಈ ಇಬ್ಬರು ಕ್ರಿಕೆಟಿಗರಿಗೆ ಸ್ಥಾನ


ಮದುವೆಯಾದ ನಾಲ್ಕು ವರ್ಷಗಳಲ್ಲಿ ಪತ್ನಿಯಿಂದಲೇ ನಾನಾ ಆರೋಪಗಳನ್ನು ಎದುರಿಸಿದ್ದರು ಶಮಿ. ಅದಾದ ನಂತರ ಪತ್ನಿ ಹಸಿನ್ ಜಹಾನ್‌ʼನಿಂದ ದೂರವಾಗುವ ನಿರ್ಧಾರ ತೆಗೆದುಕೊಂಡ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಆದರೆ


2018 ರಲ್ಲಿ ಶಮಿ ಅವರ ಪತ್ನಿ ಕೌಟುಂಬಿಕ ಹಿಂಸಾಚಾರ ಮತ್ತು ವಿವಾಹೇತರ ಸಂಬಂಧದ ಆರೋಪದ ಜೊತೆಗೆ, ಶಮಿ ಮ್ಯಾಚ್ ಫಿಕ್ಸಿಂಗ್‌ʼನಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಿದ್ದರು. ಅಷ್ಟೇ ಅಲ್ಲದೆ, ಪೊಲೀಸ್ ದೂರು ಕೂಡ ದಾಖಲಿಸಿದ್ದರು. ಅದಾದ ನಂತರ ಶಮಿಯ ಕೇಂದ್ರ ಒಪ್ಪಂದವನ್ನು ಕೇಂದ್ರ ಕ್ರಿಕೆಟ್ ಮಂಡಳಿಯು ತಡೆಹಿಡಿಯಿತು.


ಹಸಿನ್ ಜಹಾನ್ ಮಾಡೆಲ್ ಮತ್ತು ಚೀರ್‌ ಲೀಡರ್. ಮಾಧ್ಯಮ ವರದಿಗಳ ಪ್ರಕಾರ, ಶಮಿ ಮತ್ತು ಹಸಿನ್ ಜಹಾನ್ 2012 ರಲ್ಲಿ ಭೇಟಿಯಾಗಿದ್ದು, ಅದಾದ ನಂತರ ಪ್ರೀತಿಸಿ ಜೂನ್ 2014 ರಲ್ಲಿ ವಿವಾಹವಾದರು. ಈ ದಂಪತಿಗೆ 2015 ರಲ್ಲಿ ಮಗಳು ಜನಿಸಿದ್ದಳು. ಆದರೆ ಸುಂದರ ಜೀವನದಲ್ಲಿ ಬಿರುಗಾಳಿಯೇ ಎಬ್ಬಿತ್ತು.


ಇದನ್ನೂ ಓದಿ: ಊಟಕ್ಕೂ ಮೊದಲು ಈ ಒಣಹಣ್ಣು ತಿಂದರೆ ಮುಂದಿನ 30 ದಿನಗಳವರೆಗೆ ನಾರ್ಮಲ್‌ ಆಗಿರುತ್ತದೆ ಬ್ಲಡ್‌ ಶುಗರ್!‌


ಇನ್ನು ವಿಚ್ಛೇದನ ಅರ್ಜಿಯನ್ನು ವಿಚಾರಣೆ ನಡೆಸಿದ ಕೋಲ್ಕತ್ತಾ ನ್ಯಾಯಾಲಯವು ಮಾಸಿಕ 1 ಲಕ್ಷ 30 ಸಾವಿರ ರೂ. ಜೀವನಾಂಶ ನೀಡುವಂತೆ ಶಮಿಗೆ ಸೂಚಿಸಿತು. ಇದರಲ್ಲಿ 50 ಸಾವಿರ ಹಸಿನ್ ಜಹಾನ್ʼಗೆ ನೀಡಿದರೆ, ಉಳಿದದ್ದು ಪುತ್ರಿಗೆ ನೀಡಬೇಕೆಂದು ಆದೇಶಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.