ಕೊಹ್ಲಿ ಯಶಸ್ವಿ ನಾಯಕತ್ವದಲ್ಲಿ ಧೋನಿ, ರೋಹಿತ್ ಶರ್ಮಾ ಪಾತ್ರ ದೊಡ್ಡದು - ಗೌತಮ್ ಗಂಭೀರ್
ಕ್ರಿಕೆಟಿನ ಎಲ್ಲ ಮಾದರಿಯಲ್ಲಿ ಯಶಸ್ವಿಯಾಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಿರಂತರವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾಕಷ್ಟು ರನ್ ಗಳಿಸುತ್ತಿದ್ದಾರೆ. ಆದರೆ ಅವರ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟ್ ಆಟಗಾರರು ನಿರಂತರವಾಗಿ ಪ್ರಶ್ನಿಸುತ್ತಲೇ ಬಂದಿದ್ದಾರೆ. ಈಗ ಅಂತವರ ಸಾಲಿಗೆ ಗೌತಮ್ ಗಂಭೀರ್ ಕೂಡ ಸೇರಿದ್ದಾರೆ.
ನವದೆಹಲಿ: ಕ್ರಿಕೆಟಿನ ಎಲ್ಲ ಮಾದರಿಯಲ್ಲಿ ಯಶಸ್ವಿಯಾಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಿರಂತರವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾಕಷ್ಟು ರನ್ ಗಳಿಸುತ್ತಿದ್ದಾರೆ. ಆದರೆ ಅವರ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟ್ ಆಟಗಾರರು ನಿರಂತರವಾಗಿ ಪ್ರಶ್ನಿಸುತ್ತಲೇ ಬಂದಿದ್ದಾರೆ. ಈಗ ಅಂತವರ ಸಾಲಿಗೆ ಗೌತಮ್ ಗಂಭೀರ್ ಕೂಡ ಸೇರಿದ್ದಾರೆ.
ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತು ರೋಹಿತ್ ಶರ್ಮಾ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊಹ್ಲಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದ್ದಾರೆ. 'ಕೊಹ್ಲಿ ಇನ್ನೂ ಬಹಳ ದೂರ ಹೋಗಬೇಕಾಗಿದೆ. ಕಳೆದ ವಿಶ್ವಕಪ್‌ನಲ್ಲಿ ಕೊಹ್ಲಿ ಉತ್ತಮವಾಗಿ ನಿಭಾಯಿಸಿದರು. ಆದರೆ ಅವರಿನ್ನು ಬಹಳ ದೂರ ಸಾಗಬೇಕಿದೆ. ಅವರು ಉತ್ತಮ ನಾಯಕನಾಗಲು ಪ್ರಮುಖ ಕಾರಣ ರೋಹಿತ್ ಶರ್ಮಾ ಮತ್ತು ಎಂ.ಎಸ್.ಧೋನಿ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಎಂಎಸ್ ಧೋನಿ ಎರಡು ವಿಶ್ವಕಪ್ ಗೆದ್ದ ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟರೆ, ರೋಹಿತ್ ಅತ್ಯಂತ ಯಶಸ್ವಿ ಫ್ರ್ಯಾಂಚೈಸ್ ನಾಯಕನಾಗಿ ಮುಂಬೈ ಇಂಡಿಯನ್ಸ್ ಅನ್ನು ಅಭೂತಪೂರ್ವ ನಾಲ್ಕು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿಗಳಿಗೆ ಮುನ್ನಡೆಸಿದ್ದಾರೆ.
ಐಪಿಎಲ್‌ನಲ್ಲಿ ಕೊಹ್ಲಿಯ ದಾಖಲೆಯನ್ನು ಉಲ್ಲೇಖಿಸಿ ಮಾತನಾಡಿದ ಗಂಭೀರ್ 'ನಿಮ್ಮಲ್ಲಿ ಹಲವಾರು ಪ್ರತಿಭಾವಂತ ಆಟಗಾರರ ಸೇವೆಗಳನ್ನು ಹೊಂದಿರದಿದ್ದಾಗ ನಾಯಕನ ಪರಿಣಾಮಕಾರಿತ್ವವನ್ನು ಪರೀಕ್ಷಿಸಲಾಗುತ್ತದೆ ಎಂದು ಹೇಳಿದರು. 'ನೀವು ಫ್ರ್ಯಾಂಚೈಸ್ ನ್ನು ಮುನ್ನಡೆಸುತ್ತಿರುವಾಗ, ಇತರ ಆಟಗಾರರು ನಿಮ್ಮನ್ನು ಬೆಂಬಲಿಸದಿದ್ದಾಗ ನಾಯಕತ್ವದ ರುಜುವಾತುಗಳನ್ನು ಗಮನಿಸಬಹುದು' ಎಂದು ಗಂಭೀರ್ ಹೇಳಿದರು.
"ನಾನು ಈ ಬಗ್ಗೆ ಮಾತನಾಡುವಾಗಲೆಲ್ಲಾ ನಾನು ಪ್ರಾಮಾಣಿಕನಾಗಿದ್ದೇನೆ. ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಸಾಧಿಸಿರುವುದನ್ನು ನೋಡಿ, ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಗಾಗಿ ಧೋನಿ ಸಾಧಿಸಿರುವುದನ್ನು ನೋಡಿ, ಇದನ್ನು ನೀವು ಆರ್ಸಿಬಿಗೆ ಹೋಲಿಸಿದರೆ, ಫಲಿತಾಂಶಗಳು ಎಲ್ಲರಿಗೂ ಸ್ಪಷ್ಟವಾಗಿ ಕಾಣುತ್ತವೆ" ಎಂದು ಗೌತಮ್ ಗಂಭೀರ್ ಹೇಳಿದರು.