MS Dhoni : ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಟ ದ್ವಿಶತಕ ಸಾಧನೆ ಮಾಡಿದ ಎಂಎಸ್ ಧೋನಿ!
ಧೋನಿಯ ಈ ಸಾಧನೆಯಿಂದ ಸ್ಟಾರ್ ಕ್ರಿಕೆಟಿಗರನ್ನು ಹಿಂದಿಕ್ಕಿದ್ದಾರೆ. ಆ ವಿಶಿಷ್ಟ ದ್ವಿಶತಕ ಯಾವುದು, ಆ ವ್ಯಕ್ತಿಗಳು ಯಾರು? ಇಲ್ಲಿದೆ ಮಾಹಿತಿ..
MS Dhoni : ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಮಹೇಂದ್ರ ಸಿಂಗ್ ಧೋನಿ ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಟ ದ್ವಿಶತಕದ ಸಾಧನೆಯನ್ನು ಪೂರೈಸಿದ್ದಾರೆ. ಧೋನಿಯ ಈ ಸಾಧನೆಯಿಂದ ಸ್ಟಾರ್ ಕ್ರಿಕೆಟಿಗರನ್ನು ಹಿಂದಿಕ್ಕಿದ್ದಾರೆ. ಆ ವಿಶಿಷ್ಟ ದ್ವಿಶತಕ ಯಾವುದು, ಆ ವ್ಯಕ್ತಿಗಳು ಯಾರು? ಇಲ್ಲಿದೆ ಮಾಹಿತಿ..
ವಿಶಿಷ್ಟ ದ್ವಿಶತಕ ಪೂರೈಸಿದ ಧೋನಿ
ಎಂಎಸ್ ಧೋನಿ ಓವಲ್ ಟಿ20 ಕ್ರಿಕೆಟ್‌ನಲ್ಲಿ 200 ಕ್ಯಾಚ್‌ಗಳನ್ನು ಪಡೆದ ಮೊದಲ ವಿಕೆಟ್‌ಕೀಪರ್ ಆಗಿದ್ದಾರೆ. ಭಾನುವಾರ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಎರಡು ಕ್ಯಾಚ್‌ಗಳನ್ನು ಪಡೆಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ತಮ್ಮ ಹೆಸರಿನಲ್ಲಿ ಈ ದಾಖಲೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : CSK Team : ಫಾರ್ಮ್‌ಗೆ ಮರಳಿ ಧೋನಿಯ ಅತ್ಯಂತ ವಿಶ್ವಾಸಾರ್ಹ ಆಲ್‌ರೌಂಡರ್!
ಸ್ಟಾರ್ ಕ್ರಿಕೆಟಿಗರನ್ನು ಹಿಂದಿಕ್ಕಿದ ಧೋನಿ
ಈ ದಾಖಲೆಯನ್ನು ಪೂರ್ಣಗೊಳಿಸಲು ಮಹೇಂದ್ರ ಸಿಂಗ್ ಧೋನಿ ರೋವ್‌ಮನ್ ಪೊವೆಲ್ ಮತ್ತು ಶಾರ್ದೂಲ್ ಠಾಕೂರ್ ಅವರ ಕ್ಯಾಚ್‌ಗಳನ್ನು ಪಡೆದರು. ಧೋನಿ ಈಗ 347 ಟಿ20 ಪಂದ್ಯಗಳಲ್ಲಿ 200 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಹಾಗೆ, ಧೋನಿ 16 ವರ್ಷಗಳಿಂದ ಟಿ 20 ಕ್ರಿಕೆಟ್ ನಲ್ಲಿ ಆಡುತ್ತಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ವಿಕೆಟ್‌ಕೀಪರ್
1. ಮಹೇಂದ್ರ ಸಿಂಗ್ ಧೋನಿ - 200 ಕ್ಯಾಚ್‌ಗಳು
2. ದಿನೇಶ್ ಕಾರ್ತಿಕ್ - 182 ಕ್ಯಾಚ್‌ಗಳು
3. ಕಮ್ರಾನ್ ಅಕ್ಮಲ್ - 172 ಕ್ಯಾಚ್‌ಗಳು
4. ಕ್ವಿಂಟನ್ ಡಿ ಕಾಕ್ - 166 ಕ್ಯಾಚ್‌ಗಳು
5. ದಿನೇಶ್ ರಾಮ್ದಿನ್ - 150 ಕ್ಯಾಚ್‌ಗಳು
ಇದನ್ನೂ ಓದಿ : KKR vs MI: ಕೊಲ್ಕತ್ತಾ-ಮುಂಬೈ ನಡುವೆ ಹಣಾಹಣಿ: ಪ್ಲೇ ಆಫ್‌ಗೆ ಪ್ರವೇಶಿಸಲು ನೈಟ್ ರೈಡರ್ಸ್ ಹೋರಾಟ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.