ತಾಳ್ಮೆಯ ಪ್ರತೀಕ ಧೋನಿಗೆ ಈ ವ್ಯಕ್ತಿಯನ್ನ ಕಂಡ್ರೆ ಆಗಲ್ಲ…! ಬಾಲ್ಯದ ದ್ವೇಷಕ್ಕೆ ‘ರಕ್ತಸಂಬಂಧ’ವನ್ನೇ ದೂರವಿಟ್ಟರು ಮಾಹಿ
MS Dhoni Brother Name: ನರೇಂದ್ರ ಸಿಂಗ್ ಧೋನಿ, ಮಹೇಂದ್ರ ಸಿಂಗ್ ಧೋನಿ ಅವರ ಅಣ್ಣ, ಮಾಹಿಗಿಂತ 10 ವರ್ಷ ದೊಡ್ಡವರು. ಕುಮಾವಾನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪೂರೈಸಿದ್ದಾರೆ. ನರೇಂದ್ರ ಅವರು ಸದ್ಯ ರಾಂಚಿ ಬಿಟ್ಟು, ತಮ್ಮ ಪೂರ್ವಜರ ಹಳ್ಳಿಯಾದ ಉತ್ತರಾಖಂಡದಲ್ಲಿ ನೆಲೆಸಿದ್ದಾರೆ.
MS Dhoni Brother Name: ಮಹೇಂದ್ರ ಸಿಂಗ್ ಧೋನಿ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ! ಕ್ರಿಕೆಟ್ ಲೋಕದಲ್ಲಿ ಗೆಲುವಿನ ಹಾದಿಯಲ್ಲೇ ನಡೆದ, ಅನೇಕ ದಾಖಲೆಗಳನ್ನು ಬರೆದ ಏಕೈಕ ನಾಯಕ ಎಂದರೆ ತಪ್ಪಾಗಲ್ಲ. ಧೋನಿ ಅವರ ತಾಳ್ಮೆ, ಪ್ರಶಾಂತತೆ ಅದೆಷ್ಟೋ ಜನರಿಗೆ ಮಾದರಿಯಾಗಿದೆ. ಆದರೆ ಅವರ ಸಹೋದರನನ್ನು ಕಂಡರೆ ಧೋನಿಗೆ ಇಷ್ಟವಿಲ್ಲವಂತೆ. ಇವರ ಬಯೋಪಿಕ್ ನಲ್ಲೂ ತಮ್ಮ ಅಣ್ಣನ ಬಗ್ಗೆ ಹೇಳಿರಲಿಲ್ಲ.
ಇದನ್ನೂ ಓದಿ: ಎರಡು ರಾಜಯೋಗಗಳೊಂದಿಗೆ ಈ ರಾಶಿಯವರ ಬದುಕಾಗುವುದು ಬಂಗಾರ! ಸುಖ ಸಂಪತ್ತಿಗೆ ಕೊರತೆಯಿಲ್ಲದೆ ಕಾಯುವನು ಶನಿ ಮಹಾತ್ಮ
ಧೋನಿ ಅವರ ಜೀವನಚರಿತ್ರೆ ಸಿನಿಮಾ ‘MS Dhoni: The Untold Story’ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಈ ಸಿನಿಮಾದಲ್ಲಿ ಅವರ ಸಹೋದರನ ಬಗ್ಗೆ ಎಲ್ಲಿಯೂ ಹೇಳಿರಲಿಲ್ಲ.
ನರೇಂದ್ರ ಸಿಂಗ್ ಧೋನಿ, ಮಹೇಂದ್ರ ಸಿಂಗ್ ಧೋನಿ ಅವರ ಅಣ್ಣ, ಮಾಹಿಗಿಂತ 10 ವರ್ಷ ದೊಡ್ಡವರು. ಕುಮಾವಾನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪೂರೈಸಿದ್ದಾರೆ. ನರೇಂದ್ರ ಅವರು ಸದ್ಯ ರಾಂಚಿ ಬಿಟ್ಟು, ತಮ್ಮ ಪೂರ್ವಜರ ಹಳ್ಳಿಯಾದ ಉತ್ತರಾಖಂಡದಲ್ಲಿ ನೆಲೆಸಿದ್ದಾರೆ.
ನರೇಂದ್ರ ಧೋನಿ 2007 ನವೆಂಬರ್ 21ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಇವರು ಧೋನಿಯಂತೆ ಕ್ರೀಡೆ ಅಥವಾ ಕೃಷಿ ಮಾಡುತ್ತಿಲ್ಲ, ಬದಲಾಗಿ ರಾಜಕೀಯದಲ್ಲಿದ್ದಾರೆ. 2013 ರಲ್ಲಿ ಅವರು ಸಮಾಜವಾದಿ ಪಕ್ಷಕ್ಕೆ ಸೇರಿದ್ದು, ಅದಕ್ಕೂ ಮೊದಲು ಅವರು ಬಿಜೆಪಿಯಲ್ಲಿದ್ದರು.
ಮಾಹಿಯ ಜೀವನಚರಿತ್ರೆಯಲ್ಲಿ ಅವರು ಎಲ್ಲಿಯೂ ತಮ್ಮ ಸಹೋದರನ ಬಗ್ಗೆ ಉಲ್ಲೇಖಿಸಲಿಲ್ಲ. ಈ ಬಗ್ಗೆ ಮಾತನಾಡಿದ ನರೇಂದ್ರ ಅವರು, “ನಾನು ಏನು ಹೇಳಬೇಕು? ಇದು ನಿರ್ದೇಶಕರ ಇಚ್ಛೆ. ಮಾಹಿಯ ಜೀವನದಲ್ಲಿ ನಾನು ಹೆಚ್ಚು ಕೊಡುಗೆ ನೀಡಿಲ್ಲ. ಈ ಚಿತ್ರವು ಮಾಹಿ ಅವರ ಜೀವನದ ಬಗ್ಗೆ ಹೊರತು, ಕುಟುಂಬದ ಬಗ್ಗೆ ಅಲ್ಲ” ಎಂದು ಹೇಳಿದ್ದಾರೆ.
ನರೇಂದ್ರ ಧೋನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇಲ್ಲದಿದ್ದರೂ ಸಹ ಅವರ ಬಗ್ಗೆ ತಿಳಿದುಕೊಳ್ಳಲು ಅನೇಕರು ಕುತೂಹಲ ಪಡುತ್ತಾರೆ. ಇದೇ ಕಾರಣದಿಂದ ಅವರ ಫೋಟೋವೊಂದನ್ನು ಹುಡುಕಿ ತೆಗೆದ ನೆಟ್ಟಿಗನೊಬ್ಬ ಅದನ್ನು ವೈರಲ್ ಮಾಡಿದ್ದಾನೆ. ಆ ಫೋಟೋದಲ್ಲಿ ನರೇಂದ್ರ ಅವರ ಜೊತೆ ಧೋನಿ ಮಗಳಿರುವುದು ಕಾಣಿಸುತ್ತಿದೆ.
ಇದನ್ನೂ ಓದಿ: WTC ಫೈನಲ್ ಮಧ್ಯೆ ಟೀಂ ಇಂಡಿಯಾದ ಸ್ಟಾರ್ ಆಟಗಾರನಿಂದ ವಂಚನೆ!
ಕೆಲವೊಂದು ಮೂಲಗಳ ಪ್ರಕಾರ ಧೋನಿ ಸಹೋದರರ ಮಧ್ಯೆ ವೈಮನಸ್ಸಿದೆ. ಮಾಹಿಗೆ ನರೇಂದ್ರ ಅವರೆಂದರೆ ಇಷ್ಟವಿಲ್ಲ, ಬಾಲ್ಯದಿಂದಲೂ ದ್ವೇಷವನ್ನು ಸಾಧಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ