ನವದೆಹಲಿ: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಈಗ ಭಾರತದ ಎಂ.ಎಸ್ ಧೋನಿಯವರನ್ನು ಕಂಪ್ಯೂಟರ್ ಗಿಂತ ವೇಗ ಎಂದು ಕರೆದಿದ್ದಾರೆ. 


COMMERCIAL BREAK
SCROLL TO CONTINUE READING

ತಮ್ಮ ಪಂದ್ಯದ ಫಲಿತಾಂಶದ ನಂತರ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ಮಾಜಿ ಪಾಕಿಸ್ತಾನದ ಆಟಗಾರ ಶೋಯಬ್ ಅಖ್ತರ್ " ಕ್ರಿಕೆಟ್ ಕೆಲವು ಆಟದ ಬಗೆಗಳಿಗೆ ಕಂಪ್ಯೂಟರ್ ಹೇಳುತ್ತದೆ, ಆದರೆ ಎಂ.ಎಸ್. ಧೋನಿ ಅದಕ್ಕಿಂತ ವೇಗವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  


ಇದೆ ವೇಳೆ ಕೆ.ಎಲ್.ರಾಹುಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಖ್ತರ್ "ನಾನು ಕೆ.ಎಲ್.ರಾಹುಲ್ ನನ್ನು ಒಬ್ಬ ಕ್ರಿಕೆಟ್ ಆಟಗಾರನಾಗಿ ಇಷ್ಟಪಡುತ್ತೇನೆ.ಕೆ.ಎಲ್. ರಾಹುಲ್ ವಿರಾಟ್ ಕೊಹ್ಲಿ ಅವರ ಹೆಜ್ಜೆಯನ್ನು ಅನುಸರಿಸಿ ಭವಿಷ್ಯದಲ್ಲಿ ಅವರು ಅದ್ಭುತ ಬ್ಯಾಟ್ಸ್ಮನ್ ಆಗಬಹುದು ಎಂದು ನಾನು ಭಾವಿಸುತ್ತೇನೆ. "ಎಂದು ಅಭಿಪ್ರಾಯಪಟ್ಟಿದ್ದಾರೆ. 


ಭಾರತ ತಂಡವು ಲಂಡನ್ ಓವೆಲ್ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಇದಾದ ನಂತರ ಜೂನ್ 16 ರಂದು ಮ್ಯಾಂಚೆಸ್ಟರ್ ಓಲ್ಡ್ ಟ್ರ್ಯಾಫೋರ್ಡ್ನಲ್ಲಿ ಪಾಕಿಸ್ತಾನ ತಂಡದ ಎದುರು ಆಡಲಿದೆ.