MS Dhoni favorite bowler- batsman: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಪ್ರಸ್ತುತ ನೆಚ್ಚಿನ ಆಟಗಾರರು ಯಾರೆಂಬುದನ್ನು ರಿವೀಲ್‌ ಮಾಡಿದ್ದಾರೆ.  ಭಾರತದ ಚಾಂಪಿಯನ್ ಜಸ್ಪ್ರೀತ್ ಬುಮ್ರಾ ತನ್ನ ನೆಚ್ಚಿನ ಬೌಲರ್‌ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ನೆಚ್ಚಿನ ಬ್ಯಾಟ್ಸ್‌ʼಮನ್‌ ಆಯ್ಕೆ ಮಾಡಲು ಕಷ್ಟ ಪಟ್ಟ ಧೋನಿ, ಇದು ಕಠಿಣ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗೆಳತಿಯರಾಗಿದ್ದ ಅನುಷ್ಕಾ ಶರ್ಮಾ- ರಿತಿಕಾ ಸಜ್ದೇಹ್‌ ಮಧ್ಯೆ ಜಗಳ!? ಕೊಹ್ಲಿ-ರೋಹಿತ್‌ ಮಡದಿಯರ ವೈಮನಸ್ಸಿಗೆ ಕಾರಣ...


"ಬುಮ್ರಾ ಇರುವುದರಿಂದ ನನ್ನ ನೆಚ್ಚಿನ ಬೌಲರ್ ಅನ್ನು ಆಯ್ಕೆ ಮಾಡುವುದು ಸುಲಭ. ನಮ್ಮಲ್ಲಿ ಅನೇಕ ಉತ್ತಮ ಬ್ಯಾಟ್ಸ್‌ಮನ್‌ʼಗಳು ಇರುವುದರಿಂದ ಬ್ಯಾಟ್ಸ್‌ಮನ್ ಅನ್ನು ಆಯ್ಕೆ ಮಾಡುವುದು ಕಷ್ಟ. ಆದರೆ ಇದರ ಅರ್ಥ ಬೌಲರ್‌ʼಗಳು ಉತ್ತಮವಾಗಿಲ್ಲ ಎಂದಲ್ಲ" ಎಂದು ಹೇಳಿದ್ದಾರೆ.


"ಬ್ಯಾಟಿಂಗ್ ಮಾಡುವವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟ, ಏಕೆಂದರೆ ನಾನು ಬ್ಯಾಟಿಂಗ್ ಮಾಡುವವರನ್ನು ನೋಡುತ್ತೇನೆ, ಅತ್ಯುತ್ತಮವಾಗಿ ಕಾಣುತ್ತಾರೆ. ಒಬ್ಬರಿಗಿಂತ ಒಬ್ಬರು ಅತ್ಯುತ್ತಮರೇ" ಎಂದು ಧೋನಿ ಹೇಳಿದರು.


ಇದನ್ನೂ ಓದಿ: "ಇದೇ ಸತ್ಯ.. ಆದ್ರೆ ಹೇಳುವ ಧೈರ್ಯ ನನಗಿಲ್ಲ": ಮಗ-ಸೊಸೆ ಡಿವೋರ್ಸ್‌ ವದಂತಿ ಮಧ್ಯೆ ಕಣ್ಣೀರಿಡುತ್ತಾ ಅಮಿತಾಬ್‌ ಬಚ್ಚನ್‌ ಹೇಳಿದ್ದೇನು?


ಇನ್ನು ಜಸ್ಪ್ರೀತ್ ಬುಮ್ರಾ, ಎಂಎಸ್ ಧೋನಿ ನಾಯಕತ್ವದಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅಂದಿನಿಂದ ಗಮನಾರ್ಹ ಆಟವನ್ನು ಆಡಿರುವ ಬುಮ್ರಾ, ಜೂನ್ 2024ರಲ್ಲಿ ನಡೆದ T20 ವಿಶ್ವಕಪ್‌ʼನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ