Jasprit Bumrah: ಭಾರತದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸುಮಾರು 1 ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರು ಈ ವರ್ಷದ ಮಾರ್ಚ್‌ ನಲ್ಲಿ ಗಂಭೀರ ಬೆನ್ನುನೋವಿನ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2019 ರಲ್ಲಿ ಮೊದಲ ಬಾರಿಗೆ ಸ್ಟ್ರೆಸ್ ಫ್ರ್ಯಾಕ್ಚರ್ ಗೆ ತುತ್ತಾಗಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬ್ಯಾಟಿಂಗ್- ವಿಕೆಟ್ ಕೀಪಿಂಗ್’ನಲ್ಲಿ ಧೋನಿ ಆಟ ನೆನಪಿಸುವ ಈ ಆಟಗಾರ Team Indiaಗೆ ಹೆಜ್ಜೆ!


ಈ ಸಮಸ್ಯೆಗಳು ಜಸ್ಪ್ರೀತ್ ಬುಮ್ರಾ ಅವರ ವೃತ್ತಿಜೀವನವನ್ನು ಕೊನೆಗೊಳಿಸಬಹುದು ಎಂದು ಹೇಳಲಾಗುತ್ತಿದೆ. ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಮಾಡುವ ರೀತಿಯೇ ಅವರಿಗೆ ಪದೇ ಪದೇ ಸ್ಟ್ರೆಸ್ ಫ್ರ್ಯಾಕ್ಚರ್ ಆಗಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಬುಮ್ರಾ ಅವರ ಬೌಲಿಂಗ್ ಕ್ರಮವು ಅವರ ಕಾಲುಗಳು ಮತ್ತು ಕೆಳ ಬೆನ್ನಿನ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತಿದೆ. ಇದರಿಂದಾಗಿ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ.


ಇನ್ನು ಟೀಮ್ ಇಂಡಿಯಾದಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಮತ್ತು ಅವರ ವೃತ್ತಿಜೀವನವನ್ನು ಕೊನೆಗೊಳಿಸುವ 3 ಬೌಲರ್‌ಗಳಿದ್ದಾರೆ. ಈ ಮೂವರೂ ಸಹ ಬುಮ್ರಾ ಸ್ಥಾನವನ್ನು ತುಂಬುವಷ್ಟು ಸಾಮಾರ್ಥ್ಯ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.


1. ಮೊಹ್ಸಿನ್ ಖಾನ್: ಭಾರತ ಕೆಲವೇ ಕೆಲವು ಎಡಗೈ ವೇಗದ ಬೌಲರ್‌ ಗಳನ್ನು ಹೊಂದಿದೆ. ಐಪಿಎಲ್ ನಲ್ಲಿ ಅಬ್ಬರ ತೋರಿದ ವೇಗದ ಬೌಲರ್ ಮೊಹ್ಸಿನ್ ಖಾನ್ ಅದ್ವಿತೀಯ ಪ್ರತಿಭೆ. ಸುಮಾರು 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾ ಚೆಂಡನ್ನು ಸ್ವಿಂಗ್ ಮಾಡುವುದರಲ್ಲಿ ಪರಿಣತಿ ಹೊಂದಿದ್ದಾರೆ. ಖಾನ್ ಅವರ ವೇಗದ ಬೌಲಿಂಗ್‌ನಲ್ಲಿ, ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರ ಒಂದು ನೋಟವು ಕಂಡುಬರುತ್ತದೆ. ಆಯ್ಕೆದಾರರು ಮೊಹ್ಸಿನ್ ಖಾನ್ ಮೇಲೆ ಸದ್ಯ ಒಂದು ಕಣ್ಣಿಟ್ಟಿದ್ದಾರೆ. ಹೀಗಿರುವಾಗ ಅವರಿಗೆ ಯಾವಾಗ ಬೇಕಾದರೂ ಟೀಂ ಇಂಡಿಯಾಗೆ ಪ್ರವೇಶ ಸಿಗಬಹುದು. ಇನ್ನು ಮೊಹ್ಸಿನ್ ಖಾನ್ ಶೀಘ್ರದಲ್ಲೇ ಭಾರತ ತಂಡವನ್ನು ಪ್ರವೇಶಿಸುವ ಮೂಲಕ ಜಸ್ಪ್ರೀತ್ ಬುಮ್ರಾ ಸ್ಥಾನವನ್ನು ಕಿತ್ತುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.


ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುವಾಗ ಮೊಹ್ಸಿನ್ ಖಾನ್ 9 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿದ್ದರು. ಈ ಬಾರಿ ಐಪಿಎಲ್ 2023 ರಲ್ಲಿ 5 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದರು. ಇನ್ನು ಒಟ್ಟಾರೆಯಾಗಿ ಮೊಹ್ಸಿನ್ ಐಪಿಎಲ್‌ ನಲ್ಲಿ 16 ರನ್‌ ಗಳಿಗೆ 4 ವಿಕೆಟ್ ಪಡೆದದ್ದು ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.


2. ಮೋಹಿತ್ ಶರ್ಮಾ: ಭಾರತದ ಡೆತ್ ಓವರ್‌ ಗಳ ಮಾರಕ ವೇಗದ ಬೌಲರ್ ಮೋಹಿತ್ ಶರ್ಮಾ ಮತ್ತೊಮ್ಮೆ ಭಾರತ ತಂಡಕ್ಕೆ ಎಂಟ್ರಿ ಕೊಡಬಹುದು. ಈ ಮೂಲಕ ಜಸ್ಪ್ರೀತ್ ಬುಮ್ರಾ ಸ್ಥಾನವನ್ನು ಕಸಿದುಕೊಳ್ಳಬಹುದು. ಮೋಹಿತ್ ಶರ್ಮಾ ಐಪಿಎಲ್ ನಲ್ಲಿ ತಾವು ತೋರಿದ ಅದ್ಭುತ ಪ್ರದರ್ಶನದಿಂದ ಎಲ್ಲರ ಹೃದಯ ಗೆದ್ದಿದ್ದಾರೆ. ಯಾರ್ಕರ್ ಎಸೆತಗಳನ್ನು ಎಸೆಯುವುದರಲ್ಲಿ ಶರ್ಮಾ ಸಖತ್ ನಿಪುಣರು. ಇನ್ನು ಐಪಿಎಲ್ 2023ರಲ್ಲಿ ಮೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿ ದ್ದು ಗುಜರಾತ್ ಟೈಟಾನ್ಸ್ ಪರ 14 ಪಂದ್ಯಗಳಲ್ಲಿ 27 ವಿಕೆಟ್ ಕಬಳಿಸಿದ್ದಾರೆ. ಅವರ ಬೌಲಿಂಗ್ ಜಸ್ಪ್ರೀತ್ ಬುಮ್ರಾ ಅವರಿಗಿಂತ ಹೆಚ್ಚು ಮಾರಕವಾಗಿದೆ ಎಂದು ದಿಗ್ಗಜರು ಹೇಳಿದ್ದುಂಟು. ಮೋಹಿತ್ ಶರ್ಮಾ 2015ರ ಅಕ್ಟೋಬರ್‌ ನಲ್ಲಿ ಟೀಂ ಇಂಡಿಯಾ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದು, ಇದೀಗ 8 ವರ್ಷಗಳ ನಂತರ ಮತ್ತೊಮ್ಮೆ ಟೀಂ ಇಂಡಿಯಾಗೆ ಮರಳಲು ಸಿದ್ಧರಾಗಿದ್ದಾರೆ. ಮೋಹಿತ್ ಶರ್ಮಾ ಭಾರತ ತಂಡದ ಪರ 26 ODI ಮತ್ತು 8 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 31 ವಿಕೆಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ: ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ


3. ಉಮ್ರಾನ್ ಮಲಿಕ್: ಪ್ರಸ್ತುತ, ಉಮ್ರಾನ್ ಮಲಿಕ್ ಭಾರತದ ಏಕೈಕ ವೇಗದ ಬೌಲರ್ ಆಗಿದ್ದು, ಗಂಟೆಗೆ 150 ಕಿಲೋಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ನಿರಂತರವಾಗಿ ಬೌಲಿಂಗ್ ಮಾಡುತ್ತಾರೆ. ಐಪಿಎಲ್‌ ನಲ್ಲಿ ಉಮ್ರಾನ್ ಮಲಿಕ್ 157.71 ಕಿಮೀ ವೇಗದಲ್ಲಿ ಒಂದು ಎಸೆತವನ್ನು ಎಸೆದಿದ್ದರು. ಮಲಿಕ್ ಅವರನ್ನು ವಿಶ್ವ ಕ್ರಿಕೆಟ್‌ ನ ಎರಡನೇ ಶೋಯೆಬ್ ಅಖ್ತರ್ ಎಂದು ಕರೆಯಲಾಗುತ್ತದೆ. ಮಲಿಕ್ ಮತ್ತೊಮ್ಮೆ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟರೆ ಜಸ್ಪ್ರೀತ್ ಬುಮ್ರಾ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ