India Vs Sri Lanka 1st ODI: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಸುಲಭ ಜಯ ದಾಖಲಿಸಿತು. ಆದರೆ ಈ ಪಂದ್ಯದಲ್ಲಿ ತಂಡದ ಬಲಿಷ್ಠ ಆಟಗಾರ ಸಂಪೂರ್ಣ ವಿಫಲರಾದರು. ಈ ಆಟಗಾರ ಬಹಳ ಸಮಯದ ನಂತರ ತಂಡಕ್ಕೆ ಮರಳಿದ್ದರು, ಆದರೆ ಅವರು ತಮ್ಮ ಆಟ ಪ್ರದರ್ಶಿಸಲು ವಿಫಲರಾದರು.


COMMERCIAL BREAK
SCROLL TO CONTINUE READING

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 67 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಮೊಹಮ್ಮದ್ ಶಮಿಯನ್ನು ವೇಗದ ಬೌಲರ್‌ಗಳಾಗಿ ಸೇರಿಸಿದರು. ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್ ಈ ಪಂದ್ಯದಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್‌ಗಳಾಗಿದ್ದರು, ಆದರೆ ಮೊಹಮ್ಮದ್ ಶಮಿ ಅವರ ಅಭಿಮಾನಿಗಳನ್ನು ಬಹಳಷ್ಟು ನಿರಾಸೆಗೊಳಿಸಿದರು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಭಾರತದ ಅತ್ಯಂತ ದುಬಾರಿ ಬೌಲರ್ ಆಗಿದ್ದರು.


ಇದನ್ನೂ ಓದಿ : IND vs SL: ಸಿಕ್ಕ ಸುವರ್ಣಾವಕಾಶ ಹಾಳು ಮಾಡಿಕೊಂಡ್ರು ಈ ಆಟಗಾರ! ಮೊದಲ ಪಂದ್ಯದಲ್ಲೇ ಹೊರೆಯಾದ್ರಾ?


ಭುಜದ ನೋವಿನಿಂದಾಗಿ ಮೊಹಮ್ಮದ್ ಶಮಿ ತಂಡದಿಂದ ಹೊರನಡೆದಿದ್ದರು. 2022 ರ ಟಿ 20 ವಿಶ್ವಕಪ್ ನಂತರ ತರಬೇತಿ ಅವಧಿಯಲ್ಲಿ ಅವರು ಗಾಯಗೊಂಡರು. ಈ ಸರಣಿಯಿಂದ ತಂಡಕ್ಕೆ ಮರಳಿದ್ದಾರೆ. ಈ ಪಂದ್ಯದಲ್ಲಿ 10 ಓವರ್‌ಗಳನ್ನು ಬೌಲಿಂಗ್ ಮಾಡುವಾಗ, ಮೊಹಮ್ಮದ್ ಶಮಿ 7.44 ರ ಓವರ್‌ನಲ್ಲಿ 67 ರನ್‌ಗಳನ್ನು ನೀಡಿದರು ಮತ್ತು ಕೇವಲ ಒಂದು ವಿಕೆಟ್ ಪಡೆದರು. 


ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು. ಈ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಭಾರತದ ಪರ ಗರಿಷ್ಠ 113 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 83 ರನ್ ಗಳಿಸಿದರು. ಇವರಲ್ಲದೆ ಶುಭಮನ್ ಗಿಲ್ 70 ರನ್ ಮತ್ತು ಕೆಎಲ್ ರಾಹುಲ್ 39 ರನ್ ಗಳಿಸಿದರು. ಈ ಗುರಿಗೆ ಉತ್ತರವಾಗಿ ಶ್ರೀಲಂಕಾ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಉಮ್ರಾನ್ ಮಲಿಕ್ ಗರಿಷ್ಠ 3, ಮೊಹಮ್ಮದ್ ಸಿರಾಜ್ 2 ಹಾಗೂ ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದರು. 


ಇದನ್ನೂ ಓದಿ : IND vs SL 1st ODI Live : ಟೀಂ ಇಂಡಿಯಾಗೆ ಎರಡನೇ ಗೆಲವು ಖಚಿತ : ಎರಡು ವಿಕೆಟ್ ಪಡೆದ ಸಿರಾಜ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.